ಮಾತೃ ಭಾಷೆ ಉಳಿವಿಗಾಗಿ ಪ್ರತಿಭಟನೆ.

ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಕೇಂದ್ರ ಸರ್ಕಾರದ ಹೊಸ ಭಾಷಾ ನೀತಿಯ ಪ್ರಸ್ತಾಪಗಳನ್ನು ವಿರೋಧಿಸಿ ಮಾತೃಭಾಷೆ ಉಳಿಸಿ ಪ್ರತಿಭಟನೆ ನಡೆಸಿದರು.ನಗರದಲ್ಲಿಂದು ಮಲ್ಲೇಶ್ವರಂ ವೃತ್ತದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಪುತ್ಥಳಿ ಬಳಿ ಜಮಾಯಿಸಿದ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರು, ಅಂತರರಾಷ್ಟ್ರೀಯ ಮಾತೃಭಾಷಾ ದಿನದ ಅಂಗವಾಗಿ ಕೇಂದ್ರ ಸರ್ಕಾರದ ಮಾತೃಭಾಷಾ ವಿರೋಧಿ ಹೊಸ ಭಾಷಾ ನೀತಿಯ ಪ್ರಸ್ತಾವನೆಗಳನ್ನು ಧಿಕ್ಕರಿಸಿ ಘೋಷಣೆ ಕೂಗಿ ಕನ್ನಡವನ್ನು ಒಳಗೊಂಡಂತೆ ಎಲ್ಲಾ ಮಾತೃ ಭಾಷೆಗಳನ್ನು ಉಳಿಸಲು ನೆರೆದಿದ್ದ ಶಿಕ್ಷಕರು ಹಾಗೂ ಸಾರ್ವಜನಿಕರು ಪ್ರತಿಜ್ಞೆ ತೊಟ್ಟರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯೆ ಐಶ್ವರ್ಯ ಸಿ. ಎಂ., ಮಕ್ಕಳ ಪರಿಪೂರ್ಣ ಬೆಳವಣಿಗೆಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯೇ ಕಲಿಕಾ ಮಾಧ್ಯಮವಾಗಿರಬೇಕು. ಜೊತೆಗೆ ಇಂಗ್ಲಿಷ್ ಅನ್ನುಒಂದನೇ ತರಗತಿಯಿಂದಲೇ ಚೆನ್ನಾಗಿ ಕಲಿಸುವುದರಿಂದ ಉನ್ನತ ಶಿಕ್ಷಣಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದರು.ಇಂಗ್ಲಿಷ್‌ಗಿಂತ ಹಿಂದಿ ಹೆಚ್ಚು ಅಪಾಯಕಾರಿ. ನಾವು ಎಂದು ತ್ರಿಭಾಷಾ ಸೂತ್ರವನ್ನು ಒಪ್ಪಿಕೊಂಡೆವೋ ಅಂದೇ ಹಿಂದಿಯ ಉರುಳಿಗೆ ಸಿಕ್ಕಿದೆವು. ತ್ರಿಭಾಷಾ ಸೂತ್ರವನ್ನು ತಮಿಳುನಾಡು ಒಪ್ಪಿಲ್ಲ, ಈ ವಿಷಯದಲ್ಲಿ ನಾವು ತಮಿಳರನ್ನು ಅನುಸರಿಸಬೇಕು. ’ಬಹುಭಾಷೆಗಳಲ್ಲಿ ದ್ವಿಭಾಷೆ’ ಎಂಬುದು ನಮ್ಮ ಸೂತ್ರವಾಗಬೇಕು ಎಂಬ ಕುವೆಂಪುರವರ ಹಿಂದಿ ಹೇರಿಕೆ ವಿರುದ್ಧದ ಮಾತುಗಳನ್ನು ನೆನಪಿಸಿಕೊಂಡರು.ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಭಟ್ ಸೇರಿದಂತೆ ಪ್ರಮುಖರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು ನನ್ನ ಪತಿ ಒಟ್ಟಾಗಿದ್ದೇವೆ ರೂಪ

Wed Feb 22 , 2023
ಸುಖ-ಸಂಸಾರಗಳಿಗೆ ಅಡ್ಡಿ ಆಗುತ್ತಿರುವವರನ್ನು ಪ್ರಶ್ನೆ ಮಾಡಬೇಕು ಇಲ್ಲವಾದರೆ, ಹಲವು ಕುಟುಂಬಗಳು ನಾಶವಾಗುತ್ತವೆ. ನಾನು ಧೈರ್ಯವಂತ ಮಹಿಳೆ, ನಾನು ಹೋರಾಡುತ್ತೇನೆ. ಎಲ್ಲ ಮಹಿಳೆಯರಿಗೂ ಆ ಶಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ ಧ್ವನಿಯಾಗೋಣ ಎಂದು ಐಜಿಪಿ ಆಗಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ತಿಳಿಸಿದ್ದಾರೆ. ನಾನು,ನನ್ನ ಪತಿ ಇನ್ನೂ ಒಟ್ಟಾಗಿದ್ದೇವೆ.ನಮ್ಮ ಕುಟುಂಬ ಚೆನ್ನಾಗಿ ಇರಬೇಕು ಎನ್ನುವ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಕೌಟುಂಬಿಕ ಮೌಲ್ಯಗಳಿಗೆ ಭಾರತ ಹೆಸರುವಾಸಿಯಾಗಿದೆ ಅದನ್ನು ಮುಂದುವರಿಸೋಣ ಎಂದು ಹೇಳಿದರು.ಸಾಮಾಜಿಕ ಕಾರ್ಯಕರ್ತ […]

Advertisement

Wordpress Social Share Plugin powered by Ultimatelysocial