ಚಳಿಗಾಲ | ಚರ್ಮದ ಆರೋಗ್ಯಕ್ಕೆ ಪೂರಕ ಆಹಾರ

ಚಳಿಗಾಲ | ಚರ್ಮದ ಆರೋಗ್ಯಕ್ಕೆ ಪೂರಕ ಆಹಾರ=

ಚಳಿಗಾಲದಲ್ಲಿ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಚರ್ಮದ ಆರೋಗ್ಯ ರಕ್ಷಣೆಯಲ್ಲಿ ನಾವು ಸೇವಿಸುವ ಆಹಾರಕ್ರಮದ ಪಾತ್ರವೂ ದೊಡ್ಡದು. ಇದು ದೈಹಿಕಶಕ್ತಿ ಹಾಗೂ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ದೇಹಕ್ಕೆ ಸೂಕ್ತ ಎನ್ನಿಸುವ ಆಹಾರ ಸೇವಿಸುವುದು ಬಹಳ ಅಗತ್ಯ.

ಆರೋಗ್ಯಕರ ಆಹಾರ ಸೇವನೆ ಕೇವಲ ಚರ್ಮದ ಆರೋಗ್ಯ ಮಾತ್ರವಲ್ಲ ದೇಹತೂಕ ನಿಯಂತ್ರಣ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೂ ಸಹಕಾರಿ. ಇದು ಚರ್ಮವನ್ನು ಪುನರುಜ್ಜೀವನಗೊಳಿಸುವ ಜೊತೆಗೆ ಕೂದಲ ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ, ಕೂದಲ ಕಾಂತಿ ಹೆಚ್ಚಿಸಿ, ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.ಉಗುರಿನ ಆರೋಗ್ಯವನ್ನು ಸುಧಾರಿಸುತ್ತದೆ.

ಹಾಗಾದರೆ, ಚಳಿಗಾಲದಲ್ಲಿ ಯಾವ ರೀತಿಯ ಆಹಾರವನ್ನು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ.

ನೀರು: ನಮ್ಮ ದೈನಂದಿನ ಆಹಾರಕ್ರಮದಲ್ಲಿ ನೀರಿನ ಪಾತ್ರ ಬಹಳ ಮಹತ್ವದ್ದು. ಹೆಚ್ಚು ಹೆಚ್ಚು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಹೆಚ್ಚುತ್ತದೆ. ಸಾಕಷ್ಟು ನೀರು ಕುಡಿಯುವುದರಿಂದ ಚರ್ಮವು ಮೃದುವಾಗುತ್ತದೆ. ನೀರು ಕುಡಿಯದಿದ್ದರೆ ಚರ್ಮ ಒಣಗುವುದು, ಸಿಪ್ಪೆ ಏಳುವುದು, ನೆರಿಗೆ ಮೂಡುವುದು ಹಾಗೂ ಕಾಂತಿ ಕಳೆದುಕೊಳ್ಳುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಷ್ಟೇ ಅಲ್ಲ, ನೀರು ಕುಡಿಯುವುದು ಕಡಿಮೆಯಾದರೆ, ನಿರ್ಜಲೀಕರಣದಂತಹ (ಡೀಹ್ರೈಡೇಷನ್) ಸಮಸ್ಯೆಯೂ ಕಾಣಿಸುತ್ತದೆ.

ಫ್ಯಾಟಿ ಆಯಸಿಡ್‌: ವಾಲ್‌ನಟ್‌, ಅಗಸೆ ಬೀಜದಂತಹ ಆಹಾರ ಧಾನ್ಯಗಳು, ಬಂಗುಡೆ, ಸಾಲ್ಮನ್‌ನಂತಹ ಮೀನು ಇವುಗಳಲ್ಲಿ ಒಮೇಗಾ 3 ಫ್ಯಾಟಿ ಆಯಸಿಡ್ ಅಂಶ ಅಧಿಕವಿದೆ. ಇವುಗಳನ್ನು ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಇದರಲ್ಲಿ ಚರ್ಮಕ್ಕೆ ಬೇಕಾಗುವ ನೈಸರ್ಗಿಕ ಕೊಬ್ಬಿನಂಶವಿದ್ದು, ಚರ್ಮಕ್ಕೆ ತೇವಾಂಶ ಒದಗಿಸುತ್ತವೆ. ಅಲ್ಲದೇ ಚರ್ಮದ ಹೊಳಪು ಹೆಚ್ಚಿಸಿ ಬೇಗ ವಯಸ್ಸಾದಂತೆ ಕಾಣುವುದಕ್ಕೆ ತಡೆ ಹಾಕುತ್ತವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

KL RAHUL:ನಾನು ಗಂಟೆಗಟ್ಟಲೇ ಪ್ರಾಕ್ಟೀಸ್ ಮಾಡಲ್ಲ;

Tue Dec 28 , 2021
ನಾನು ಗಂಟೆಗಟ್ಟಲೇ ಪ್ರಾಕ್ಟೀಸ್ ಮಾಡಲ್ಲ kl-rahul  “ ಹೌದು , ಇದು ನಿಜವಾಗಿಯೂ ವಿಶೇಷವಾಗಿದೆ. ಪ್ರತಿ ಶತಮಾನವು ನಮ್ಮೊಂದಿಗೆ ಸಂಪೂರ್ಣ ಹೊಸ ಅನುಭವವನ್ನು ಹಂಚಿಕೊಳ್ಳುತ್ತದೆ. ಶತ ಕ ವನ್ನು ಸಾಧಿಸಿದಾಗ ಅನೇಕ ಭಾವನೆಗಳು ನಮ್ಮನ್ನು ಸುತ್ತುವರೆ ಯುತ್ತ ವೆ. 6-7 ಗಂಟೆಗಳ ಕಾಲ ಕ್ರೀಸ್ ನಲ್ಲಿ ನಿಂತು ಈ ರೀತಿಯ ಸ್ಮರಣೀಯ ಇನ್ನಿಂಗ್ಸ್ ಆಡುತ್ತಿರುವುದು ನಿಜಕ್ಕೂ ವಿಶೇಷ ‘ ಎಂದು ಟೀಂ ಇಂಡಿಯಾ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26 ರಿಂದ ಆರಂಭವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭಿಕರಾದ […]

Advertisement

Wordpress Social Share Plugin powered by Ultimatelysocial