ಆಸ್ತಿ ಮೌಲ್ಯ 4 ಸಾವಿರ ಕೋಟಿ ರೂ. ಆಗಿದೆ,

ಕೊಪ್ಪಳ: ಯಾರನ್ನೂ ಹೆದರಿಸಿ ನಾನು ಹಣ ಹೊಡೆದಿಲ್ಲ, ಸ್ವಂತ ಶ್ರಮದಿಂದ ಆಸ್ತಿ ಗಳಿಸಿದ್ದೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕರಾದ ಗಾಲಿ ಜನಾರ್ಧನ ರೆಡ್ಡಿ ಅವರು ಗಂಗಾವತಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿ, ಜೈಲಿನಲ್ಲಿ ಸಣ್ಣ ಕೊಠಡಿಯಲ್ಲಿ ನಾಲ್ಕು ವರ್ಷ ಕಳೆದಿದ್ದೇನೆ.

ಯಾರಿಗೂ ಹೆದರುವುದಿಲ್ಲ. ಅಕ್ರಮ ಆಸ್ತಿ ಆರೋಪದಿಂದ ಮುಕ್ತನಾಗಿಯೇ ಉಸಿರು ಬಿಡುತ್ತೇನೆ ಎಂದು ಹೇಳಿದ್ದಾರೆ.

ಸಿಬಿಐ ಅಧಿಕಾರಿಗಳು ನನ್ನನ್ನು ಬಂಧಿಸಿದ ವೇಳೆ 1,200 ಕೋಟಿ ರೂ. ಆಸ್ತಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದರು. ಜಪ್ತಿಯಾದ ಆಸ್ತಿಯ ಮೌಲ್ಯ 4,000 ಕೋಟಿ ರೂ. ಆಗಿದ್ದು, ಚುನಾವಣೆ ಖರ್ಚಿಗೆ ಯಾವುದೇ ಸಮಸ್ಯೆ ಆಗದು. ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ 16 ದಿನ ಕಳೆಯುವಷ್ಟರಲ್ಲಿ ಸಿಬಿಐ ಆಸ್ತಿ ಮುಟ್ಟುಗಲು ಹಾಕಿಕೊಳ್ಳಲು ಮುಂದಾಗಿದೆ. ಆದರೆ, ಯಾರಿಂದಲೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆಗದು ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ?:

Thu Jan 12 , 2023
ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಈಗ ಸಂಪುಟ ಪುನರ್ರಚನೆಯ ಗುಸುಗುಸು ದಟ್ಟವಾಗಿ ಕೇಳಿಬರುತ್ತಿದೆ. ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಉಕ್ಕು ಖಾತೆಯ ಸಚಿವರ ಸ್ಥಾನ ಬದಲಾಗಬಹುದು ಎಂಬ ವದಂತಿ ದಟ್ಟವಾಗಿ ಹರಡಿದೆ. ಜನವರಿ 31ಕ್ಕೆ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದು ಅದಕ್ಕೆ ಮುನ್ನ ಅಥವಾ ಮೊದಲ ಹಂತದ ಬಜೆಟ್ ಅಧಿವೇಶನ ಮುಗಿಯುವ ಫೆಬ್ರವರಿ 10ರಂ ನಂತರ ಸಚಿವ ನವದೆಹಲಿ: ಕೇಂದ್ರ ಸರ್ಕಾರದ ಸಚಿವ ಸಂಪುಟದಲ್ಲಿ ಈಗ ಸಂಪುಟ ಪುನರ್ರಚನೆಯ ಗುಸುಗುಸು ದಟ್ಟವಾಗಿ […]

Advertisement

Wordpress Social Share Plugin powered by Ultimatelysocial