RAJ PALACE JAIPUR:ಆಹಾರ ಸೇವನೆಗೆ ಚಿನ್ನದ ತಟ್ಟೆ , ಮಲಗಲು ಬೆಳ್ಳಿಯ ಹಾಸಿಗೆ ನೀಡಲಾಗುತ್ತದೆ ಈ ಹೋಟೆಲ್‌ನಲ್ಲಿ;

ಭಾರತದಲ್ಲಿನ ಹೋಟೆಲ್​ ಒಂದರಲ್ಲಿರುವ ಸ್ನಾನ ಗೃಹದ ಟ್ಯಾಪ್​ ಅನ್ನು ಚಿನ್ನದಿಂದ ಮಾಡಲಾಗಿದೆ.

ಅಂದಹಾಗೆಯೇ ಆ ಹೋಟೆಲ್​ ಯಾವುದು ಗೊತ್ತಾ?. ಹೋಟೆಲ್‌ನ ಹೆಸರು ‘ದಿ ರಾಜ್ ಪ್ಯಾಲೇಸ್’. ಇದು ರಾಜಸ್ಥಾನದ ಜೈಪುರದಲ್ಲಿದೆ. ಏಷ್ಯಾದ ಅತ್ಯಂತ ದುಬಾರಿ ಹೋಟೆಲ್ ಎಂದು ಪರಿಗಣಿಸಲಾಗಿದೆ.

ಈ ಹೋಟೆಲ್‌ನ ವಿಶೇಷವೆಂದರೆ ಇಲ್ಲಿ ಅತಿಥಿಗಳನ್ನು ಬೆಳ್ಳಿಯ ಹಾಸಿಗೆಗಳಲ್ಲಿ ಮಲಗುವ ಅವಕಾಶ ಕಲ್ಪಿಸಲಾಗಿದೆ. ಹೋಟೆಲ್‌ನ ಎಲ್ಲಾ ಕೊಠಡಿಗಳು ಒಂದಕ್ಕಿಂತ ಒಂದು ದುಬಾರಿಯಾಗಿ ನಿರ್ಮಿಸಲಾಗಿದೆ.

ಈ ಹೋಟೆಲ್‌ನ ವಿಶೇಷ ದರ್ಬಾರ್ ಸೂಟ್‌ನಲ್ಲಿ ರಾತ್ರಿ ತಂಗಲು ಕೊಠಡಿಯ ಬಾಡಿಗೆ 18 ಲಕ್ಷ ರೂಪಾಯಿ ಪಾವತಿಸಬೇಕು. ಅತಿಥಿಗಳಿಗೆ ವಿಶೇಷ ಭಕ್ಷ್ಯಗಳಿಂದ ಅಲಂಕರಿಸಲ್ಪಟ್ಟ ಚಿನ್ನದ ತಟ್ಟೆಯನ್ನು ನೀಡಲಾಗುತ್ತದೆ.

ಈ ಹೋಟೆಲ್‌ನಲ್ಲಿ 78 ಐಷಾರಾಮಿ ಕೊಠಡಿಗಳಿವೆ. ಈ ಕೊಠಡಿಗಳಲ್ಲಿ ಸುಂದರವಾಗಿ ಕೆತ್ತಿದ ಅಮೃತಶಿಲೆಯನ್ನು ಮಾಡಲಾಗಿದೆ. ರಾಜ್ ಪ್ಯಾಲೇಸ್ ಹೋಟೆಲ್ 2007 ರಲ್ಲಿ ‘ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿ’ ವಿಭಾಗದಲ್ಲಿ ಅತ್ಯುತ್ತಮ ಹೆರಿಟೇಜ್ ಹೋಟೆಲ್ ಪ್ರಶಸ್ತಿಯನ್ನು ಪಡೆದಿದೆ.

ಅಮಿತಾಭ್ ಬಚ್ಚನ್ ಅವರು ತಮ್ಮ ಬೋಲ್ ಬಚ್ಚನ್ ಚಿತ್ರವನ್ನು ಈ ಹೋಟೆಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಇದಲ್ಲದೇ ಈ ಹೋಟೆಲ್ ನಲ್ಲಿ ಅಕ್ಷಯ್ ಕುಮಾರ್ ಮೇಜ್ ಚಿತ್ರೀಕರಣ ಮಾಡಿದ್ದಾರೆ. ಟಿವಿ ಧಾರಾವಾಹಿ ರತನ್ ಕಾ ಸ್ವಯಂವರ್ ಮತ್ತು ಝಾನ್ಸಿ ಕಿ ರಾಣಿ ಶೂಟಿಂಗ್ ಕೂಡ ಇದೇ ಹೋಟೆಲ್‌ನಲ್ಲಿ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

CRICKET:ಪಂತ್,ರಾಹುಲ್ ಗೆ ಪ್ರಮೋಷನ್,ರಹಾನೆ, ಪೂಜಾರಗೆ ಡಿಮೋಷನ್;

Wed Jan 26 , 2022
ಟೀಂ ಇಂಡಿಯಾ ಕ್ರಿಕೆಟಿಗರಾದ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ಸ್ ನಲ್ಲಿ ಪ್ರಮೊಷನ್ ಸಿಕ್ಕಿದೆಯಂತೆ. ಬಿಸಿಸಿಐ ಪ್ರಕಟಿಸಲಿರುವ ಸೆಂಟ್ರಲ್ ಕಾಂಟ್ರಾಕ್ಟ್ಸ್ ನಲ್ಲಿ ಈ ಇಬ್ಬರು ಗ್ರೇಡ್-ಎ ಪ್ಲಸ್ ವಿಭಾಗಕ್ಕೆ ಬಡ್ತಿ ಪಡೆಯುವ ಸಾಧ್ಯತೆಗಳಿವೆ. 2021 ವರ್ಷಕ್ಕೆ ಬಿಸಿಸಿಐ ಘೋಷಿಸಿದ ಒಪ್ಪಂದದಲ್ಲಿ ಈ ಇಬ್ಬರೂ ಗ್ರೇಡ್-ಎ ಯಲ್ಲಿದ್ದರು. ಕಳೆದು ಒಂದು ವರ್ಷದಲ್ಲಿ ಕೆ.ಎಲ್.ರಾಹುಲ್ ಮತ್ತು ರಿಷಬ್ ಪಂತ್ ಎಲ್ಲಾ ಪಾರ್ಮೆಟ್ ಗಳ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾದ ಖಾಯಂ […]

Advertisement

Wordpress Social Share Plugin powered by Ultimatelysocial