‘ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ’ಗೂ ‘ಕೊರೋನಾ ಪಾಸಿಟಿವ್’

 

ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್   ಪುತ್ರಿ ಐಶ್ವರ್ಯಾ   ಅವರಿಗೂ ಕೊರೋನಾ ಪಾಸಿಟಿವ್   ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರೋದಾಗಿ ತಿಳಿದು ಬಂದಿದೆ.ಈ ಕುರಿತಂತೆ ತಮ್ಮ ಇನ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವಂತ ರಜನಿಕಾಂತ್ ಪುತ್ರಿ ಐಶ್ವರ್ಯಾ, ಕೊರೋನಾ ಎಲ್ಲಾ ಮುಂಜಾಗ್ರತಾ ಕ್ರಮಗಳ ನಂತ್ರವೂ, ತನಗೊ ಕೊರೋನಾ ಪರೀಕ್ಷೆಯಿಂದಾಗಿ ಕೋವಿಡ್ ಪಾಸಿಟಿವ್ ಎಂದು ದೃಢಪಟ್ಟಿದೆ. ತಪ್ಪದೇ ಎಲ್ಲರೂ ಮಾಸ್ಕ್ ಧರಿಸಿ, ಲಸಿಕೆಯನ್ನು ಪಡೆಯೋದು ಮರೆಯಬೇಡಿ ಎಂಬುದಾಗಿ ಮನವಿ ಮಾಡಿದ್ದಾರೆ.ಪೋಸ್ಟ್ ಜೊತೆಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವಂತ ಪೋಟೋ ಕೂಡ ಶೇರ್ ಮಾಡಿದ್ದರಿಂದಾಗಿ, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರೋದಾಗಿ ತಿಳಿದು ಬಂದಿದೆ. ಈ ವಿಷಯ ತಿಳಿದಂತ ಅವರ ಅಭಿಮಾನಿಗಳು, ಸೋಷಿಯಲ್ ಮೀಡಿಯಾ ಮೂಲಕ ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಗಳು ಕಾಣೆ ಯಾಗಿದ್ದಾಳೆ ಎಂದು ಕಂಪ್ಲೈಂಟ್ ಕೊಟ್ಟ ತಂದೆ, ಆದ್ರೆ ಆಗಿದ್ದು ಬೇರೆ .

Wed Feb 2 , 2022
ಬಿಹಾರ: ನನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ ತಂದೆಗೆ ಶಾಕ್​ ಎದುರಾಗಿದೆ. ಆತನ ದೂರಿನ ಅನ್ವಯ ಪೊಲೀಸರು ಕಿಡ್ನ್ಯಾಪ್ ಕೇಸ್ ಎಫ್‌ಐಆರ್ ದಾಖಲಿಸಿದ್ದರು. ಅತ್ತ ಪೊಲೀಸರು ಯುವತಿಗಾಗಿ ಹುಡುಕಾಟ ನಡೆಸಿದ್ದರೆ, ಇತ್ತ ಯುವತಿ ತನಗೆ ಮದುವೆಯಾಯ್ತು ಎಂದು ತನ್ನ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾಳೆ.ಮಗಳ ವಿಡಿಯೋ ನೋಡಿದ ಆಕೆಯ ಕುಟುಂಬದವರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಬಿಹಾರದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು […]

Advertisement

Wordpress Social Share Plugin powered by Ultimatelysocial