ನಾನು ನನ್ನ ಪತಿ ಒಟ್ಟಾಗಿದ್ದೇವೆ ರೂಪ

ಸುಖ-ಸಂಸಾರಗಳಿಗೆ ಅಡ್ಡಿ ಆಗುತ್ತಿರುವವರನ್ನು ಪ್ರಶ್ನೆ ಮಾಡಬೇಕು ಇಲ್ಲವಾದರೆ, ಹಲವು ಕುಟುಂಬಗಳು ನಾಶವಾಗುತ್ತವೆ. ನಾನು ಧೈರ್ಯವಂತ ಮಹಿಳೆ, ನಾನು ಹೋರಾಡುತ್ತೇನೆ. ಎಲ್ಲ ಮಹಿಳೆಯರಿಗೂ ಆ ಶಕ್ತಿ ಇರುವುದಿಲ್ಲ. ಅಂತಹ ಮಹಿಳೆಯರಿಗೆ ಧ್ವನಿಯಾಗೋಣ ಎಂದು ಐಜಿಪಿ ಆಗಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ತಿಳಿಸಿದ್ದಾರೆ. ನಾನು,ನನ್ನ ಪತಿ ಇನ್ನೂ ಒಟ್ಟಾಗಿದ್ದೇವೆ.ನಮ್ಮ ಕುಟುಂಬ ಚೆನ್ನಾಗಿ ಇರಬೇಕು ಎನ್ನುವ ಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದೇನೆ.
ಕೌಟುಂಬಿಕ ಮೌಲ್ಯಗಳಿಗೆ ಭಾರತ ಹೆಸರುವಾಸಿಯಾಗಿದೆ ಅದನ್ನು ಮುಂದುವರಿಸೋಣ ಎಂದು ಹೇಳಿದರು.ಸಾಮಾಜಿಕ ಕಾರ್ಯಕರ್ತ ಗಂಗರಾಜು ಜೊತೆಗಿನ ಆಡಿಯೋ ಸಂಭಾಷಣೆ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು ಒಬ್ಬ ಐಎಎಸ್ ಅಧಿಕಾರಿ ಕರ್ನಾಟಕದಲ್ಲಿ ಮೃತಪಟ್ಟಿದ್ದರು, ಐಪಿಎಸ್ ಅಧಿಕಾರಿಯೊಬ್ಬರು ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಬ್ಬ ಐಎಎಸ್ ದಂಪತಿ ಬೇರೆ ಆಗಿದ್ದಾರೆ ಅದರ ಕಾರಣ ಗೊತ್ತಾಗಬೇಕಲ್ಲ ಎಂದರು.
ನಾನು ಯಾವತ್ತೂ ಭ್ರಷ್ಟಾಚಾರದ ಪರವಾಗಿ ಕೆಲಸ ಮಾಡಿಲ್ಲ. ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತೇನೆ. ಅವತ್ತು, ಇವತ್ತಿಗೂ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿರುವೆ, ಗಂಗರಾಜುಗೆ ಭ್ರಷ್ಟಾಚಾರ ವಿರುದ್ಧ ಹೋರಾಟ ನಿಲ್ಲಿಸಲು ನಾನು ಹೇಳಿಲ್ಲ. ನಿಲ್ಲಿಸಿ ಎಂದು ಹೇಳಿದ್ದರೆ ಅದನ್ನು ಸಾಬೀತು ಮಾಡಲಿ. ಅನಾವಶ್ಯಕವಾಗಿ ಆಡಿಯೋ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ರೋಹಿಣಿ ಸಿಂಧೂರಿ ಭ್ರಷ್ಟಾಚಾರದ ಬಗ್ಗೆ ಮಾತ್ರ ಚರ್ಚೆ ಆಗಲಿ. ಇಲ್ಲಿ ಕೌಟುಂಬಿಕ ಮತ್ತು ವೈಯಕ್ತಿಕ ವಿಚಾರಗಳ ಚರ್ಚೆ ಬೇಡ ಎಂದರು.ಗಂಗರಾಜು ಮೇಲೆ ಕೂಡ ಹಲವು ಕ್ರಿಮಿನಲ್ ಕೇಸ್‌ಗಳಿವೆ. ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಾರೆ, ಯಾವ್ಯಾವ ಐಎಎಸ್ ದಂಪತಿ ಬೇರ್ಪಟ್ಟಿದ್ದಾರೆ. ತಮಿಳುನಾಡಿನ ಯಾವ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಯಾಕೆ ಮಾಡಿಕೊಂಡರು. ಯಾರಿಂದ ಯಾರು, ಯಾಕೆ ಆತ್ಮಹತ್ಯೆ ಮಾಡಿಕೊಂಡರು, ಇದು ಚರ್ಚೆ ಆಗಲಿ ಎಂದು ಹೇಳಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುದೀಪ್ ತಂಡದಲ್ಲಿ ಗೇಲ್, ಕೃಷ್ಣ ತಂಡದಲ್ಲಿ ರೈನಾ.

Wed Feb 22 , 2023
ಕನ್ನಡ ಸಿನಿ ರಸಿಕರು ಹಾಗೂ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಕ್ರಿಕೆಟ್ ಟೂರ್ನಮೆಂಟ್ ಆದ ಕನ್ನಡ ಚಲನಚಿತ್ರ ಕಪ್ ( ಕೆಸಿಸಿ ) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. 2018ರಲ್ಲಿ ಉದ್ಘಾಟನೆಯಾಗಿದ್ದ ಕನ್ನಡ ಚಲನಚಿತ್ರ ಕಪ್ ಬಳಿಕ 2019ರಲ್ಲೂ ಸಹ ನಡೆದಿತ್ತು. ಆದರೆ ನಂತರದ ವರ್ಷಗಳಲ್ಲಿ ಕೊರೊನಾ ವೈರಸ್ ಹಾವಳಿ ಹಾಗೂ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ಕಾರಣದಿಂದಾಗಿ ಕನ್ನಡ ಚಲನಚಿತ್ರ ಕಪ್ ನಡೆದಿರಲಿಲ್ಲ.ಕನ್ನಡ ಸಿನಿ ರಸಿಕರು ಹಾಗೂ ಕ್ರಿಕೆಟ್ ಪ್ರೇಮಿಗಳ ನೆಚ್ಚಿನ […]

Advertisement

Wordpress Social Share Plugin powered by Ultimatelysocial