ರಾಹುಲ್ ದ್ರಾವಿಡ್ ಅಂತರರಾಷ್ಟ್ರೀಯ ಕ್ರಿಕೆಟ್ ಗಾರ

ಜನವರಿ 11, 1973 ರಾಹುಲ್ ದ್ರಾವಿಡ್ ಅವರು ಹುಟ್ಟಿದ ದಿನ. ನಾನು ರಾಹುಲ್ ದ್ರಾವಿಡ್ ಅಭಿಮಾನಿ. ರಾಹುಲ್ ದ್ರಾವಿಡ್ ಕ್ರಿಕೆಟ್ ಬಿಟ್ಟ ನಂತರ ನಾನೂ ಕ್ರಿಕೆಟ್ ನೋಡುವುದ ಬಹುತೇಕ ಬಿಟ್ಟಿದ್ದೆ. ಈಗ ಅವರು ನಮ್ಮ ಕ್ರಿಕೆಟ್ ತಂಡದ ತರಬೇತುದಾರರಾಗಿದ್ದಾರೆ. ಅವರಂತಹ ಮಹನೀಯರು ಮಾರ್ಗದರ್ಶಿಸುತ್ತಿರುವ ಕಾರಣ ನಮ್ಮ ತಂಡ ಗೆಲ್ಲಬೇಕು ಎಂಬ ಸದ್ಭಾವ ನನ್ನ ಹೃದಯ ತುಂಬುತ್ತದೆ. ಹಾಗಾಗಿ ಅವರ ಮಾರ್ಗದರ್ಶನದ ಕುರಿತಾಗಿ ಆಪ್ತವಾಗಿ ಓದುತ್ತೇನೆ. ಅವರ ಮಾರ್ಗದರ್ಶಿತ್ವದ ಪಂದ್ಯಗಳ ಕುರಿತು ಅತ್ಯಂತ ಕಾಳಜಿ ಉಳ್ಳವನಾಗುತ್ತೇನೆ.
ಇಂದು ರಾಹುಲ್ ದ್ರಾವಿಡ್ ಅಂತರರಾಷ್ಟ್ರೀಯ ಕ್ರಿಕೆಟ್ ಬಿಟ್ಟು ಸುಮಾರು 11 ವರ್ಷವೇ ಕಳೆದಿದೆ. ದ್ರಾವಿಡ್ ತಮ್ಮನ್ನು ಎಂದೂ ಪ್ರದರ್ಶನಕ್ಕಿಟ್ಟುಕೊಳ್ಳದವರು. ಅವರು ಆಡುತ್ತಿದ್ದ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡ ಒಂದು ಮಹತ್ವದ ತಂಡವಾಗಿ ರೂಪುಗೊಳ್ಳಲು ಅವರು ಒಂದು ಮಹತ್ವದ ಪಾತ್ರಧಾರಿಯಾಗಿದ್ದರೂ ಪ್ರಚಾರ ಪಡೆಯುತ್ತಿದ್ದವರು ಮತ್ತ್ಯಾರೋ ಎನ್ನುವಂತ ಮೂಖಮರ್ಮರ ಅವರ ಅಭಿಮಾನಿಗಳಾದ ನಮ್ಮಂತಹವರಲ್ಲಿ ಆಗಾಗ ಮೂಡಿಬರುತ್ತಿತ್ತು. ರಾಹುಲ್ ದ್ರಾವಿಡ್ ಎಂಬ ಮಹಾನ್ ವ್ಯಕ್ತಿ ಕ್ರಿಕೆಟ್ ಆಡಿದರು ಎಂಬುದು ಆ ಆಟಕ್ಕೇ ಒಂದು ಗೌರವ ಎಂಬುದು ಅವರ ಅಭಿಮಾನಿಗಳೆಲ್ಲರ ಅಂತರಾಳದ ಹೃದ್ಭಾವ.
ಕ್ರಿಕೆಟ್ ಲೋಕದಲ್ಲಿ ಶಿಸ್ತು ಎಂಬ ಪದಕ್ಕೆ ರಾಹುಲ್ ದ್ರಾವಿಡ್ ಮತ್ತೊಂದು ಹೆಸರು. 1991-93ರ ವರ್ಷಗಳಲ್ಲಿ ದ್ರಾವಿಡ್ ರಣಜಿ ಪಂದ್ಯಗಳಲ್ಲಿ ಕರ್ನಾಟಕದ ಪರ ಆಡಲು ಆರಂಭಿಸಿದ್ದರು. ಕೆ.ಎಸ್.ಸಿ.ಎ ಕ್ರೀಡಾಂಗಣದ ಎದುರಿದ್ದ ಚರ್ಚಿನ ಹಿಂಬಾಗದಲ್ಲಿ ಲ್ಯಾವೆಲ್ಲಿ ರಸ್ತೆಯಲ್ಲಿದ್ದ ನಮ್ಮ ಕಚೇರಿಯ ಆಸುಪಾಸಿನಲ್ಲಿ ತಮ್ಮ ಕಾರನ್ನು ನಿಲ್ಲಿಸಿ ತಮ್ಮ ಕ್ರಿಕೆಟ್ ಕಿಟ್ ಹೊತ್ತು ನಡೆಯುತ್ತಿದ್ದ ಬಾಲಕ ದ್ರಾವಿಡ್ ಅವರನ್ನು ಆಗಾಗ ಕಾಣುವುದು ಸಾಮಾನ್ಯವಾಗಿತ್ತು. ಹಲವು ಬಾರಿ ನಾವು ಗೆಳೆಯರು ಅವರಿಗೆ ಹಲ್ಲೋ ದ್ರಾವಿಡ್ ಹೇಳುತ್ತಿದ್ದೆವು. ಒಂದು ರೀತಿಯ ಪ್ರಸನ್ನತೆಯ ಸ್ಪಂದನೆ ಪುಟ್ಟ ಹುಡುಗರಾದ ಅವರಿಂದ ನಮಗೆ ದೊರಕುತ್ತಿತ್ತು. ಸಾಮಾನ್ಯವಾಗಿ ಕ್ರಿಕೆಟ್ ಹುಡುಗರೆಲ್ಲ ದಂಡು ದಂಡಾಗಿ ಬರುವುದುಂಟು. ಆದರೆ ರಾಹುಲ್ ಮಾತ್ರ ಬಹಳಷ್ಟು ವೇಳೆ ಏಕಾಂಗಿ. ಬಹುಶಃ ಆಗಿನ ದಿನದಲ್ಲೂ ಎಲ್ಲರೂ ಮನೆಗೆ ಹೊರಟ ಮೇಲೆ ಇನ್ನೂ ಅಭ್ಯಾಸ ಮಾಡುತ್ತಿದ್ದರು ಎನಿಸುತ್ತದೆ. ಅವರ ಕ್ರೀಡಾ ಅವಧಿಯ ಕಡೆಯ ದಿನಗಳಲ್ಲಿ ಸಹಾ ಅವರು ಎಲ್ಲರೂ ಅಭ್ಯಾಸಕ್ಕೆ ಬರುವ ಮುಂಚಿತವಾಗಿ ಬಂದು ಎಲ್ಲರೂ ಹೋದ ಮೇಲೆ ಸಹಾ ಸಾಕಷ್ಟು ಅಭ್ಯಾಸ ನಡೆಸುವ ಶ್ರದ್ಧೆಯುಳ್ಳವರು ಎಂಬುದನ್ನು ಆಗಾಗ ನಾವೆಲ್ಲಾ ಓದಿದ್ದೇವೆ. ಅಂದಿನ ದಿನಗಳಲ್ಲಿ ನಾವು ಕಾಣುತ್ತಿದ್ದ ಸುಂದರವಾದ ದ್ರಾವಿಡ್ ಎಳೆಮೊಗದ ಕಳೆ ಈಗಲೂ ಮರೆಯುವಂತದಲ್ಲ. ಅದೇನೋ ಆ ಮೊಗದಲ್ಲಿ ವಿಶಿಷ್ಟ ಸೊಬಗು. ತಾನು ಬಯಸಿದ್ದನ್ನು ಸಾಧಿಸಿಯೇ ತೀರುವ ವಿರಳ ವ್ಯಕ್ತಿಗಳಲ್ಲಿ ಕಾಣುವ ಅಪೂರ್ವ ತೇಜಸ್ಸು ಆ ಕಣ್ಣುಗಳಲ್ಲಿ. ಇನ್ನೊಂದು ರೀತಿಯಲ್ಲಿ ನೋಡಿದರೆ, ನಾವು ನಮಗೆ ಗೊತ್ತಿರುವ ಒಬ್ಬ ವ್ಯಕ್ತಿ ಜೀವನದಲ್ಲಿ ಯಶಸ್ವಿಯಾದರೆ ಓಹೋ ಆತ ಇಂತಹ ಕಾರಣದಿಂದಲೇ ಯಶಸ್ವಿ ಆದರು ಎಂಬ ಚೌಕಟ್ಟಿನಲ್ಲಿ ಅವರನ್ನು ಸಿಲುಕಿಸಿ ನೋಡತೊಡಗುತ್ತೇವೆ. ರಾಹುಲ್ ದ್ರಾವಿಡ್ ಎಲ್ಲ ಎಲ್ಲೆಗಳನ್ನೂ ಮೀರಿದ ಒಬ್ಬ ಕಲಾಪೂರ್ಣ ಆಟಗಾರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಂದಗಲ್ಲ ಹನುಮಂತರಾಯರು ನಾಟಕಕಾರ

Wed Jan 11 , 2023
ನಾಟಕಕಾರ ಹನುಮಂತರಾಯರು 1896 ವರ್ಷದ ಜನವರಿ 11ರಂದು ವಿಜಾಪುರ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲಿನಲ್ಲಿ ಜನಿಸಿದರು. ತಂದೆ ಭೀಮರಾಯರು ಮತ್ತು ತಾಯಿ ಗಂಗೂಬಾಯಿ ಅವರು. ಹುಟ್ಟಿದ ವರ್ಷದೊಳಗೆ ತಂದೆಯ ಪ್ರೀತಿಯಿಂದ ವಂಚಿತರಾದ ಹನುಮಂತರಾಯರ ಪ್ರಾಥಮಿಕ ಶಿಕ್ಷಣ ಕಂದಗಲ್ಲಿನಲ್ಲಿ ನಡೆಯಿತು. ಅವರು ಮಾಧ್ಯಮಿಕ ಶಾಲೆ ಓದಿದ್ದು ವಿಜಾಪುರದಲ್ಲಿ. ಓದಿನ ಕಡೆ ಗಮನ ಹರಿಯದೆ ಊರಿನಲ್ಲಿ ನಡೆಯುತ್ತಿದ್ದ ಭಜನೆ, ಮೇಳ, ದೊಡ್ಡಾಟಗಳಿಂದ ಆಕರ್ಷಿತರಾದರು. ತಾಯಿಗೆ ಓದಿ ಕುಲಕರ್ಣಿ ಕೆಲಸ ಹಿಡಿಯಲೆಂಬ ಆಸೆ. ಹುಡುಗನಿಗೋ […]

Advertisement

Wordpress Social Share Plugin powered by Ultimatelysocial