ಚಿತ್ರ ವಿಮರ್ಶೆ: ಫ್ಯಾಮಿಲಿ ಡ್ರಾಮಾದಲ್ಲಿ ‘ಗರುಡ’ ಪುರಾಣ

 

ಆತ ಮೇಲ್ನೋಟಕ್ಕೆ ಸೈಲೆಂಟ್‌ ಹುಡುಗ. ಗೋವಾದಲ್ಲಿ ತಾನಾಯಿತು, ತನ್ನ ಹೋಟೆಲ್‌ ಆಯಿತು ಎಂದುಕೊಂಡಿದ್ದ ಆತನಿಗೊಂದು ಫ್ಲ್ಯಾಶ್‌ಬ್ಯಾಕ್‌ ಇದೆ. ಅದ ಕ್ಕೆ ಕಾರಣ ಸೈಲೆಂಟ್‌ ಹುಡುಗನ ಹಿಂದಿರುವ ವೈಲೆಂಟ್‌ ಸ್ಟೋರಿ. ಅಷ್ಟಕ್ಕೂ ಆ ವೈಲೆಂಟ್‌ ಸ್ಟೋರಿ ಏನು ಎಂಬ ಕುತೂಹಲ ನಿಮಗಿದ್ದರೆ ನೀವು “ಗರುಡ’ ನೋಡಬಹುದು.

“ಗರುಡ’ ಒಂದು ಔಟ್‌ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾ. ಫ್ಯಾಮಿಲಿ ಹಾಗೂ ಮಾಸ್‌ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಕಾರಣ, ಇಲ್ಲಿ ಕಥೆಗಿಂತ ಸನ್ನಿವೇಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಹುತೇಕ ಸಿನಿಮಾಗಳಂತೆ ಇಲ್ಲೂ ಕಥೆ ಟ್ರ್ಯಾಕ್‌ಗೆ ಬರೋದು ದ್ವಿತೀಯಾರ್ಧದಲ್ಲಿ. ಅಲ್ಲಿವರೆಗೆ ಪ್ರೇಕ್ಷಕರಿಗೆ ಗೋವಾ ದರ್ಶನ ಮಾಡಿಸಿದ್ದಾರೆ. ಇಲ್ಲಿ ನಿಮಗೆ ಗ್ಲಾಮರ್‌, ಫ‌ನ್‌, ಕಾಮಿಡಿ… ಎಲ್ಲದರ ದರ್ಶನವಾಗುತ್ತದೆ.

ಇಂಟರ್‌ನ್ಯಾಶನಲ್‌ ಮಾಫಿಯಾವೊಂದರ ಸುತ್ತ ಸಾಗುವ ಕಥೆಯಲ್ಲಿ ಒಂದು ಸುಂದರ ಕುಟುಂಬದ ಕತೆಯನ್ನು ಸೇರಿಸಲಾಗಿದೆ. ಒಂದಷ್ಟು ದೃಶ್ಯಗಳು ಪ್ರೇಕ್ಷಕರ ಊಹೆಗೆ ತಕ್ಕಂತೆ ಸಾಗಿದರೂ, ಅಲ್ಲಲ್ಲಿ ಬರುವ ಟ್ವಿಸ್ಟ್‌-ಟರ್ನ್ಗಳು ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡಿವೆ. ಅದರಲ್ಲೂ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಟ್ವಿಸ್ಟ್‌ ಹಾಗೂ ಹೈವೋಲ್ಟೇಜ್‌ ಫೈಟ್ಸ್‌ ಚಿತ್ರದ ಪ್ಲಸ್‌ ಪಾಯಿಂಟ್‌. ಇನ್ನು, ಚಿತ್ರದಲ್ಲಿ ಬರುವ ಒಂದಷ್ಟು ಕಾಮಿಡಿ ಟ್ರ್ಯಾಕ್‌ಗಳನ್ನು ಟ್ರಿಮ್‌ ಮಾಡಿದ್ದರೆ ಚಿತ್ರದ ವೇಗ ಹೆಚ್ಚುತ್ತಿತ್ತು.

ನಾಯಕ ಸಿದ್ಧಾರ್ಥ್ ಮಹೇಶ್‌ ಆಯಕ್ಷನ್‌ ದೃಶ್ಯಗಳಲ್ಲಿ ಇಷ್ಟವಾಗುತ್ತಾರೆ. ಅದರಾಚೆ ಸೆಂಟಿಮೆಂಟ್‌ ಹಾಗೂ ಇತರ ದೃಶ್ಯಗಳಲ್ಲಿ ಸಿದ್ಧಾರ್ಥ್ ಇನ್ನಷ್ಟು ಪಳಗಬೇಕು. ನಾಯಕಿಯರಾದ ಐಂದ್ರಿತಾ ರೇ ಹಾಗೂ ಆಶಿಕಾ ರಂಗನಾಥ್‌ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ಪೊಲೀಸ್‌ ಆಫಿಸರ್‌ ಆಗಿ ಶ್ರೀನಗರ ಕಿಟ್ಟಿ, ಡಾನ್‌ ಆಗಿ ಆದಿ ಲೋಕೇಶ್‌, ರಂಗಾಯಣ ರಘು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಸ ಕಾರು ಖರೀದಿಸಿದ ನವರಸ ನಾಯಕ - ಕಷ್ಟದ ದಿನಗಳನ್ನು ನೆನೆದ ಜಗ್ಗೇಶ್

Sat May 21 , 2022
  ಜಗ್ಗೇಶ್​ ಚಿತ್ರರಂಗದಲ್ಲಿ ಈಗಲು ಸಹ ವಿಭಿನ್ನ ಚಿತ್ರಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಹಾಗೆಯೇ ಸಾಮಾಜಿಕ ಮಾಧ್ಯಮದಲ್ಲಿ ಆಕ್ಟೀವ್​ ಆಗಿರುವ ಇರುವ ಜೀವನದ ಸಂತಸದ ಕ್ಷಣ ಹಾಗೂ ನೋವಿನ ವಿಚಾರಗಳನ್ನು ಸಹ ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಳ್ಳುತ್ತಾರೆ. ಇದೀಗ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದ್ದು, ಹೊಸ ಕಾರಿನ ಫೋಟೋವನ್ನು ಜಗ್ಗೇಶ್​ ತಮ್ಮ ಪೋಸ್ಟ್​ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಹೊಸ ಕಾರಿನ ಫೋಟೋ ಶೇರ್​ ಮಾಡಿರುವ ಅವರು, ರಾಯರ ಕೃಪೆಯಿಂದ […]

Advertisement

Wordpress Social Share Plugin powered by Ultimatelysocial