ಕಂಪನಿ ಬೆಳವಣಿಗೆಗೆ ಕಾರಣರಾದ ನೌಕರರಿಗೆ ಕಾರ್ ಕೊಟ್ಟ ಮಾಲೀಕ ಭರ್ಜರಿ ಗಿಫ್ಟ್.

ಹಮದಾಬಾದ್: ಅಹಮದಾಬಾದ್‌ ನ ಐಟಿ ಸಂಸ್ಥೆಯು ಉದ್ಯೋಗಿಗಳಿಗೆ ಕಾರ್ ಗಳನ್ನು ನೀಡಿ ಗೌರವಿಸಿದೆ, ತ್ರಿಧ್ಯಾ ಟೆಕ್ ಐಟಿ ಸಂಸ್ಥೆಯು ಕಂಪನಿಯ ಬೆಳವಣಿಗೆಗೆ ಕೊಡುಗೆ ನೀಡಿದ 13 ಉದ್ಯೋಗಿಗಳಿಗೆ ಕಾರ್ ಗಳನ್ನು ಉಡುಗೊರೆಯಾಗಿ ನೀಡಿದೆ.

ಉದ್ಯೋಗಿಗಳ ಕಠಿಣ ಪರಿಶ್ರಮ ಅವರ ಸಮರ್ಪಣೆಗಾಗಿ ಶ್ಲಾಘನೆಯ ಸಂಕೇತವಾಗಿ ಕಾರ್ ನೀಡಲಾಗಿದೆ.

ತ್ರಿಧ್ಯಾ ಟೆಕ್ ಡಿಜಿಟಲ್ ಟ್ರಾನ್ಸ್‌ ಫರ್ಮೇಷನ್ ಸೇವೆಗಳನ್ನು ಒದಗಿಸುತ್ತದೆ. ಈ ಉದ್ಯೋಗಿಗಳು ಮೊದಲಿನಿಂದಲೂ ಈ ಐಟಿ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಮತ್ತು ಅವರ ಕಠಿಣ ಪರಿಶ್ರಮಕ್ಕಾಗಿ ಅವರನ್ನು ಸನ್ಮಾನಿಸಿದೆ.

ತ್ರಿಧ್ಯಾ ಟೆಕ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಿರ್ದೇಶಕ ರಮೇಶ್ ಮರಂದ್ ಅವರು ಮಾತನಾಡಿ, ನಮ್ಮ ಉದ್ಯೋಗಿಗಳನ್ನು ಗುರುತಿಸುವ ಕಾರ್ಯಕ್ರಮದ ಭಾಗವಾಗಿ ನಾವು ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ನಾವು ಸೃಷ್ಟಿಸಿದ ಸಂಪತ್ತನ್ನು ನಮ್ಮ ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಈ ಕ್ರಮಕೈಗೊಂಡಿದ್ದೇವೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'SSLC' ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ.

Thu Feb 2 , 2023
ಬೆಂಗಳೂರು: ಎಸ್ ಎಸ್ ಎಲ್ ಸಿ (SSLC) ಪೂರ್ವ ಸಿದ್ಧತಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಈ ಬಾರಿ ತಾಲೂಕು ಮಟ್ಟದಲ್ಲಿ ಸಿದ್ದಪಡಿಸಲಾಗುತ್ತಿದೆ. ಹೌದು, ಇದುವರೆಗೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿದ್ದ ಪ್ರಶ್ನೆ ಪತ್ರಿಕೆ ತಯಾರಿಯ ಜವಾಬ್ದಾರಿಯನ್ನು 2022-23ರ ಸಾಲಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ. ಪೂರ್ವ ಸಿದ್ಧತಾ ಪರೀಕ್ಷೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಂತದಲ್ಲೇ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಅನುಮೋದನೆ ನೀಡಿದ್ದಾರೆ. ಮಾದರಿ ಪ್ರಶ್ನೆ ಪತ್ರಿಕೆಯನ್ನು ರಾಜ್ಯದ ಎಲ್ಲಾ ಕ್ಷೇತ್ರ […]

Advertisement

Wordpress Social Share Plugin powered by Ultimatelysocial