ವಿಜಯ್ ದೇವರಕೊಂಡ ವಿರುದ್ಧ ಫುಲ್ ಗರಂ ಆದ ನಟ ಪವನ್ ಕಲ್ಯಾಣ್ ಫ್ಯಾನ್ಸ್…

ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ `ಖುಷಿ’ ಚಿತ್ರದ ಫಸ್ಟ್ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಈಗ ವಿಜಯ್ ನಟನೆಯ `ಖುಷಿ’ ಚಿತ್ರದ ವಿಚಾರವಾಗಿ ಪವನ್ ಕಲ್ಯಾಣ ಫ್ಯಾನ್ಸ್ ಫುಲ್ ಗರಂ ಆಗಿದ್ದಾರೆ. ಟಾಲಿವುಡ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿರೋ ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ `ಖುಷಿ’ ಸಿನಿಮಾ ಮೇಲೆ ಪವನ್ ಕಲ್ಯಾಣ್ ಫ್ಯಾನ್ಸ್ ಮುನಿಸಿಕೊಂಡಿದ್ದಾರೆ.

ವಿಜಯ್ ಅಭಿನಯದ `ಖುಷಿ’ ಟೈಟಲ್ ಅನೌನ್ಸ್ ಆಗುತ್ತಿದ್ದಂತೆ ಪವನ್ ಕಲ್ಯಾಣ ಫ್ಯಾನ್ಸ್ ಮುನಿಸಿಕೊಂಡಿದ್ದಾರೆ.

ಪವರ್‌ಸ್ಟಾರ್ ಪವನ್ ಕಲ್ಯಾಣ್ ಮತ್ತು ಭೂಮಿಕಾ ಜೋಡಿಯಾಗಿ ನಟಿಸಿದ ಚಿತ್ರ `ಖುಷಿ’ ಚಿತ್ರ ಮತ್ತೆ 20 ವರ್ಷಗಳ ನಂತರ ತೆರೆಗೆ ಬರುತ್ತಿದೆ. ಹಳೆಯ ಚಿತ್ರದ ಫೀಲ್ ಅನ್ನು ಈಗೀನ ವಿಜಯ್‌ ನಟನೆಯ ಚಿತ್ರ ಹಾಳು ಮಾಡುತ್ತಿದೆ ಎಂದು ಪವರ್ ಸ್ಟಾರ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. `ಖುಷಿ’ ಚಿತ್ರದಲ್ಲಿ ಪವನ್ ಮತ್ತು ಭೂಮಿಕಾ ಜೋಡಿ ಫ್ಯಾನ್ಸ್‌ಗೆ ಸಖತ್ ಮೋಡಿ ಮಾಡಿತ್ತು. ಪವನ್ ಕಲ್ಯಾಣ್ ಅಂದ್ರೆ ಖುಷಿ, ಖುಷಿ ಅಂದ್ರೆ ಪವನ್ ಕಲ್ಯಾಣ್ ಹೀಗಿರುವಾಗ ಈ ಚಿತ್ರದ ಟೈಟಲ್ ಅನ್ನು

ವಿಜಯ್ ದೇವರಕೊಂಡ ಚಿತ್ರದಲ್ಲಿ ಮರುಬಳಕೆ ಮಾಡಿಕೊಂಡಿರುವುದರ ಬಗ್ಗೆ ಪವನ್ ಕಲ್ಯಾಣ್‌ ಫ್ಯಾನ್ಸ್‌ ಫುಲ್ ಗರಂ ಆಗಿದ್ದಾರೆ. ಪವನ್ ಕಲ್ಯಾಣ್ ತಿರುಗಿ ಬೀಳುತ್ತಿದ್ದಂತೆ ವಿಜಯ್ ಪರವಾಗಿ ದೇವರಕೊಂಡ ಫ್ಯಾನ್ಸ್ ಮಾತನಾಡಿದ್ದಾರೆ. ಟೈಟಲ್ ಅನ್ನು ಮರುಬಳಕೆ ಮಾಡುವುದರಲ್ಲಿ ತಪ್ಪೇನಿಲ್ಲ. ಈ ರೀತಿ ಹಲವು ಬಾರಿ ನಡೆದಿದೆ ಅಂತಾ ನೆಚ್ಚಿನ ನಟನಿಗೆ ಫ್ಯಾನ್ಸ್ ಸಾಥ್ ನೀಡಿದ್ದಾರೆ. ಇನ್ನು ಪವನ್ ಕಲ್ಯಾಣ್ ನಟನೆಯ `ಖುಷಿ’ ಚಿತ್ರದ ಮುಂದೆ ವಿಜಯ್ ನಟನೆಯ `ಖುಷಿ’ ಸಿನಿಮಾ ಹೇಗೆ ಮೋಡಿ ಮಾಡಬಹುದು ಅಂತಾ ಕಾದುನೋಡಬೇಕಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಲೈಕಾ ಅರೋರ, ಅರ್ಜುನ್ ಕಪೂರ್ ರಿಜಿಸ್ಟರ್ ಮದುವೆ ಆಗ್ತಿದ್ದಾರಂತೆ!

Thu May 19 , 2022
ಬಾಲಿವುಡ್‌ನಲ್ಲಿ ಹಲವು ವರ್ಷಗಳಿಂದ ಪ್ರಣಯ ಪಕ್ಷಿಗಳಂತೆ ಸುತ್ತುತ್ತಿರುವ ಮಲೈಕಾ ಮತ್ತು ಅರ್ಜುನ್ ಲವ್ ಕಹಾನಿ ಎಲ್ಲರಿಗೂ ಗೊತ್ತೇ ಇದೆ. ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿ ಈಗ ತಮ್ಮ ಸಂಬಂಧವನ್ನು ಮದುವೆಯಲ್ಲಿ ಬಂಧಿಸಲು ಹೊರಟಿದೆ. ಬಾಲಿವುಡ್‌ನಲ್ಲಿ ಈಗ ಇದೇ ಸುದ್ದಿ ಆಗಿ ಬಿಟ್ಟಿದೆ. ಒಬ್ಬರಾಗೇ ಬಾಲಿವುಡ್ ತಾರೆಯರು ಮದುವೆಯಾಗುತ್ತಿದ್ದಾರೆ. ಈಗ ಮಲೈಕಾ ಮತ್ತು ಅರ್ಜುನ್ ಸರದಿ ಎನ್ನಲಾಗುತ್ತಿದೆ. ಬಾಲಿವುಡ್‌ನ ಹಲವು ಪೋರ್ಟಲ್‌ನಲ್ಲಿ […]

Advertisement

Wordpress Social Share Plugin powered by Ultimatelysocial