ಶೀಘ್ರದಲ್ಲೇ ಪುನೀತ್ ರಾಜಕುಮಾರ್‌ಗೆ ಕರ್ನಾಟಕ ರತ್ನ : CM ಬೊಮ್ಮಾಯಿ

ಬೆಂಗಳೂರು,ಮಾ.17-ಕನ್ನಡ ಚಿತ್ರರಂಗದ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್‍ಕುಮಾರ್ ಅವರಿಗೆ ಅಭಿಮಾನಿಗಳ ಒತ್ತಾಸೆಯಂತೆ ಶೀಘ್ರದಲ್ಲೇ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ರಾಜ್‍ಕುಮಾರ್‍ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂಬುದು ಅಭಿಮಾನಿಗಳ ಒತ್ತಾಸೆಯಾಗಿತ್ತು. ಅದರಂತೆ ಈಗಾಗಲೇ ರಾಜ್ಯ ಸರ್ಕಾರ ಅವರಿಗೆ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿದೆ. ಶೀಘ್ರದಲ್ಲೇ ದಿನಾಂಕವನ್ನು ನಿಗದಿಪಡಿಸುವುದಾಗಿ ತಿಳಿಸಿದರು.

 

ಯಾವ ದಿನಾಂಕದಂದು ನೀಡಬೇಕು ಎಂಬುದರ ಕುರಿತು ಅವರ ಕುಟುಂಬದ ಸದಸ್ಯರ ಜೊತೆ ಚರ್ಚಿಸಲಾಗುವುದು. ವರನಟ ಡಾ.ರಾಜ್‍ಕುಮಾರ್ ಹಾಗೂ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ತರುವ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸುತ್ತೇವೆ. ಇದರ ಪೂರ್ವ ಸಿದ್ದತೆಗಾಗಿ ಸಮಿತಿಯೊಂದನ್ನು ರಚನೆ ಮಾಡಲಾಗುವುದು ಎಂದರು.

ಚಿಕ್ಕ ವಯಸ್ಸಿನಲ್ಲೇ ಪುನೀತ್ ರಾಜ್‍ಕುಮಾರ್ ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಅವರು ಗಳಿಸಿರುವ ಅಪಾರ ಜನಮನ್ನಣೆ ನೋಡಿದರೆ ಈಗಲೂ ಕೂಡ ಅವರು ನಮ್ಮೊಂದಿಗೆ ಇದ್ದಾರೆ ಎನಿಸುತ್ತದೆ ಎಂದರು.

ಭೌತಿಕವಾಗಿ ಅವರು ನಮ್ಮನ್ನು ಬಿಟ್ಟು ದೂರ ಇರಬಹುದು. ಆದರೆ ಈಗಲೂ ಕೂಡ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಬದುಕಿದ್ದರೆ ಇನ್ನು ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದರು. ಆದರೆ ವಿಯಾಟವೇ ಬೇರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಬಿಡುಗಡೆಯಾಗಿರುವ ಜೇಮ್ಸ್ ಚಿತ್ರವನ್ನು ನಾನು ಕೂಡ ವೀಕ್ಷಣೆ ಮಾಡುತ್ತೇನೆ. ಪ್ರತಿಯೊಬ್ಬರು ಇದನ್ನು ವೀಕ್ಷಣೆ ಮಾಡಬೇಕೆಂದು ಸಿಎಂ ಬೊಮ್ಮಾಯಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮುಂಬೈನಿಂದ ಪುಣೆಗೆ ರೈಲ್ವೆ ಪಾಸ್ ಈಗ ಲಭ್ಯವಿದೆ!

Thu Mar 17 , 2022
ಮುಂಬೈನಿಂದ ಪುಣೆಗೆ ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉತ್ತಮವಾದ ಹೊಸದೊಂದು ಇಲ್ಲಿದೆ. ಮಾರ್ಚ್ 22 ರಿಂದ ಮುಂಬೈನಿಂದ ಪುಣೆಗೆ ರೈಲ್ವೆ ಪಾಸ್ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಮಾರ್ಚ್ 2020 ರಲ್ಲಿ ಕರೋನವೈರಸ್ ಏಕಾಏಕಿ ಮಾಸಿಕ ಪಾಸ್ ಸೇವೆಗಳನ್ನು ರೈಲ್ವೆ ಸ್ಥಗಿತಗೊಳಿಸಿತ್ತು. ಈಗ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಪ್ರಯಾಣಿಕರಿಗೆ ಮಾರ್ಚ್ 22 ರಿಂದ ಪಾಸ್ ಸೇವೆಗಳನ್ನು ಪುನರಾರಂಭಿಸಲಾಗುವುದು. ಪಾಸ್ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಪ್ರತಿನಿತ್ಯ 85 ರೂ.ಗಳ ದರದಲ್ಲಿ ಟಿಕೆಟ್ ಖರೀದಿಸಬೇಕಾಗಿತ್ತು.ಈಗ ಈ […]

Advertisement

Wordpress Social Share Plugin powered by Ultimatelysocial