ಪುಟಿನ್‌ ಜೊತೆ ಮೋದಿ ಮಾತುಕತೆ; ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾದ ರಷ್ಯಾ ಸೇನೆ..!

ಉಕ್ರೇನ್​ ವಿರುದ್ಧ ನಡೆಯುತ್ತಿರುವ ಯುದ್ಧದ ನಡುವೆಯೇ ರಷ್ಯಾದ ರಾಯಭಾರಿ ನಿಯೋಜಿತ ಡೇನಿಸ್​ ಅಲಿಪೋವ್​​ ಉಕ್ರೇನ್​ನ ಖಾರ್ಕಿವ್​, ಸುಮಿ ಹಾಗೂ ಇತರೆ ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿವ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.

 
ಅಲ್ಲದೇ ಉಕ್ರೇನ್,​ ಭಾರತೀಯ ವಿದ್ಯಾರ್ಥಿಗಳನ್ನು ತನ್ನ ಒತ್ತೆಯಾಳಾಗಿ ನೋಡುತ್ತಿದೆ ಎಂದು ರಷ್ಯಾ ಹೇಳಿದೆ.ಖಾರ್ಕಿವ್‌ನಿಂದ ಭಾರತೀಯ ವಿದ್ಯಾರ್ಥಿಗಳ ಗುಂಪನ್ನು ತುರ್ತಾಗಿ ಸ್ಥಳಾಂತರಿಸಲು ರಷ್ಯಾ ಪ್ರಯತ್ನಿಸುತ್ತಿದೆ. ಆದರೆ ಉಕ್ರೇನ್​ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳಂತೆ ನೋಡಿಕೊಳ್ತಿದೆ ಎಂದು ರಷ್ಯಾದ ವರದಿಗಳು ತಿಳಿಸಿವೆ.

ಸುದ್ದಿಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದ, ರಷ್ಯಾದ ನಿಯೋಜಿತ ರಾಯಭಾರಿ ಡೆನಿಸ್ ಅಲಿಪೋವ್, ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಯ ವಿಷಯದ ಬಗ್ಗೆ ರಷ್ಯಾ ಭಾರತದೊಂದಿಗೆ ಸಂಪರ್ಕದಲ್ಲಿದೆ ಮತ್ತು ಶೀಘ್ರದಲ್ಲೇ ಸುರಕ್ಷಿತ ಮಾರ್ಗವನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಇದರ ಮಧ್ಯೆ ಖಾರ್ಕಿವ್ ನಲ್ಲಿರುವ ಭಾರತೀಯರ ರಕ್ಷಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಇದಾದ ಬಳಿಕ ರಷ್ಯಾ ಸೇನೆ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಮುಂದಾಗಿದೆ.

ಈ ಮೊದಲು ಮಂಗಳವಾರದಂದು ಭಾರತೀಯ ಮೂಲದ ವೈದ್ಯಕೀಯ ವಿದ್ಯಾರ್ಥಿ ನವೀನ್‌ ರಷ್ಯಾ ಷೆಲ್‌ ದಾಳಿಗೆ ಮೃತಪಟ್ಟಿದ್ದರು. ಇದಾದ ಮರುದಿನವೇ ಪಂಜಾಬ್‌ ಮೂಲದ ಮತ್ತೊಬ್ಬ ವಿದ್ಯಾರ್ಥಿ ಬ್ರೈನ್‌ ಸ್ಟ್ರೋಕ್‌ ಗೆ ಒಳಗಾಗಿ ಮೃತಪಟ್ಟಿದ್ದರು. ಉಕ್ರೇನ್‌ ನಲ್ಲಿ ಪರಿಸ್ಥಿತಿ ದಿನೇ ದಿನೇ ಬಿಗಡಾಯಿಸುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ನಿರಂತರ ಸಭೆ ನಡೆಸಿದ್ದರು. ಅಲ್ಲದೆ ರಷ್ಯಾ ಅಧ್ಯಕ್ಷರ ಜೊತೆಯೂ ಮಾತುಕತೆ ನಡೆಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

6 ಗಂಟೆಗಳ ಕಾಲ ಖಾರ್ಕಿವ್​ನಲ್ಲಿ ಯುದ್ಧ ನಿಲ್ಲುವಂತೆ ಮಾಡಿದ್ದ ಭಾರತ..! ಇದರ ಹಿಂದಿತ್ತು ಮೋದಿಯವರ ಚಾಣಾಕ್ಷ ನಡೆ

Thu Mar 3 , 2022
ವಿಶ್ವದ ಯಾವುದೇ ಬಲಿಷ್ಠ ಶಕ್ತಿಗಳು ಮಾಡಲು ಸಾಧ್ಯವಾಗದ ಕೆಲಸವನ್ನು ಭಾರತವು ಸಾಧಿಸಿ ತೋರಿಸಿದೆ. ಹೌದು..! ಬರೋಬ್ಬರಿ ಆರು ಗಂಟೆಗಳ ಕಾಲ ಭಾರತವು ಖಾರ್ಕಿವ್​ನಲ್ಲಿ ಯುದ್ಧ ನಿಲ್ಲುವಂತೆ ಮಾಡಿತ್ತು ಅಂದರೆ ನೀವು ನಂಬಲೇಬೇಕು.ಉಕ್ರೇನ್​ನ ಎರಡನೇ ಅತಿದೊಡ್ಡ ನಗರದಿಂದ ತನ್ನ ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು ಭಾರತದ ಉದ್ದೇಶವಾಗಿದ್ದು, ಮಾಸ್ಕೋ ತನ್ನ ಆಕ್ರಮಣವನ್ನು ಕೆಲವು ಗಂಟೆಗಳ ಕಾಲ ನಿಲ್ಲಿಸುವಂತೆ ಮಾಡಿದ ಭಾರತದ ನಡೆ ಹಾಗೂ ವಿಧಾನ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.ಸಾಮಾಜಿಕ ಮಾಧ್ಯಮದಲ್ಲಿ, ಬಳಕೆದಾರರು ಭಾರತದ […]

Advertisement

Wordpress Social Share Plugin powered by Ultimatelysocial