ಈಗ ಬಳ್ಳಾರಿಯಲ್ಲಿ ಅಪ್ಪು ದೊಡ್ಡ ಪ್ರತಿಮೆ, ಕೆರೆಗೂ ಪುನೀತ್ ಹೆಸರು.

ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೀವಂತವಾಗಿದ್ದ ಹಲವಾರು ಒಳ್ಳೆಯ ಕೆಲಸಗಳು ಹಾಗೂ ಮಾಡಿದ್ದ ಅದೆಷ್ಟೋ ಸಹಾಯಗಳು ಅಪ್ಪು ನಿಧನದ ನಂತರ ಆಚೆಗೆ ಬಂದವು. ಇಷ್ಟೆಲ್ಲಾ ಸಹಾಯ ಮಾಡಿ ಎಲ್ಲಿಯೂ ಸಹ ಪ್ರಚಾರ ತೆಗೆದುಕೊಳ್ಳದೇ ತಾನಾಯಿತು, ತನ್ನ ಪಾಡಾಯಿತು ಎಂದು ಬದುಕಿದ್ದ ರಾಜಕುಮಾರನ ಗುಣಕ್ಕೆ ಕನ್ನಡಿಗರು ಸೋತು ಹೋದರು.ಅಭಿಮಾನಿಗಳೇ ನಮ್ಮನೆ ದೇವ್ರು ಎಂದಿದ್ದ ಪುನೀತ್ ರಾಜ್‌ಕುಮಾರ್ ಅವರನ್ನು ಕನ್ನಡ ಜನತೆ ಹಾಗೂ ಅಭಿಮಾನಿಗಳು ಈಗ ದೇವರೆಂದು ಆರಾಧಿಸುತ್ತಿದ್ದಾರೆ.ಪುನೀತ್ ಮರಣ ಹೊಂದಿದ ನಂತರ ರಾಜ್ಯದ ವಿವಿಧ ಊರುಗಳ ವಿವಿಧ ರಸ್ತೆಗಳಿಗೆ, ವೃತ್ತಗಳಿಗೆ, ಬಸ್ ನಿಲ್ದಾಣಗಳಿಗೆ ಹಾಗೂ ಪಾರ್ಕ್‌ಗಳಿಗೆ ಸೇರಿದಂತೆ ಹಲವಾರು ಸಾರ್ವಜನಿಕ ಸ್ಥಳಗಳಿಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಡಲಾಯಿತು. ಇನ್ನು ಕೇವಲ ರಾಜ್ಯ ಮಾತ್ರವಲ್ಲದೇ ದೇಶದಿಂದ ಆಚೆಗೂ ಸಹ ಪುನೀತ್ ಮೇಲಿನ ಪ್ರೀತಿ ಎಂಥದ್ದು ಎಂಬುದು ಸಾಬೀತಾಗಿತ್ತು. ಆಸ್ಟ್ರೇಲಿಯಾದ ಸಿಡ್ನಿ ನಗರದ ಪಾರ್ಕ್ ಒಂದಕ್ಕೆ ನಟ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಡಲಾಗಿತ್ತು.ಹೀಗೆ ದೇಶ ಭಾಷೆಗಳೆನ್ನದೇ ಪುನೀತ್ ರಾಜ್‌ಕುಮಾರ್ ಮೇಲಿನ ಪ್ರೀತಿಯನ್ನು ಜನರು ವ್ಯಕ್ತಪಡಿಸುತ್ತಿದ್ದು, ರಾಜ್ಯದ ಹಲವೆಡೆ ಪುತ್ಥಳಿಗೂ ಸಹ ನಿರ್ಮಾಣಗೊಂಡವು. ಅದರಲ್ಲಿಯೂ ಹೊಸಪೇಟೆ ನಗರದಲ್ಲಿ ಪುನೀತ್ ರಾಜ್‌ಕುಮಾರ್ ಅವರ ಬೃಹತ್ ಕಟ್ಟಡವನ್ನು ನಿಲ್ಲಿಸಿ ದೊಡ್ಡ ಕಾರ್ಯಕ್ರಮ ನಡೆಸಿ ಪುತ್ಥಳಿಯನ್ನು ಅನಾವರಣಗೊಳಿಸಲಾಗಿತ್ತು. ಇದೀಗ ಅದೇ ರೀತಿ ಬಳ್ಳಾರಿಯಲ್ಲಿಯೂ ಸಹ ಪುನೀತ್ ರಾಜ್‌ಕುಮಾರ್ ಅವರ ಬೃಹತ್ ಪುತ್ಥಳಿ ನಿಲ್ಲಿಸಲು ತೀರ್ಮಾನಿಸಲಾಗಿದ್ದು, ಪುನೀತ್ ಇಷ್ಟಪಡುವವರಿಗೆ ಇದು ಸಂತಸದ ಹಾಗೂ ಹೆಮ್ಮೆಯ ಸುದ್ದಿಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರಿ ನೌಕರನ ಮರಣದ ನಂತರ ದತ್ತು ಪಡೆದ ಮಗು ಕುಟುಂಬ ಪಿಂಚಣಿಗೆ ಅರ್ಹರಲ್ಲ.

Wed Jan 18 , 2023
ನವ ದೆಹಲಿ. ಸರ್ಕಾರಿ ನೌಕರ ಪತಿಯ ಮರಣದ ನಂತರ ವಿಧವೆಯೊಬ್ಬಳು ದತ್ತು ಪಡೆದ ಮಗುವಿಗೆ ಕುಟುಂಬ ಪಿಂಚಣಿಗೆ ಅರ್ಹತೆ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತನ್ನ ತೀರ್ಪಿನಲ್ಲಿ ಹೇಳಿದೆ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ, 1956 ರ ಸೆಕ್ಷನ್ 8 ಮತ್ತು 12 ರ ಪ್ರಕಾರ ಹಿಂದೂ ಮಹಿಳೆಯು ಅಪ್ರಾಪ್ತ ಅಥವಾ ಮಾನಸಿಕವಾಗಿ ಅಸ್ವಸ್ಥಳಲ್ಲದ ತನ್ನ ಸ್ವಂತ ಹಕ್ಕಿನ ಮಗ ಅಥವಾ ಮಗಳನ್ನು ದತ್ತು ತೆಗೆದುಕೊಳ್ಳಲು ಅವಕಾಶ […]

Advertisement

Wordpress Social Share Plugin powered by Ultimatelysocial