PKL:ಎರಡು ತಂಡಗಳ ಆಟಗಾರರಿಗೆ ಕೊರೊನಾ ಸೋಂಕು;

ಬೆಂಗಳೂರು: ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಗೆ ಇದೀಗ ಕರೊನಾ ವೈರಸ್ ಭೀತಿ ಶುರುವಾಗಿದ್ದು, ಪಟನಾ ಪೈರೇಟ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡದ ಕೆಲ ಆಟಗಾರರಿಗೆ ಕರೊನಾ ಸೋಂಕು ಧೃಡಪಟ್ಟಿದೆ.

ಇದರಿಂದಾಗಿ ಈ 2 ತಂಡಗಳ ಕೆಲ ಪಂದ್ಯ ಮುಂದೂಡಿಕೆಯಾಗಿವೆ. ಟೂರ್ನಿಯಲ್ಲಿ ಪಟನಾ ಪೈರೇಟ್ಸ್ ತಂಡ ಜನವರಿ 18ರಂದು ತನ್ನ ಕೊನೇ ಪಂದ್ಯ ಆಡಿದ್ದರೆ, ಗುಜರಾತ್ ಜೈಂಟ್ಸ್ ತಂಡ ಜನವರಿ 20ರಂದು ಕೊನೇ ಪಂದ್ಯ ಆಡಿತ್ತು.

ಇವೆರಡು ತಂಡಗಳಿಗೆ ಸದ್ಯ ಕಣಕ್ಕಿಳಿಸಲು ಬೇಕಾದ ಕನಿಷ್ಠ 12 ಆಟಗಾರರೂ ಲಭ್ಯರಿಲ್ಲ ಎನ್ನಲಾಗಿದೆ. ಇದರಿಂದಾಗಿ ಟೂರ್ನಿಯ ವೇಳಾಪಟ್ಟಿ ಅಲ್ಪ ಬದಲಾವಣೆ ಕಂಡಿದ್ದು, ಇಂದಿನಿಂದ ಶುಕ್ರವಾರದವರೆಗೆ ಪ್ರತಿದಿನ ಕೇವಲ 1 ಪಂದ್ಯವಷ್ಟೇ ನಡೆಯಲಿದೆ. ಪಂದ್ಯಗಳು ರಾತ್ರಿ 7.30ಕ್ಕೆ ಆರಂಭಗೊಳ್ಳಲಿದ್ದು, ಮುಂದಿನ ಶನಿವಾರ 3 ಪಂದ್ಯಗಳು ನಡೆಯುವುದಿಲ್ಲ. ಶನಿವಾರ ಮತ್ತು ಭಾನುವಾರ ತಲಾ 2 ಪಂದ್ಯಗಳಷ್ಟೇ ನಡೆಯಲಿವೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಣರಾಜ್ಯ ದಿನ 2022:ದೇಶವನ್ನುದ್ದೇಶಿಸಿ ರಾಷ್ಟ್ರಪತಿ 'ರಾಮನಾಥ ಕೋವಿಂದ್' ಗಣರಾಜ್ಯೋತ್ಸವ ಭಾಷಣ;

Tue Jan 25 , 2022
ನವದೆಹಲಿ : ದೇಶವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಗಣರಾಜ್ಯೋತ್ಸವ ಭಾಷಣ ಮಾಡಿದರು. ಗಣರಾಜ್ಯೋತ್ಸವ ಮುನ್ನಾದಿನವಾದ ಮಂಗಳವಾರ ಸಂಜೆ 7 ಗಂಟೆಗೆ ಭಾಷಣ ಆರಂಭಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಅಧಿಕಾರ ಮತ್ತು ಕರ್ತವ್ಯ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಹಕ್ಕುಗಳ ಜೊತೆಗೆ ಕರ್ತವ್ಯವನ್ನೂ ನಾವೆಲ್ಲರೂ ಅರಿತುಕೊಳ್ಳಬೇಕು. ಸಂವಿಧಾನವು ಪ್ರತಿಪಾದಿಸುವ ಜೀವನಮೌಲ್ಯಗಳನ್ನು ಪಾಲಿಸಬೇಕು. ದೇಶದಲ್ಲಿ ಸ್ವಚ್ಛತೆ ಕಾಪಾಡುವುದು ಕೂಡ ಎಲ್ಲ ನಾಗರಿಕರ ಕರ್ತವ್ಯ ಎಂದು ರಾಷ್ಟ್ರಪತಿ ಹೇಳಿದರು. ದೇಶದ ಸ್ವಾತಂತ್ರ್ಯಕ್ಕಾಗಿ […]

Advertisement

Wordpress Social Share Plugin powered by Ultimatelysocial