ವೇಷ ತೊಟ್ಟು ಪ್ರಧಾನಿ ಮೋದಿ ಕಾಲೆಳೆದ ನಟ ಪ್ರಕಾಶ್ ರಾಜ್…

 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಕಟು ವಿರೋಧಿಗಳಾಗಿರುವ ನಟ ಪ್ರಕಾಶ್ ರಾಜ್ ಅವರು ತಮಗೆ ಅನಿಸಿದ್ದನ್ನು ಮುಕ್ತವಾಗಿ ಹೇಳುತ್ತಾರೆ.

ಅದರಲ್ಲೂ ಮೋದಿ ಅವರ ಬಗ್ಗೆ ಸದಾ ಒಂದು ಕಣ್ಣಿಟ್ಟಿರುವ ಪ್ರಕಾಶ್ ರಾಜ್ ಸಮಯ ಸಿಕ್ಕಾಗಲೆಲ್ಲಾ ಅವರನ್ನು ವಿರೋಧಿಸಿ ಕಾಲೆಳೆಯುವ ಟ್ವೀಟ್‌ಗಳನ್ನು ಮಾಡುತ್ತಾ ಇರುತ್ತಾರೆ.

ಇತ್ತೀಚೆಗೆ ಗಿರಿಧಾಮವೊಂದಕ್ಕೆ ಭೇಟಿ ನೀಡಿದ್ದ ಪ್ರಕಾಶ್ ರಾಜ್ ಅಲ್ಲಿಯ ಆಕರ್ಷಕ ವೇಷ ತೊಟ್ಟು ಮೋದಿ ಅವರನ್ನು ಉದ್ದೇಶಿಸಿ ಪರೋಕ್ಷವಾಗಿ ಕಿಚಾಯಿಸಿದ್ದಾರೆ.

‘ನೋಡಿ, ಇದು ನಾನು ನಮ್ಮ ಸರ್ವೋಚ್ಚ ನಾಯಕನಿಂದ ಪ್ರಭಾವಿತನಾಗಿ ಈ ವೇಷ ಹಾಕಿಕೊಂಡಿದ್ದೇನೆ. ಸ್ನೇಹಿತರೇ ನೀವು ಏಕೆ ಇದನ್ನು ಪ್ರಯತ್ನಿಸಬಾರದು?’ ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಕಾಲೆಳದಿದ್ದಾರೆ. ಇದಕ್ಕೆ ಪರ ವಿರೋಧ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಅವರು ದೇಶ-ವಿದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿಶೇಷ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಇದು ಕೂಡ ಮೋದಿ ವಿರೋದಿಗಳಿಗೆ ಆಗಾಗ ಆಹಾರವಾಗುವುದನ್ನು ನಾವು ನೋಡುತ್ತಿರುತ್ತೇವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022: ಗುಜರಾತ್​​ ಮೇಲೆ ಗೆಲ್ಲಲು ಬೆಂಗಳೂರು ಪ್ಲಾನ್​​, ಲೆಕ್ಕಾಚಾರದಲ್ಲೇ ಇದೆ ಆರ್​​ಸಿಬಿ ಭವಿಷ್ಯ..

Thu May 19 , 2022
  ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಲೆಕ್ಕಾಚಾರ ತುಂಬಾ ಸಿಂಪಲ್​​. ಗುಜರಾತ್​​ ಟೈಟಾನ್ಸ್​​ ವಿರುದ್ಧ ಗೆಲುವು ಮತ್ತು ಶನಿವಾರ ಮುಂಬೈ ಇಂಡಿಯನ್ಸ್​​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​​ ಸೋಲುವುದು. ಹೀಗಾದರೆ ಮಾತ್ರ ಆರ್​​ಸಿಬಿ ಪ್ಲೇ-ಆಫ್​​ ತಲುಪುತ್ತದೆ. ಹೀಗಾಗಿ ವಾಂಖೆಡೆಯಲ್ಲಿ ನಡೆಯುವ ಈ ಪಂದ್ಯ ಕುತೂಹಲದ ಕೇಂದ್ರಬಿಂದುವಾಗಿದೆ. ಲೆಕ್ಕಾಚಾರದಷ್ಟು ಸುಲಭವಾಗಿ ಐಪಿಎಲ್​​ 2022ರ ಅಗ್ರಸ್ಥಾನಿ ಗುಜರಾತ್​​ ಟೈಟಾನ್ಸ್​​​ ತಂಡವನ್ನು ಸೋಲಿಸಲು ಸಾಧ್ಯವಿಲ್ಲ. ಫಾಫ್​​ ಡು ಪ್ಲೆಸಿಸ್​​, ವಿರಾಟ್​​ ಕೊಹ್ಲಿ ಮತ್ತು ಗ್ಲೆನ್​​ ಮ್ಯಾಕ್ಸ್​​​ ಪೈಕಿ […]

Advertisement

Wordpress Social Share Plugin powered by Ultimatelysocial