ರಾಕೇಶ್ ಶರ್ಮಾ ಅಂತರಿಕ್ಷಯಾನ ಮಾಡಿದ ಪ್ರ್ರಥಮ ಭಾರತೀಯರಾಗಿ ಖ್ಯಾತರಾದವರು

ಅಂತರಿಕ್ಷಯಾನ ಮಾಡಿದ ಪ್ರ್ರಥಮ ಭಾರತೀಯರಾಗಿ ಖ್ಯಾತರಾದವರು ರಾಕೇಶ್ ಶರ್ಮಾ. ಅವರು 1984 ವರ್ಷದ ಎಪ್ರಿಲ್ 3 ರಂದು ಸೋವಿಯತ್ ಅಂತರಿಕ್ಷ ನೌಕೆ ಸೋಯಜ್ ಟಿ-11 ರಲ್ಲಿ ಪಯಣಿಸಿ  ಸುಮಾರು 8 ದಿನ ಅಂತರಿಕ್ಷದಲ್ಲಿ ಕಳೆದರು.ರಾಕೇಶ್ ಶರ್ಮಾ 1949ರ ಜನವರಿ 13ರಂದು ಪಂಜಾಬಿನ ಪಟಿಯಾಲಾ ನಗರದಲ್ಲಿ ಜನಿಸಿದರು. ಭಾರತೀಯ ವಾಯು ಸೇನೆಯಲ್ಲಿ ಪರೀಕ್ಷಕ ವೈಮಾನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ 1982 ವರ್ಷದ ಸೆಪ್ಟೆಂಬರ್ 20 ರಂದು ಅಂತರಿಕ್ಷ ಯಾನಿಯಾಗಿ ಆಯ್ಕೆಯಾದರು.ಕಠಿಣ ಆಯ್ಕೆ ಪ್ರಕ್ರಿಯೆಯ ನಂತರ ರಾಕೇಶ್ ಶರ್ಮಾ ಮತ್ತು ವಿಂಗ್ ಕಮ್ಯಾಂಡರ್ ರವೀಶ್ ಮಲ್ಹೊತ್ರಾ ಆಯ್ಕೆಯಾಗಿ ರಷ್ಯಾದ ಯೂರಿ ಗಗಾರಿನ್ ಕೇಂದ್ರದಲ್ಲಿ ಮತ್ತು ಬೆಂಗಳೂರಿನ ಇಸ್ರೋ ಕೇಂದ್ರಗಳಲ್ಲಿ ಅಂತರಿಕ್ಷಯಾನಕ್ಕಾಗಿ ತರಬೇತಿ ಪಡೆದರು. ಕೊನೆಯಲ್ಲಿ ರಾಕೇಶ್ ಶರ್ಮಾರನ್ನು ಅಂತರಿಕ್ಷಯಾನ ಮಾಡುವ ವ್ಯಕ್ತಿ ಎಂದು ಮತ್ತು ಅನಿವಾರ್ಯತೆಯ ಸಂದರ್ಭ ಏರ್ಪಟ್ಟಲ್ಲಿ ಅವರ ಬದಲಿ ವ್ಯವಸ್ಥೆಯಾಗಿ ರವೀಶ್ ಮಲ್ಹೊತ್ರಾ ಅವರೆಂದು ನಿರ್ಧರಿಸಲಾಯಿತು.
ಸೋವಿಯತ್ ಗಗನಯಾತ್ರಿ ಯೂರಿ ಮ್ಯಾಲಶೇವ್ ನೇತ್ವತ್ವದಲ್ಲಿ ಹಾಗು ಗೆನಡಿ ಸ್ಟ್ರೆಕಲೋವ್ ಜೊತೆಯಲ್ಲಿ ರಾಕೇಶ್ 1984ರ ಏಪ್ರಿಲ್ 3ರಂದು ಇಂದಿನ ಕಜಖಸ್ಥಾನದಲ್ಲಿರುವ ಬೈಕನೌರ್ ಅಂತರಿಕ್ಷಾ ಉಡಾವಣಾ ಕೇಂದ್ರದಿಂದ ಹಾರಿದ ಸೋಯಜ್ ಟಿ-11 ಏರಿ ಸಲ್ಯೂಟ್-7 ಅಂತರಿಕ್ಷ ನಿಲ್ದಾಣ ಸೇರಿದರು. ತಮ್ಮ 35 ನೇ ವಯಸ್ಸಿನಲ್ಲಿ ಅಂತರಿಕ್ಷಯಾನ ಮಾಡಿದ ರಾಕೇಶ್ ಶರ್ಮಾ ಅವರು ಸಲ್ಯೂಟ್-7 ನಿಲ್ದಾಣದಲ್ಲಿ 8 ದಿನ ಕಳೆದು ಹಲವಾರು ಪ್ರಯೋಗಗಳು ಮತ್ತು ಛಾಯಾಗ್ರಹಣ ನಡೆಸಿದರು. ಈ ಸಾಧನೆಯಿಂದಾಗಿ ಭಾರತ ಅಂತರಿಕ್ಷಯಾನ ಕೈಗೊಂಡ 14ನೇ ರಾಷ್ಟ್ರ ಮತ್ತು ರಾಕೇಶ್ ಶರ್ಮಾ ಅಂತರಿಕ್ಷಯಾನ ಮಾಡಿದ 138ನೇ ಯಾತ್ರಿ ಎಂಬ ದಾಖಲೆ ಸೃಷ್ಟಿಯಾಯಿತು. 1984 ವರ್ಷದ ಏಪ್ರಿಲ್ 11ರಂದು ರಾಕೇಶ್ ಸೋಯಜ್ ಟಿ-10 ಏರಿ ಭೂಮಿ ಸೇರಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಡಿತ್ ಶಿವಕುಮಾರ್ ಶರ್ಮ ಮಹಾನ್ ಸಂಗೀತಜ್ಞ

Fri Jan 13 , 2023
ಪಂಡಿತ್ ಶಿವಕುಮಾರ್ ಶರ್ಮ ಮಹಾನ್ ಸಂಗೀತಜ್ಞರಾಗಿ ಮತ್ತು ಸಂತೂರ್ ವಾದಕರಾಗಿ ವಿಶ್ವಪ್ರಿಯರಾಗಿದ್ದವರು. ಸಂತೂರ್ ವಾದ್ಯವೆಂದರೆ ಸ್ವಾಭಾವಿಕವಾಗಿ ಎಂಬಂತೆ ಜನಮಾನಸದಲ್ಲಿ ಮೂಡುವ ಹೆಸರು ಪಂಡಿತ್ ಶಿವಕುಮಾರ್ ಶರ್ಮ. ಪಂಡಿತ್ ಶಿವಕುಮಾರ್ ಶರ್ಮ ಅವರು 1938ರ ಜನವರಿ 13ರಂದು ಜಮ್ಮುವಿನಲ್ಲಿ ಜನಿಸಿದರು. ತಂದೆ ಪಂಡಿತ್ ಉಮಾದತ್ತ ಶರ್ಮ ಸಂಗೀತಗಾರರಾಗಿದ್ದು ಗಾಯನದ ಜೊತೆಗೆ ತಬಲಾ ಮತ್ತು ಹಾರ್ಮೋನಿಯಂ ನುಡಿಸುವಿಕೆಯಲ್ಲಿ ಸಹಾ ಪ್ರಭುತ್ವ ಸಾಧಿಸಿದ್ದರು. ತಂದೆಯಿಂದ ಐದನೆಯ ವಯಸ್ಸಿನಲ್ಲೇ ಶಿವಕುಮಾರ ಶರ್ಮ ಅವರ ಸಂಗೀತ ಕಲಿಕೆ […]

Advertisement

Wordpress Social Share Plugin powered by Ultimatelysocial