‘ರಾಜ್ಯ ಸರ್ಕಾರಿ ನೌಕರ’ರಿಗೆ ಬಿಗ್ ಶಾಕ್: ಜಾತಿ ಆಧಾರದ ಮೇಲೆ ‘ಸರ್ಕಾರಿ ನೌಕರರ ಸಂಘ’ ರಚಿಸುವಂತಿಲ್ಲ – ಸರ್ಕಾರ ಖಡಕ್ ಆದೇಶ

 

ಬೆಂಗಳೂರು : ಸರ್ಕಾರಿ ನೌಕರರ ಸೇವಾ ಸಂಘಗಳನ್ನು ಜಾತಿ, ಧರ್ಮ, ಇತ್ಯಾದಿ ಒಳಗಿರುವ ಯಾವುದೇ ಸಮೂಹ ಆಧಾರದ ಮೇಲೆ ರಚಿಸತಕ್ಕದ್ದಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ತೇಜಾವತಿ ಎನ್ ಆದೇಶ ಹೊರಡಿಸಿದ್ದು, ನಿರ್ದಿಷ್ಟ ವೃಂದ ಅಥವಾ ವರ್ಗಕ್ಕೆ ಸೇರಿರುವ ವ್ಯಕ್ತಿಗಳಲ್ಲಿ ಶೇ.50 ಕ್ಕಿಂತ ಹೆಚ್ಚು ಸದಸ್ಯತ್ವ ಹೊಂದಿರುವ ಯಾವುದೇ ಸೇವಾ ಸಂಘಕ್ಕೆ ಮಾನ್ಯತೆ ನೀಡಬಹುದಾಗಿದ್ದು, ಎಲ್ಲಾ ಅಂತಹ ಸರ್ಕಾರಿ ನೌಕರರು ಸಂಘಟದ ಸದಸ್ಯತ್ವಕ್ಕೆ ಅರ್ಹರಾಗಿರುತ್ತಾರೆ.

ಅಲ್ಲದೇ ಮಾನ್ಯತೆಯನ್ನು ಇಲಾಖೆಯಲ್ಲಿನ ಪ್ರತಿಯೊಂದು ವೃಂದದಲ್ಲಿ ಒಂದು ಸೇವಾ ಸಂಘಕ್ಕಿಂತ ಹೆಚ್ಚಿನದಕ್ಕೆ ನೀಡತಕ್ಕದ್ದು . ಹಾಗೂ ಒಂದು ಸೇವಾ ಸಂಘವನ್ನು ಸರ್ಕಾರಿ ನೌಕರರ ಸೇವಾ ಸಂಘಗಳನ್ನು ಜಾತಿ, ಧರ್ಮ, ಇತ್ಯಾದಿ ಒಳಗಿರುವ ಯಾವುದೇ ಸಮೂಹ ಆಧಾರದ ಮೇಲೆ ರಚಿಸತಕ್ಕದ್ದಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರರ ಸೇವಾ ಸಂಘಗಳಿಗೆ ಮಾನ್ಯತೆ ನೀಡುವಾಗ ಸದರಿ ಸಂಘವು ನಿರ್ದಿಷ್ಟ ವೃಂದ ಅಥವಾ ವರ್ಗಕ್ಕೆ ಸೇರಿರುವ ಸೇವಾ ಸಂಘಗಳಿಗೆ ಮಾತ್ರ ಇಲಾಖೆಗಳು ಮಾನ್ಯತೆ ನೀಡುವಂತೆ ಮತ್ತು ಈಗಾಗಲೇ ಜಾತಿ , ಧರ್ಮ , ಇತ್ಯಾದಿ ಒಳಗಿರುವ ಯಾವುದೇ ಸಮೂಹದ ಮೇಲೆ ರಚಿತವಾಗಿರುವ ಸೇವಾ ಸಂಘಗಳ ಮಾನ್ಯತೆಯನ್ನು ರದ್ದುಪಡಿಸುವಂತೆ ಹಾಗೂ ಮಾನ್ಯತೆ ಪಡೆಯದೇ ಚಾಲ್ತಿಯಲ್ಲಿರುವ ಸಂಘಗಳನ್ನು ನಿರ್ಬಂಧಿಸುವಂತೆ ಆಡಳಿತ ಇಲಾಖೆಗಳಿಗೆ/ಸಕ್ಷಮ ಪ್ರಾಧಿಕಾರಗಳಿಗೆ ಸೂಚನೆ ನೀಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರಿಷ್ಮಾ ಕಪೂರ್ ಲತಾ ಮಂಗೇಶ್ಕರ್ ಅವರ ಸಾಂಪ್ರದಾಯಿಕ ಚಿತ್ರವನ್ನು ಹಂಚಿಕೊಂಡಿದ್ದಾರೆ;

Mon Feb 7 , 2022
ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರವನ್ನು ವೈದಿಕ ಮಂತ್ರಗಳ ಪಠಣಗಳ ನಡುವೆ ಜ್ವಾಲೆಗೆ ರವಾನಿಸಿದಾಗಲೂ ಬಾಲಿವುಡ್ ಸೆಲೆಬ್ರಿಟಿಗಳಿಂದ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬರುತ್ತಿತ್ತು. “ದಿಲ್ ತೋ ಪಾಗಲ್ ಹೈ” ನಿಂದ “ಜುಬೇದಾ” ವರೆಗೆ ಹಲವಾರು ಲತಾ ಮಂಗೇಶ್ಕರ್ ಹಾಡುಗಳನ್ನು ಚಿತ್ರಿಸಿರುವ ಕರಿಷ್ಮಾ ಕಪೂರ್, ಶೀರ್ಷಿಕೆಯೊಂದಿಗೆ ತಮ್ಮ Instagram ಖಾತೆಯಲ್ಲಿ ರಾಜ್ ಕಪೂರ್ ಅವರ “ಆವಾರಾ” (1951) ನ ಪ್ರಥಮ ಪ್ರದರ್ಶನದ ಎಬ್ಬಿಸುವ ಥ್ರೋಬ್ಯಾಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. : “ದಾದಾಜಿಯವರ ‘ಆವಾರಾ’ದ ಪ್ರಥಮ […]

Advertisement

Wordpress Social Share Plugin powered by Ultimatelysocial