Rajat Patidar: ಪಂದ್ಯ ಮುಗಿದ ಬಳಿಕ ಬೇಸರದ ಮಾತುಗಳನ್ನಾಡಿದ ರಜತ್ ಪಟಿದಾರ್: ಏನು ಹೇಳಿದ್ರು ಕೇಳಿ

ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಬೌಲರ್​ಗಳ ಬೆಂಡೆತ್ತಿ ಆಕರ್ಷಕ ಚೊಚ್ಚಲ ಶತಕ ಸಿಡಿಸಿದ ರಜತ್ ಪಟಿದಾರ್ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಪಂದ್ಯ ಮುಗಿದ ಬಳಿಕ ಮಾತನಾಡಿದ ರಜತ್ ಏನು ಹೇಳಿದರು ಕೇಳಿ.

ಐಪಿಎಲ್ ಇತಿಹಾಸದ ಎಲಿಮಿನೇಟರ್ ಪಂದ್ಯದಲ್ಲಿ ಇದುವರೆಗೆ ಕಳಪೆ ಪ್ರದರ್ಶನ ನೀಡುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಐಪಿಎಲ್ 2022 ರ (IPL 2022) ಮೊದಲ ಅಗ್ನಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ. ಲಖನೌ ಸೂಪರ್ ಜೇಂಟ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಆರ್​ಸಿಬಿ (LSG vs RCB) ಬೊಂಬಾಟ್ ಪ್ರದರ್ಶನ ನೀಡಿ 14 ರನ್​ಗಳಿಂದ ಜಯ ಸಾಧಿಸಿ ಕ್ವಾಲಿಫೈಯರ್-2 ಗೆ ಲಗ್ಗೆಯಿಟ್ಟಿದೆ. ಬೆಂಗಳೂರು ಈ ಪಂದ್ಯದಲ್ಲಿ ಗೆಲುವು ಸಾಧಿಸಲು ರಜತ್ ಪಟಿದಾರ್ (Rajat Patidar) ಎಂದರೆ ತಪ್ಪಾಗಲಾರದು. ಮೊದಲ ಓವರ್​ನಲ್ಲೇ ನಾಯಕ ಫಾಫ್ ಡುಪ್ಲೆಸಿಸ್ ವಿಕೆಟ್ ಕಳೆದುಕೊಂಡಾಗ ಕ್ರೀಸ್​​ಗೆ ಬಂದ ಇವರು ಲಖನೌ ಬೌಲರ್​ಗಳ ಬೆಂಡೆತ್ತಿ ಆಕರ್ಷಕ ಚೊಚ್ಚಲ ಶತಕ ಸಿಡಿಸಿ ಅಬ್ಬರಿಸಿದರು. ಆರ್​ಸಿಬಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಕೇವಲ 54 ಎಸೆತಗಳಲ್ಲಿ 12 ಫೋರ್ ಹಾಗೂ 7 ಅಮೋಘ ಸಿಕ್ಸರ್​ಗಳನ್ನು ಸಿಡಿಸಿ ಅಜೇಯ 112 ರನ್ ಗಳಿಸಿದರು. ಪಂದ್ಯ ಮುಗಿದ ಬಳಿಕ ಮಾತನಾಡಿದ ರಜತ್ ಏನು ಹೇಳಿದರು ಕೇಳಿ.

ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸುವ ವೇಳೆ ಮಾತನಾಡಿದ ಪಟಿದಾರ್ ಮಹತ್ವದ ಹೇಳಿಕೆ ನೀಡಿದರು. ಮೊದಲಿಗೆ ತನ್ನ ಆಟದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಇವರು, “ನಾನು ಬಾಲ್​ಗೆ ಟೈಮ್ ಮಾಡುವಾಗ ನನ್ನ ಗಮನ ಪೂರ್ತಿ ಅದರ ಮೇಲೆ ಮಾತ್ರ ಇರುತ್ತಿತ್ತು. ಪವರ್ ಪ್ಲೇಯ ಕೊನೆಯ ಓವರ್​​ ಅನ್ನು ಕ್ರುನಾಲ್ ಪಾಂಡ್ಯ ಬೌಲಿಂಗ್ ಮಾಡಿದಾಗ ನನ್ನ ಉದ್ದೇಶ ಸ್ಪಷ್ಟವಾಗಿತ್ತು. ಹಾಗೂ ಆತ್ಮವಿಶ್ವಾಸದಿಂದ ಇದ್ದೆ. ಈ ವಿಕೆಟ್ ಮಾತ್ರ ಅದ್ಭುತವಾಗಿತ್ತು. ಅದಕ್ಕಾಗಿ ನನಗೆ ಕೆಲ ಅತ್ಯುತ್ತಮ ಹೊಡೆತ ಸಿಡಿಸಲು ಕಾರಣವಾಯಿತು. ಡಾಟ್ ಬಾಲ್ ಅನ್ನು ಸರಿಯಾಗಿ ಎದುರಿಸುವ ಸಾಮರ್ಥ್ಯ ನನ್ನಲ್ಲಿರುವ ಕಾರಣ ನಾನು ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ,” ಎಂದು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೈವಾನ್‌ ಸುತ್ತ ಚೀನಾ ಸೇನೆ! ಏನಿದು ಚೀನಾದ ಹೊಸ ಯೋಜನೆ?

Thu May 26 , 2022
ಇತ್ತೀಚಿಗಷ್ಟೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ತೈವಾನ್‌ ಮೇಲೆ ಚೀನಾ ಆಕ್ರಮಣ ಮಾಡಿದ್ರೆ ದ್ವೀಪ ರಾಷ್ಟ್ರಕ್ಕೆ ಸೈನ್ಯ ಸಹಿತ ಸಹಾಯ ಮಾಡ್ತೀವಿ ಅಂತ ಹೇಳಿದ್ರು. ಇದಕ್ಕೆ ಪ್ರತಿಯಾಗಿ ಈಗ ಚೀನಾ, ತೈವಾನ್‌ ಸುತ್ತ ಮಿಲಿಟರಿ ಅಭ್ಯಾಸ ಮಾಡೋದಾಗಿ ಘೋಷಿಸಿದೆ. ಅಮೆರಿಕ ಮತ್ತು ತೈವಾನ್‌ನ ಒಳಸಂಚಿನ ವಿರುದ್ಧ ಮತ್ತು ಚೀನಾದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆ ಕಾಪಾಡ್ಕೊಳ್ಳೋಕೆ ತೈವಾನ್‌ ಸುತ್ತ ಗಸ್ತು ತಿರೋಗೊದು ಮತ್ತು ತರಬೇತಿ ವ್ಯಾಯಾಮ ನಡೆಸೋದು ಅಗತ್ಯ ಕ್ರಮಗಳಾಗಿವೆ ಅಂತ […]

Advertisement

Wordpress Social Share Plugin powered by Ultimatelysocial