ಪಂಜಾಬ್ ವಿಧಾನಸಭೆಯ 117 ಕ್ಷೇತ್ರಗಳಿಗೆ ಇಂದು ಬಿಗಿ ಭದ್ರತೆಯ ಮತದಾನ ನಡೆಯುತ್ತಿದೆ.

 

ಚಂಡೀಗಢ,ಫೆ.20- ಪಂಜಾಬ್ ವಿಧಾನಸಭೆಯ 117 ಕ್ಷೇತ್ರಗಳಿಗೆ ಇಂದು ಬಿಗಿ ಭದ್ರತೆಯ ಮತದಾನ ನಡುವೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತದಾನ ಕ್ರಮೇಣ ಬಿರುಸಾಯಿತು.93 ಮಹಿಳೆಯರು ಮತ್ತು ಇಬ್ಬರು ತೃತೀಯ ಲಿಂಗಿಗಳೂ ಸೇರಿದಂತೆ ಒಟ್ಟು 1,304 ಅಭ್ಯರ್ಥಿಗಳು ಪ್ರತಿಷ್ಠಿತವೆನಿಸಿರುವ ಈ ಚುನಾವಣೆಯಲ್ಲಿ ಕಣದಲ್ಲಿದ್ದಾರೆ.24,740 ಮತಗಟ್ಟೆಗಳಿದ್ದು, ಇವುಗಳಲ್ಲಿ 2,013 ಅನ್ನು ಅತಿ ಸೂಕ್ಷ್ಮ ಮತ್ತು 2,952 ಅನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.1,02,00,996 ಮಹಿಳೆಯರೂ ಸೇರಿದಂತೆ ಒಟ್ಟು 2,14,99,804 ಮತದಾರರು ಮತದಾನದ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ.ಪಂಜಾಬ್ ಈ ಬಾರಿ ಬಹುಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಕಾಂಗ್ರೆಸ್, ಎಸ್‍ಎಡಿ-ಎಎಪಿ, ಬಿಜೆಪಿ-ಪಿಎಲ್‍ಸಿ- ಎಸ್‍ಎಡಿ (ಸಂಯುಕ್ತ) ಮತ್ತು ಸಂಯುಕ್ತ ಸಮಾಜ್ ಮೋರ್ಚಾ ( ವಿವಿಧ ಮಾಜಿ ಸಂಸ್ಥೆಗಳ ರಾಜಕೀಯ ವೇದಿಕೆ) ಈ ಸಲ ಸ್ಪರ್ಧೆಗಿಳಿಸಿವೆ.  ಉತ್ತರಪ್ರದೇಶದಲ್ಲೂ ಬಿರುಸಿನ ಮತದಾನ:ಲಕ್ನೋವರದಿ: ಉತ್ತರ ಪ್ರದೇಶದ 16 ಜಿಲ್ಲೆಗಳಲ್ಲಿ ಹರಡಿಕೊಂಡಿರುವ 59 ವಿಧಾನಸಭಾ ಕ್ಷೇತ್ರಗಳಿಗೂ ಇಂದು ಬಿರುಸಿನ ಮತದಾನ ನಡೆಯಿತು.ರಾಜ್ಯದಲ್ಲಿ ಇದು ಮೂರನೇ ಹಂತದ ಮತದಾನದವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಹೊತ್ತೇರುತ್ತಿದ್ದಂತೆ ಬಿರುಸು ಪಡೆಯಿತು.2.15 ಕೋಟಿ ಮತದಾರರು ಈ ಹಂತದಲ್ಲಿ 627 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ರಾಜ್ಯದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.  ಪ್ರಧಾನಿ ಕರೆ:ಪಂಜಾಬ್ ವಿಧಾನಸಭೆಗೆ ಒಂದು ಹಂತದಲ್ಲಿ ಮತ್ತು ಉತ್ತರ ಪ್ರದೇಶ ವಿಧಾನಸಭೆ ಮೂರನೇ ಹಂತದ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಪಕವಾಗಿ ಮತದಾನ ಮಾಡುವಂತೆ ಮತದಾರರಿಗೆ ಅದರಲ್ಲೂ ಮೊದಲ ಬಾರಿ ಮತ ಚಲಾಯಿಸುವವರಿಗೆ ಕರೆ ನೀಡಿದರು.  ರಾಹುಲ್ ಮನವಿ:ಹೆದರದೆ ಉತ್ತರಗಳನ್ನು ನೀಡುವವರಿಗೆ ಮತ ಹಾಕುವಂತೆ ಪಂಜಾಬ್ ಮತದಾರರಿಗೆ ಕಾಂಗ್ರೆಸ್ ಧುರೀಣ ರಾಹುಲ್‍ಗಾಂಧಿ ಮನವಿ ಮಾಡಿದರು. ಮೂರನೇ ಹಂತದ ಮತದಾನ ನಡೆದ ಉತ್ತರ ಪ್ರದೇಶದ ಮತದಾರರೂ ಕೂಡ ಅಭಿವೃದ್ಧಿಗಾಗಿ ಹೊಸ ಸರ್ಕಾರವನ್ನು ಅಧಿಕಾರಕ್ಕೆ ತರುವಂತೆ ಅವರು ವಿನಂತಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾತಕ ಇಂದು, ಫೆಬ್ರವರಿ 20, ಭಾನುವಾರ: ಮೇಷ ರಾಶಿಯು ಐಷಾರಾಮಿ ದಿನವನ್ನು ಹೊಂದಿರುತ್ತದೆ, ಮಕರ ಸಂಕ್ರಾಂತಿಯು ಆಕರ್ಷಣೆಯ ಕೇಂದ್ರವಾಗಿರುತ್ತದೆ

Sun Feb 20 , 2022
  ಜಾತಕ ಇಂದು, ಫೆಬ್ರವರಿ 20, ಭಾನುವಾರ: ನಿಮ್ಮ ದಿನವು ಹೇಗೆ ಹೋಗುತ್ತದೆ ಎಂಬುದರ ಕುರಿತು ಸ್ವಲ್ಪ ಸ್ನೀಕ್-ಪೀಕ್ ಯಾವುದೇ ಹಾನಿ ಮಾಡುವುದಿಲ್ಲ. ನಿಮ್ಮ ಪರವಾಗಿ ಏನು ಕೆಲಸ ಮಾಡಲಿದೆ ಎಂದು ತಿಳಿಯಲು ಬಯಸುವಿರಾ? ಜ್ಯತಿಷಿ ಮತ್ತು ಭವಿಷ್ಯವಾಣಿ ಪಂಡಿತ್ ಜಗನ್ನಾಥ್ ಗುರೂಜಿಯವರ ಜ್ಯೋತಿಷ್ಯ ಭವಿಷ್ಯವನ್ನು ಓದಿ. ಮೇಷ ರಾಶಿ: ಮೇಷ ರಾಶಿಯ ಜನರು ತುಂಬಾ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗುತ್ತದೆ. ಹಣಕಾಸಿನ […]

Advertisement

Wordpress Social Share Plugin powered by Ultimatelysocial