ನಟಸಾರ್ವಭೌಮ, ವರನಟ, ಪದ್ಮಭೂಷಣ ಪ್ರಶಸ್ತಿ ವಿಜೇತ ಡಾ. ರಾಜ್ ಕುಮಾರ್ ಅವರ 94 ಹುಟ್ಟುಹಬ್ಬ !

 

ಬೆಂಗಳೂರು, ಏಪ್ರಿಲ್ 24: ನಟಸಾರ್ವಭೌಮ, ವರನಟ, ಪದ್ಮಭೂಷಣ ಪ್ರಶಸ್ತಿ ವಿಜೇತ ಡಾ. ರಾಜ್ ಕುಮಾರ್ ಅವರ 94 ಹುಟ್ಟುಹಬ್ಬ ಇಂದಾಗಿದೆ. ಈ ನಿಟ್ಟಿನಲ್ಲಿ ಅಭಿಮಾನಿಗಳು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.

ಡಾ. ರಾಜ್ ಕುಮಾರ್ ಹುಟ್ಟುಹಬ್ಬದ ಸವಿನೆನಪಿನಲ್ಲಿ ಬೆಂಗಳೂರಿನ ಅಭಿಮಾನಿ ಸಂಘಗಳಿಂದ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ 11 ಗಂಟೆಗೆ ಡಾ.ರಾಜ್ ಸಮಾಧಿಯಿಂದ ಕೂಲಿ ನಗರ ಬ್ರಿಡ್ಜ್‌ ನವರೆಗೆ ಶ್ರೀರಾಜ್ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 10 ಸಾವಿರ ಜನರಿಗೆ ಅನ್ನದಾನ ಕಾರ್ಯಕ್ರಮವನ್ನು ಸಹ ಏರ್ಪಪಡಿಸಲಾಗಿದೆ.

ಡಾ.ರಾಜ್ ಬರೀ ನಟರೊಂದೇ ಅಲ್ಲ, ಗಾಯಕರಾಗಿಯೂ ಪ್ರಸಿದ್ಧರು. ತಮ್ಮ ಗಾಯನಕ್ಕಾಗೇ ರಾಷ್ಟ್ರಪ್ರಶಸ್ತಿ ಪಡೆದ ನಟರಾಗಿದ್ದಾರೆ. ಕನ್ನಡ ಕಲಾರಸಿಕರ ಹೃದಯ ಸಾಮ್ರಾಜ್ಯದ ಅಧಿಪತಿ ಎಂದೇ ಹೇಳಲಾಗುವ ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸವಿನೆನಪಿನಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವಾರು ಮಂದಿ ಗೌರವ ಸಲ್ಲಿಸಿದ್ದಾರೆ.

ನಾಡು, ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ: ಸಿಎಂ

ಕೂ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ನಟಸಾರ್ವಭೌಮ, ಕನ್ನಡಿಗರ ಆರಾಧ್ಯ ದೈವ, ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ವರನಟ ಡಾ.ರಾಜ್ ಕುಮಾರ್ ರವರ ಜನ್ಮದಿನದಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯಾಗಿ, ತೆರೆಯ ಮೇಲೆ ತಮ್ಮ ಅದ್ಭುತ ನಟನೆಯಿಂದ, ತೆರೆಯ ಹಿಂದೆ ತಮ್ಮ ಹೃದಯ ವೈಶಾಲ್ಯತೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ಡಾ.ರಾಜ್ ಅವರು ಈ ನಾಡು, ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದುದು,” ಎಂದು ಹೇಳಿದ್ದಾರೆ.

ಇನ್ನು “ವರನಟ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು. ಗೋಕಾಕ್ ಚಳುವಳಿಯ ಮೂಲಕ ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು ಶ್ರಮಿಸುವ ಜತೆ ಅನೇಕ ಸುಪ್ರಸಿದ್ಧ ಪೌರಾಣಿಕ, ಸಾಮಾಜಿಕ, ಕೌಟುಂಬಿಕ ಚಲನಚಿತ್ರ ನೀಡಿದ ಕನ್ನಡದ ಕಣ್ಮಣಿ ಅಣ್ಣಾವ್ರ ಸರಳ ಸಜ್ಜನಿಕೆಯ ವ್ಯಕ್ತಿತ್ವ ನಮ್ಮೆಲ್ಲರಿಗೂ ಆದರ್ಶ,” ಎಂದು ಸಚಿವ ಅಶ್ವಥ್ ನಾರಾಯಣ್ ಕೂ ಮಾಡಿದ್ದಾರೆ.

“ಕಲಾ ರಸಿಕರ ಮನ ರಂಜಿಸಿದ ಅದ್ಭುತ ಕಲಾವಿದ ಅಣ್ಣಾವ್ರು”

“ಕನ್ನಡನಾಡಿನ ಹೆಮ್ಮೆಯ ವರನಟ, ನಟಸಾರ್ವಭೌಮ ಶ್ರೀ ಡಾ.ರಾಜ್‌ಕುಮಾರ್ ಅವರ ಪುಣ್ಯಸ್ಮರಣೆಯಂದು ಕೋಟಿ ನಮನಗಳು. 200 ಕ್ಕೂ ಅಧಿಕ ಚಲನಚಿತ್ರಗಳನ್ನು ನೀಡಿ ಕಲಾ ರಸಿಕರ ಮನ ರಂಜಿಸಿದ ಅದ್ಭುತ ಕಲಾವಿದ ಅಣ್ಣಾವ್ರು. ಮನೋಜ್ಞ ಅಭಿನಯ, ಸರಳ ವ್ಯಕ್ತಿತ್ವದ ಜನ ಒಡನಾಟದೊಂದಿಗೆ ಅವರು ಎಲ್ಲರ ಮನದಾಳದಲ್ಲಿ ನೆಲೆಸಿದ್ದಾರೆ,” ‘ ಎಂದು ಸಚಿವ ಬಿ.ಸಿ.ನಾಗೇಶ್ ಸ್ಮರಿಸಿದ್ದಾರೆ.

“ನಾಡಿನ ಕಲಾರಂಗದ ಸರ್ವಶ್ರೇಷ್ಠ ವ್ಯಕ್ತಿತ್ವ, ನಟಸಾರ್ವಭೌಮ, ಬಂಗಾರದ ಮನುಷ್ಯ ಶ್ರೀ ಡಾ.ರಾಜ್‍ಕುಮಾರ್ ಅವರ ಪುಣ್ಯತಿಥಿಯಂದು ಆದರಪೂರ್ವಕ ನಮನಗಳು. ಮನಮುಟ್ಟುವ ನಟನೆ, ಕಂಠಸಿರಿಯ ಮೂಲಕ ಅವರು ಸದಾ ನಮ್ಮೊಂದಿಗೆ ನೆಲೆಸಿದ್ದಾರೆ. ಅಣ್ಣಾವ್ರು ಎಂದಿಗೂ ಅಮರ,” ಎಂದು ಸಚಿವ ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.

“ಕನ್ನಡ ನಾಡಿನ ಮೇರುನಟ, ಗಾನಗಂಧರ್ವ, ನಟ ಸಾರ್ವಭೌಮ ಡಾ. ರಾಜಕುಮಾರ ಅವರ ಜನ್ಮದಿನದಂದು ಗೌರವಯುತ ನಮನಗಳು,” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಮನ ಸಲ್ಲಿಸಿದ್ದಾರೆ. “ಸಿನಿಮಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮೆರೆದ ಕನ್ನಡ ಖ್ಯಾತ ನಟರಾದ ಡಾ. ರಾಜ್ ಕುಮಾರ್ ಅವರ ಜೀವನಾದರ್ಶಗಳು ಸದಾ ಅನುಕರಣೀಯ. ಶ್ರೇಷ್ಠ ನಟನ ಜನ್ಮದಿನಾಚರಣೆಯ ಶುಭಾಶಯಗಳು,” ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗುಂಪು ದಾಳಿ ವೇಳೆ ಪೊಲೀಸರು ನಿಮ್ಮನ್ನು ರಕ್ಷಿಸುವುದಿಲ್ಲ, ಬಾಟಲಿಗಳು ಮತ್ತು ಬಾಣಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

Sun Apr 24 , 2022
ವಿವಾದಕ್ಕೆ ಕಾರಣವಾದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮನೆ ಅಥವಾ ನೆರೆಹೊರೆಗಳ ಮೇಲೆ ದಾಳಿ ಮಾಡಲು ಜನರು ಬಂದರೆ ತಮ್ಮ ಮನೆಗಳನ್ನು ‘ತಂಪು ಪಾನೀಯ ಬಾಟಲಿಗಳು ಮತ್ತು ಬಾಣಗಳಿಂದ’ ಸಜ್ಜುಗೊಳಿಸಲು ನಾಗರಿಕರನ್ನು ಕೇಳಿಕೊಂಡರು. ಅಂತಹ ಪರಿಸ್ಥಿತಿಯಲ್ಲಿ ಅವರನ್ನು ರಕ್ಷಿಸಲು ಪೊಲೀಸರು ಬರುವುದಿಲ್ಲ, ಆದ್ದರಿಂದ ಅವರೇ ಸಿದ್ಧರಾಗಿರಬೇಕು ಎಂದು ಹೇಳಿದರು. ಉನ್ನಾವೋ ಸಂಸದ ಸಾಕ್ಷಿ ಮಹಾರಾಜ್,ಆಗಾಗ್ಗೆ ವಿವಾದಗಳಿಂದ ಸುದ್ದಿಯಲ್ಲಿರುವವರು. ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಹೇಳಿಕೆಗಳು, “ಈ […]

Advertisement

Wordpress Social Share Plugin powered by Ultimatelysocial