ಪಂಚ ರಾಜ್ಯಗಳ ಚುನಾವಣಾ ಪ್ರಕ್ರಿಯೆ ಮಾರ್ಚ್ ಏಳರಂದು ಮುಕ್ತಾಯಗೊಳ್ಳಲಿದೆ,

 

ಪಂಚ ರಾಜ್ಯಗಳ ಚುನಾವಣಾ ಪ್ರಕ್ರಿಯೆ ಮಾರ್ಚ್ ಏಳರಂದು ಮುಕ್ತಾಯಗೊಳ್ಳಲಿದೆ, ಮಾರ್ಚ್ ಹತ್ತರಂದು ಫಲಿತಾಂಶ ಪ್ರಕಟವಾಗಲಿದೆ. ಮಾರ್ಚ್ ಏಳರ ಸಂಜೆಯಿಂದ ಫಲಿತಾಂಶದ ವರೆಗೆ ಮತಗಟ್ಟೆ (ಎಕ್ಸಿಟ್ ಪೋಲ್) ಸಮೀಕ್ಷೆಗಳ ಅಬ್ಬರ.ಉತ್ತರ ಪ್ರದೇಶ ಎನ್ನುವುದು ಎಲ್ಲಾ ರಾಜಕೀಯ ಪಕ್ಷಗಳಿಗೆ ಪ್ರಮುಖವಾದದಂತದ್ದು.ಈ ಬಾರಿಯ ಚುನಾವಣೆಯಲ್ಲಿ ನಾನೋ, ನೀನೋ ಎನ್ನುವ ಹಾಗೇ ಎರಡು ಪಕ್ಷಗಳಾದ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಬಹುತೇಕ ನೇರ ಪೈಪೋಟಿ.ಕೇಂದ್ರದಲ್ಲಿ ಸರಕಾರ ರಚಿಸಲು ಭಾಷ್ಯ ಬರೆಯುವ ಉತ್ತರ ಪ್ರದೇಶದಲ್ಲಿ ತಮ್ಮ ಹಿಂದಿನ ಛಾಪು ಮೂಡಿಸಲು ಪ್ರಿಯಾಂಕ ಗಾಂಧಿ ವಾದ್ರಾ ಹೆಚ್ಚುಕಮ್ಮಿ ಎರಡು ವರ್ಷದಿಂದ ಅಲ್ಲಿ ಬೀಡುಬಿಟ್ಟಿದ್ದು ಗೊತ್ತಿರುವ ವಿಚಾರ.ಹೀಗಾಗಿ, ಸಂಪೂರ್ಣವಾಗಿ ಕಾಂಗ್ರೆಸ್ ಪ್ರಚಾರವನ್ನು ಮತ್ತು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ವಿಚಾರದಲ್ಲಿ ಪ್ರಿಯಾಂಕ ಅವರದ್ದೇ ಕಾರುಬಾರು. ಇವರ, ಅವಿರತ ಪ್ರಯತ್ನ ಪಕ್ಷಕ್ಕೆ ಗತವೈಭವವನ್ನು ಮರುಕಳಿಸುತ್ತಾ ಎನ್ನುವುದು ಕೂಡಾ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರ ಪತಿ ರಾಬರ್ಟ್ ವಾದ್ರಾ ಸಕ್ರಿಯ ರಾಜಕಾರಣಕ್ಕೆ ಇಳಿಯುವ ಸ್ಪಷ್ಟ ಮುನ್ಸೂಚನೆಯನ್ನು ನೀಡಿದ್ದಾರೆ.ಎಂಬತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರ ಪ್ರದೇಶಎಂಬತ್ತು ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಉತ್ತರ ಪ್ರದೇಶದ 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಎರಡೇ ಕ್ಷೇತ್ರವನ್ನು. ಅದು, ರಾಯ್ ಬರೇಲಿ ಮತ್ತು ಅಮೇಥಿಯಲ್ಲಿ, ಬಿಜೆಪಿ ಗೆದ್ದಿದ್ದು 71ಕ್ಷೇತ್ರದಲ್ಲಿ. ಇನ್ನು, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಒಂದು ಕ್ಷೇತ್ರವನ್ನು. ವಂಶ ಪಾರಂಪಾರ್ಯವಾಗಿ ಗೆದ್ದು ಬರುತ್ತಿದ್ದ ಅಮೇಥಿಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.ಬಿಜೆಪಿಯ ಭದ್ರಕೋಟೆಯಂತಿರುವ ಮೊರದಾಬಾದ್ ಲೋಕಸಭಾ ಕ್ಷೇತ್ರಈಗ, ಪ್ರಿಯಾಂಕ ಗಾಂಧಿಯವರ ಪತಿ ಮತ್ತು ಉದ್ಯಮಿಯೂ ಆಗಿರುವ ರಾಬರ್ಟ್ ವಾದ್ರಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಅದು ಸಮಾಜವಾದಿ ಪಕ್ಷ ಮತ್ತು ಬಿಜೆಪಿಯ ಭದ್ರಕೋಟೆಯಂತಿರುವ ಮೊರದಾಬಾದ್ ಲೋಕಸಭಾ ಕ್ಷೇತ್ರದಿಂದ. ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ 97,878 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು. ಅದಕ್ಕಿಂತ ಹಿಂದಿನ ಚುನಾವಣೆಯಲ್ಲಿ ಬಿಜೆಪಿ 87,504 ಮತಗಳ ಅಂತರದಿಂದ ಗೆಲುವು ಸಾಧಿಸಿತ್ತು.ವಾದ್ರಾ, ತಮ್ಮ ಸ್ವಂತ ಊರು ಮೊರದಾಬಾದ್ ನಿಂದ ಸ್ಪರ್ಧಿಸುವ ಇಂಗಿತ2009ರ ಚುನಾವಣೆಯಲ್ಲಿ ಮೊಹ್ಮದ್ ಅಜರುದ್ದೀನ್ ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟಿನಿಂದ ಗೆಲುವು ಸಾಧಿಸಿದ್ದರು. ಮುಸ್ಲಿಂ ಪ್ರಾಭಲ್ಯವಿರುವ ಮೊರದಾಬಾದ್ ನಗರ ಪಶ್ಚಿಮ ಉತ್ತರ ಪ್ರದೇಶದ ಭಾಗದಲ್ಲಿದ್ದು, ದೆಹಲಿಯಿಂದ 167ಕಿಲೋಮೀಟರ್ ದೂರದಲ್ಲಿದೆ. ಹಾಗಾಗಿ, ರಾಷ್ಟ್ರ ರಾಜಕಾರಣಕ್ಕೆ ಇಲ್ಲಿ ಹೆಚ್ಚಿನ ಮಹತ್ವ. ಟೈಮ್ಸ್ ಆಫ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ ರಾಬರ್ಟ್ ವಾದ್ರಾ, ತಮ್ಮ ಸ್ವಂತ ಊರು ಕೂಡಾ ಆಗಿರುವ ಮೊರದಾಬಾದ್‌ನಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ.ನಾನು ದೇವಸ್ಥಾನ, ಮಸೀದಿ, ಚರ್ಚಿಗೆ ಹೋಗುತ್ತೇನೆ”ಚುನಾವಣೆಯಿರಲಿ ಬಿಡಲಿ, ನಾನು ದೇವಸ್ಥಾನ, ಮಸೀದಿ, ಚರ್ಚಿಗೆ ಹೋಗುತ್ತೇನೆ. ಮೊರದಾಬಾದ್ ಅಥವಾ ಉತ್ತರ ಪ್ರದೇಶದ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿ ರಾಜಕೀಯಕ್ಕೆ ಇಳಿಯುವಂತೆ ನನಗೆ ಸಾಕಷ್ಟು ಒತ್ತಾಯವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ನನ್ನ ಮೇಲೆ ಮತದಾರನಿಗೆ ಬಹಳಷ್ಟು ವಿಶ್ವಾಸವಿರುವುದರಿಂದ, 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಒತ್ತಡವಿದೆ. ಸ್ಪರ್ಧಿಸುತ್ತೇನೋ, ಇಲ್ಲವೋ ಜನಸೇವೆಯಲ್ಲಂತೂ ಇರುತ್ತೇನೆ”ಎಂದು ರಾಬರ್ಟ್ ವಾದ್ರಾ ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸುವ ಮುನ್ಸೂಚನೆಯನ್ನು ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಳೆದ ಒಂದು ವಾರದಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ ಭಾರೀ!

Mon Mar 7 , 2022
ಬೆಂಗಳೂರು: ರಷ್ಯಾ, ಉಕ್ರೇನ್ ನಡುವಿನ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದರೆ, ಮತ್ತೊಂದೆಡೆ ಅದರ ಪರಿಣಾಮ ಕರ್ನಾಕಟದ ಮೇಲೂ ಬೀರುವಂತಾಗಿದ್ದು, ಕಳೆದ ಒಂದು ವಾರದಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿರುವುದಾಗಿ ವರದಿಯೊಂದು ತಿಳಿಸಿದೆ.ಭಾರತ ಅತೀ ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಎಣ್ಣೆಯನ್ನು ಉಕ್ರೇನ್ ನಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದೀಗ ರಷ್ಯಾ, ಉಕ್ರೇನ್ ನಡುವಿನ ಯುದ್ಧದಿಂದಾಗಿ ಸೂರ್ಯಕಾಂತಿ ಎಣ್ಣೆ ಸರಬರಾಜು ಮೇಲೆ ಪರಿಣಾಮ ಬೀರಿದ್ದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು […]

Advertisement

Wordpress Social Share Plugin powered by Ultimatelysocial