ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರ ಪಿಎಸ್‌ಐ ನೇಮಕಾತಿ ಪ್ರಕರಣವನ್ನು   ನ್ಯಾಯಾಂಗ ತನಿಖೆಗೆ ವಹಿಸೋದಕ್ಕೆ ಹೆದರುತ್ತಿದೆ. ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲವೆಂದ್ರೇ ಯಾಕೆ ನ್ಯಾಯಾಂಗ ತನಿಖೆಗೆ ನೀಡೋದಕ್ಕೆ ಹೆದರಬೇಕು ಎಂಬುದಾಗಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಪಿಎಸ್‌ಐ ನೇಮಕಾತಿ ಅಕ್ರಮದ ಕುರಿತು ಕಾಂಗ್ರೆಸ್ ಬಳಿ ಯಾವ ಸಾಕ್ಷ್ಟಾಧಾರಗಳಿವೆ ಎಂದು ಬಿಜೆಪಿ ಕೇಳಿರುವ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ, ‘ಈ ಪ್ರಕರಣದ ತನಿಖೆಯನ್ನು ನಡೆಸಲು ಈ ಸರ್ಕಾರ ಅಸಮರ್ಥವಾಗಿದೆ ಎಂದು ಒಪ್ಪಿಕೊಳ್ಳಲಿ. ಅವರಿಗೆ ತನಿಖೆ ಮಾಡಲು ಸಾಧ್ಯವಾಗದಿದ್ದರೆ ತನಿಖೆಯ ಅಧಿಕಾರವನ್ನು ನಮ್ಮ ಕೈಗೆ ತನಿಖೆ ನೀಡಲಿ, ನಾವು ಮಾಡಿ ತೋರಿಸುತ್ತೇವೆ ಎಂದರು.

ಸರ್ಕಾರ ಯಾರ ಬಳಿ ಇದೆ? ತನಿಖೆ ಮಾಡಲು ಯಾರ ಬಳಿ ಅಸ್ತ್ರಗಳಿವೆ? ಗೃಹ ಸಚಿವರು ಮಾತೆತ್ತಿದರೆ ಈ ಪ್ರಕರಣದಲ್ಲಿ ಕಾಂಗ್ರೆಸಿಗರು ಇದ್ದಾರೆ ಎನ್ನುತ್ತಾರೆ. ಈ ಪ್ರಕರಣದಲ್ಲಿ ಬಿಜೆಪಿಯವರಿಲ್ಲ, ಕಾಂಗ್ರೆಸಿಗರಿದ್ದಾರೆ ಎಂದಾದರೆ ಯಾಕೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುತ್ತಿಲ್ಲ? ಇನ್ನು ಮುಖ್ಯಮಂತ್ರಿಗಳು ಕಳೆದ ಕಾಂಗ್ರೆಸ್ ಸರ್ಕಾರದ ಅಕ್ರಮಗಳನ್ನು ತೆಗೆಯುವುದಾಗಿ ಹೇಳಿದ್ದಾರೆ. ನೀವು ಕೇವಲ 5 ವರ್ಷ ಮಾತ್ರವಲ್ಲ, ಕಳೆದ 50 ವರ್ಷಗಳ ಪ್ರಕರಣವನ್ನು ತೆಗೆಯಿರಿ ಎಂದು ಒತ್ತಾಯಿಸಿದರು.

ಈ ಹಗರಣದಲ್ಲಿ ನಿಮ್ಮ ಪಾಲು ಇಲ್ಲದಿದ್ದರೆ ನ್ಯಾಯಾಂಗ ತನಿಖೆ ನೀಡಲು ಭಯವೇಕೆ? ನಿಮ್ಮ ಹೆಸರು ಅಥವಾ ಬೇರೆಯವರ ಹೆಸರು ಬರುತ್ತದೆ ಎಂಬ ಭಯವಿದೆಯೇ? ಪತ್ರಿಕೆಗಳಲ್ಲಿ ನಿಮ್ಮ ಹೆಸರು ಬರಬೇಕು ಎಂದು ಏನುಬೇಕೋ ಅದನ್ನು ಮಾತನಾಡುವುದಲ್ಲ. ನೀವು ನಿಜವಾಗಿಯೂ ತಪ್ಪಿತಸ್ಥರಲ್ಲದಿದ್ದರೆ, ನ್ಯಾಯಾಂಗ ತನಿಖೆ ನೀಡಿ. ಅದರ ಹೊರತಾಗಿ ಬೇರೆ ಮಾತು ಬೇಡ ಎಂದು ಹೇಳಿದರು.

ನಮ್ಮ ಮೇಲ್ಮನೆ ಸದಸ್ಯರು ರವಿ ಅವರು ಈ ವಿಚಾರವಾಗಿ ಸದನದಲ್ಲಿ ಪ್ರಶ್ನೆ ಕೇಳಿದಾಗ, ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ದೂರು ನೀಡಿದ್ದು, ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ನಾವು ಉನ್ನತ ಅಧಿಕಾರಿಗಳ ತಂಡ ರಚಿಸಿ, ಆರೋಪ ಕುರಿತ ತನಿಖೆ ಮಾಡಿದ ನಂತರ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ಗೃಹ ಸಚಿವರು ಉತ್ತರಿಸಿದ್ದಾರೆ. ಗೃಹ ಮಂತ್ರಿಗಳು ಹೇಳಿರುವ ಉನ್ನತ ಅಧಿಕಾರಿಗಳ ತಂಡ ಯಾವುದು? ಈ ಹಗರಣದಲ್ಲಿ ಅಖ್ರಮ ಆಗಿಲ್ಲ ಎಂದು ಕ್ಲೀನ್ ಚಿಟ್ ಕೊಟ್ಟವರು ಯಾರು? ಸದನದಲ್ಲಿ ಈ ಸಮಿತಿಯ ವರದಿ ಇದೆ ಎಂದು ಹೇಳಿದ್ದಾರಲ್ಲ, ಆ ವರದಿ ಎಲ್ಲಿದೆ ಎಂದು ನಾನು ಕೇಳಿದ್ದೇನೆ. ನನ್ನ ಈ ಪ್ರಶ್ನೆಗೆ ಮುಖ್ಯಮಂತ್ರಿಗಳ ಬಳಿ ಉತ್ತರವಿಲ್ಲ. ಅವರು ಇಷ್ಟೋಂದು ಹಗರಣಗಳ ನಡೆದಿದ್ದು, ಯಾವುದಕ್ಕೆ ಉತ್ತರ ನೀಡಬೇಕು ಎಂದು ತೋಚದೇ ಹತಾಶರಾಗಿದ್ದಾರೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಸಾಲುಮರದ ತಿಮ್ಮಕ್ಕ ಪರಿಸರಕ್ಕಾಗಿ ತಮ್ಮ ಜೀವನ ಮೂಡಿಪಿಟ್ಟ ತಾಯಿ. ಸಂಪುಟ ದರ್ಜೆ ಸ್ಥಾನಮಾನ

Sat Jul 9 , 2022
  ಸಾಲುಮರದ ತಿಮ್ಮಕ್ಕ ಪರಿಸರಕ್ಕಾಗಿ ತಮ್ಮ ಜೀವನ ಮೂಡಿಪಿಟ್ಟ ತಾಯಿ. ಸಾಲು ಸಾಲು ಮರಗಳನ್ನು  ನೆಟ್ಟು ಪರಿಸರಕ್ಕೆ ನೆರವು ಮಾಡಿದ ವೃಕ್ಷ ಮಾತೆ. ಹುಲಿಕಲ್ ಮತ್ತು ಕುದೂರಿನ ನಡುವಿನ 45 ಕಿಲೋಮೀಟರ್ ಹೆದ್ದಾರಿಯ ಉದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸಿದ್ದಾರೆ. ಅಲ್ಲದೇ 8 ಸಾವಿರಕ್ಕೂ (8,000) ಹೆಚ್ಚು ಬೇರೆ ಬೇರೆ ಮರಗಳನ್ನು ನೆಟ್ಟು ಬೆಳೆಸಿದ್ದಾರೆ. ಪದ್ಮಶ್ರೀ  , ನಾಡೋಜ  ಸೇರಿ ಹಲವು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ರಾಷ್ಟ್ರ […]

Advertisement

Wordpress Social Share Plugin powered by Ultimatelysocial