ಪ್ರಿಯಾಂಕಾ ಚೋಪ್ರಾ ಮುಖಕ್ಕೆ ಅಂಥದ್ದೇನಾಯ್ತು?

ಬಹುಭಾಷಾ ತಾರೆ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಹಾಗೂ ಹಾಲಿವುಡ್‌ನ ಬಹುಬೇಡಿಕೆಯ ನಟಿಯಾಗಿದ್ದಾರೆ. ಸದ್ಯ ಈಗ ಹಾಲಿವುಡ್‌ ಸಿನಿಮಾಗಳಲ್ಲಿ ಹೆಚ್ಚು ಸಕ್ರಿಯರಾಗಿರುವ ಅವರು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುತ್ತಾರೆ. ಆಗಾಗ ಹೊಸ ಹೊಸ ಪೋಟೊಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.

ಸದ್ಯ ಪ್ರಿಯಾಂಕಾ ಚೋಪ್ರಾ ಈಗ ಹಂಚಿಕೊಂಡಿರುವ ಪೋಟೊವೊಂದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತ ‘ಸಿಟಾಡೆಲ್‌’ನ ಚಿತ್ರೀಕರಣದಲ್ಲಿ ಪ್ರಿಯಾಂಕಾ ಬ್ಯುಸಿಯಾಗಿದ್ದಾರೆ. ಸದ್ಯ ಆ ಚಿತ್ರೀಕರಣದ ಸೆಟ್‌ನಲ್ಲಿರುವ ಪೋಟೊವೊಂದನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೊ ನೋಡಿದ ಅಭಿಮಾನಿಗಳು ಒಂದು ಕ್ಷಣ ಶಾಕ್‌ ಆಗಿದ್ದಾರೆ.

ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಪೋಟೊದಲ್ಲಿ ಮುಖಕ್ಕೆ ಬಲವಾದ ಪೆಟ್ಟುಬಿದ್ದಿದ್ದು, ರಕ್ತ ಸಿಕ್ತವಾಗಿದೆ. ಅಲ್ಲದೆ ಈ ಪೋಟೊಗೆ ನಟಿ ಪ್ರಿಯಾಂಕಾ ಚೋಪ್ರಾ ನಿಮಗೂ ಇಂದೂ ಕಠಿಣ ದಿನವಾಗಿದೆಯೇ ಎಂದು ಕ್ಯಾಪ್ಚನ್ ನೀಡಿ. ಹ್ಯಾಶ್‌ ಟ್ಯಾಗ್‌ನಲ್ಲಿ ಕಲಾವಿದರ ಜೀವನ ಎಂದು ಬರೆದುಕೊಂಡಿದ್ದಾರೆ.

ನಟಿಯ ಈ ಪೋಟೊ ನೋಡಿದ ನೆಟ್ಟಿಗರು ನಟಿಗೆ ನಿಜವಾಗಿಯೂ ಗಾಯಗಳಾಗಿವೆಯೇ? ಈಗ ಆರೋಗ್ಯ ಹೇಗಿದೆ? ಎಂದು ಹಲವರು ಕಮೆಂಟ್‌ ಮಾಡಿ ವಿಚಾರಿಸುತ್ತಿದ್ದಾರೆ. ಇನ್ನು ಕೆಲವರು ಇದು ಸಿನಿಮಾ ಚಿತ್ರೀಕರಣಕ್ಕೆ ಮಾಡಿರುವ ಮೇಕಪ್ ಅಷ್ಟೇ ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ನಟಿ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯಿಸದೇ ಸುಮ್ಮನೆ ಇದ್ದಾರೆ. ಒಟ್ಟಿನಲ್ಲಿ ಪ್ರಿಯಾಂಕಾ ಹಂಚಿಕೊಂಡ ಈ ಪೋಟೊ ಮಾತ್ರ ಆನ್‌ಲೈನ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

‘ಸಿಟಾಡೆಲ್’ ಸೈನ್ಸ್ ಫಿಕ್ಷನ್ ಸೀರೀಸ್ ಆಗಿದ್ದು, ಪ್ರಖ್ಯಾತ ರಸ್ಸೋ ಬ್ರದರ್ಸ್ ಅಮೆಜಾನ್ ಪ್ರೈಮ್‌ಗಾಗಿ ಈ ಸಿನಿಮಾವನ್ನು ತಯಾರಿಸುತ್ತಿದ್ದಾರೆ. ಇದರಲ್ಲಿ ರಿಚರ್ಡ್ ಮ್ಯಾಡೆನ್ ಕೂಡ ಅಭಿನಯಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಪ್ರಿಯಾಂಕ ಸಿನಿಮಾದ ಒಂದು ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು.

ಜನವರಿಯಲ್ಲಿ ಮಗಳು ಮಾಲ್ತಿ ಮೇರಿ ಚೋಪ್ರಾ ಜನನದ ಕಾರಣದಿಂದ ನಟಿ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದ್ದರು. ಇತ್ತೀಚಿಗೆ ಪುತ್ರಿಯ ಹೆಸರನ್ನು ರಿವೀಲ್ ಮಾಡಿದ್ದ ನಿಕ್-ಪ್ರಿಯಾಂಕಾ ದಂಪತಿ ಮಗುವಿನ ಜನನದ ಸಂದರ್ಭದ ಕಷ್ಟದ ದಿನಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯ್ ದೇವರಕೊಂಡ ವಿರುದ್ಧ ಫುಲ್ ಗರಂ ಆದ ನಟ ಪವನ್ ಕಲ್ಯಾಣ್ ಫ್ಯಾನ್ಸ್...

Thu May 19 , 2022
ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ `ಖುಷಿ’ ಚಿತ್ರದ ಫಸ್ಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಈಗ ವಿಜಯ್ ನಟನೆಯ `ಖುಷಿ’ ಚಿತ್ರದ ವಿಚಾರವಾಗಿ ಪವನ್ ಕಲ್ಯಾಣ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಟಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರೋ ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ `ಖುಷಿ’ ಸಿನಿಮಾ ಮೇಲೆ ಪವನ್ ಕಲ್ಯಾಣ್ ಫ್ಯಾನ್ಸ್ ಮುನಿಸಿಕೊಂಡಿದ್ದಾರೆ. ವಿಜಯ್ ಅಭಿನಯದ `ಖುಷಿ’ ಟೈಟಲ್ ಅನೌನ್ಸ್ ಆಗುತ್ತಿದ್ದಂತೆ ಪವನ್ ಕಲ್ಯಾಣ […]

Advertisement

Wordpress Social Share Plugin powered by Ultimatelysocial