ರೈಲು ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೈಲ್ವೆ ಇನ್ಸ್ ಪೆಕ್ಟರ್.

ಮುಂಬೈನಲ್ಲಿ ಮುಖ್ಯ ಲೋಕೋ ಇನ್ಸ್ ಪೆಕ್ಟರ್ ಒಬ್ಬರು ರೈಲು ಬರ್ತಿದ್ದಂತೆ ಹಳಿ ಮೇಲೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿರುವ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಇನ್ಸ್ ಪೆಕ್ಟರ್ ಸ್ಥಳೀಯ ರೈಲು ಬರುವಿಕೆಗಾಗಿ ಕಾಯುತ್ತಿರುವುದನ್ನು ತೋರಿಸಿದೆ.ಪ್ಲಾಟ್‌ಫಾರ್ಮ್‌ನಲ್ಲಿದ್ದ ಇತರ ಪ್ರಯಾಣಿಕರು ಭಯಭೀತರಾಗಿ ನೋಡುತ್ತಿರುವಾಗ ಇನ್ಸ್ ಪೆಕ್ಟರ್ ರೈಲು ಸಮೀಪಿಸುತ್ತಿದ್ದಂತೆ ಹಳಿ ಮೇಲೆ ಹಾರಿದರು. ಈ ಸಂಬಂಧ ಜಿಆರ್‌ಪಿ ವ್ಯಾಪ್ತಿಯ ವಿಲೇಪಾರ್ಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇನ್ಸ್ ಪೆಕ್ಟರ್‌ ಆತ್ಮಹತ್ಯೆ ನಿರ್ಧಾರ ಕೆಲಸದ ಒತ್ತಡಕ್ಕೆ ಸಂಬಂಧಿಸಿದ್ದಲ್ಲ ಎಂದು ಪಶ್ಚಿಮ ರೈಲ್ವೆಯ PRO ಹೇಳಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆಗಳು ನಡೆಯುತ್ತಿವೆ.ಈ ವಿಡಿಯೋ ನೋಡುಗರನ್ನು ಬೆಚ್ಚಿಬೀಳಿಸುವಂತಿರುವ ಕಾರಣ ಇದನ್ನು ಹಾಕಲಾಗಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೃಷಿಕರ ಸಮಸ್ಯೆ ಬಗೆಹರಿಸುವ ಸ್ಟಾರ್ಟಪ್‌ಗೆ ಪ್ರೋತ್ಸಾಹ.

Wed Feb 1 , 2023
ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿರುವ ಕೇಂದ್ರ ಸರ್ಕಾರವು, ಕೃಷಿಯಾಧಾರಿತ ತಂತ್ರಜ್ಞಾನ ಕ್ಷೇತ್ರದಲ್ಲಿನ ಸ್ಟಾರ್ಟಪ್‌ಗೆ ಪ್ರೋತ್ಸಾಹ ನೀಡಲು ನಿಧಿ ಸ್ಥಾಪಿಸಲಿದೆ.ಬುಧವಾರ ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ಈ ವಿಷಯ ಪ್ರಕಟಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ಸ್ಟಾರ್ಟಪ್‌ಗಳನ್ನು ಪ್ರಾರಂಭಿಸುವ ಯುವಕರಿಗೆ ಪ್ರೋತ್ಸಾಹ ನೀಡಲು ಈ ನಿಧಿಯನ್ನು ಸ್ಥಾಪಿಸಲಾಗುತ್ತಿದೆ. ಮುಖ್ಯವಾಗಿ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಸ್ಟಾರ್ಟಪ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಕೃಷಿ ಕ್ಷೇತ್ರಕ್ಕೆ ನೀಡಲಾಗುವ ಸಾಲದ […]

Advertisement

Wordpress Social Share Plugin powered by Ultimatelysocial