ಪಂಡಿತ್ ಶಿವಕುಮಾರ್ ಶರ್ಮ ಮಹಾನ್ ಸಂಗೀತಜ್ಞ

ಪಂಡಿತ್ ಶಿವಕುಮಾರ್ ಶರ್ಮ ಮಹಾನ್ ಸಂಗೀತಜ್ಞರಾಗಿ ಮತ್ತು ಸಂತೂರ್ ವಾದಕರಾಗಿ ವಿಶ್ವಪ್ರಿಯರಾಗಿದ್ದವರು. ಸಂತೂರ್ ವಾದ್ಯವೆಂದರೆ ಸ್ವಾಭಾವಿಕವಾಗಿ ಎಂಬಂತೆ ಜನಮಾನಸದಲ್ಲಿ ಮೂಡುವ ಹೆಸರು ಪಂಡಿತ್ ಶಿವಕುಮಾರ್ ಶರ್ಮ.
ಪಂಡಿತ್ ಶಿವಕುಮಾರ್ ಶರ್ಮ ಅವರು 1938ರ ಜನವರಿ 13ರಂದು ಜಮ್ಮುವಿನಲ್ಲಿ ಜನಿಸಿದರು. ತಂದೆ ಪಂಡಿತ್ ಉಮಾದತ್ತ ಶರ್ಮ ಸಂಗೀತಗಾರರಾಗಿದ್ದು ಗಾಯನದ ಜೊತೆಗೆ ತಬಲಾ ಮತ್ತು ಹಾರ್ಮೋನಿಯಂ ನುಡಿಸುವಿಕೆಯಲ್ಲಿ ಸಹಾ ಪ್ರಭುತ್ವ ಸಾಧಿಸಿದ್ದರು. ತಂದೆಯಿಂದ ಐದನೆಯ ವಯಸ್ಸಿನಲ್ಲೇ ಶಿವಕುಮಾರ ಶರ್ಮ ಅವರ ಸಂಗೀತ ಕಲಿಕೆ ಆರಂಭಗೊಂಡಿತು. ಆರಂಭದಲ್ಲಿ ತಬಲಾ ಕಲಿಕೆ ಆರಂಭಿಸಿದ ಶಿವಕುಮಾರ ಶರ್ಮರು ಮುಂದೆ ಗಾಯನದಲ್ಲಿ ತರಬೇತಿ ಪಡೆದರು. ಹನ್ನೆರಡನೇ ವಯಸ್ಸಿನ ವೇಳೆಗೆ ಜಮ್ಮುವಿನ ರೇಡಿಯೋ ಕೇಂದ್ರದಲ್ಲಿ ಅವರ ಗಾಯನ ಪ್ರಸಾರವಾಗಿತ್ತು.
ಅಂದಿನ ದಿನಗಳಲ್ಲಿ ಉಮಾದತ್ತ ಶರ್ಮ ಅವರು ತಂತಿ ವಾದ್ಯಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾಗ ಅವರಿಗೆ ನೂರು ತಂತಿಗಳಿದ್ದ ಸಂತೂರ್ ಎಂಬ ಕಾಶ್ಮೀರದ ಪ್ರಾಂತೀಯ ಜನಪದ ವಾದ್ಯ ಅಪಾರವಾಗಿ ಆಸ್ಥೆ ಹುಟ್ಟಿಸಿತು. ಅವರಿಗೆ ತಮ್ಮ ಮಗ ಅದರಲ್ಲಿ ಸಂಗೀತ ನುಡಿಸಬೇಕು ಎಂದು ಆಶಯ ಮೂಡಿತು.
ಶಿವಕುಮಾರ್ ಶರ್ಮರು ತಮ್ಮ 13ನೆಯ ವಯಸ್ಸಿನಲ್ಲಿ ಸಂತೂರ್ ಬಳಸಲು ಪ್ರಾರಂಭಿಸಿದರು. 1955ರಲ್ಲಿ ಅವರು ಮುಂಬೈನಲ್ಲಿ ಮೊದಲ ಸಾರ್ವಜನಿಕ ಪ್ರದರ್ಶನವನ್ನು ನೀಡಿದರು. ಕಾಲೇಜಿನಲ್ಲಿದ್ದಾಗ ತಬಲಾ ವಾದನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲಸ್ಥಾನ ಪಡೆದಿದ್ದ ಶಿವಕುಮಾರ್ ಶರ್ಮ ಸಂಗೀತಲೋಕದಲ್ಲಿ ಅಪರಚಿತವೆನಿಸಿದ್ದ ಸಂತೂರ್ ವಾದ್ಯದ ಹಿಂದೆ ಹೊರಟರು.
ಪಂಡಿತ್ ಶಿವಕುಮಾರ್ ಶರ್ಮ ಅವರು 1955ರಲ್ಲಿ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಮೊದಲ ಬಾರಿಗೆ ಶಾಸ್ತ್ರೀಯವಾಗಿ ಸಂತೂರ್ ವಾದನವನ್ನು ಪ್ರಸ್ತುತಗೊಳಿಸಿ ಜನಮೆಚ್ಚುಗೆ ಪಡೆದರು. ನಂತರದ ಹತ್ತು ವರ್ಷಗಳಲ್ಲಿ ಆ ವಾದ್ಯವನ್ನು ನಾನಾ ರೀತಿಯಲ್ಲಿ ಪರಿಷ್ಕರಿಸಿ ಇದರಲ್ಲಿದ್ದ ನೂರು ತಂತಿಗಳಲ್ಲಿ ಕೆಲವನ್ನು ತೆಗೆದರು. ವಾದ್ಯದ ತಾಂತ್ರಿಕ ರಚನೆಯ ಜೊತೆಗೆ ಅದನ್ನು ನುಡಿಸುವ ತಂತ್ರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿದ ಶರ್ಮ, ಈ ವಾದ್ಯದಲ್ಲಿ ನವಿರಾದ ಸಂಗೀತ ಗಮಕಗಳನ್ನೂ ಧ್ವನಿಸುವ ಸಾಮರ್ಥ್ಯವನ್ನು ತಂದು, ಶಾಸ್ತ್ರೀಯ ಸಂಗೀತದ ಮುಖ್ಯವಾಹಿನಿಗೆ ಬರುವಂತೆ ಮಾಡಿದರು.
ಪಂಡಿತ್ ಶಿವಕುಮಾರ್ ಶರ್ಮ ಅವರು ‘ಝಣಕ್ ಝಣಕ್ ಪಾಯಲ್ ಬಾಜೆ’ ಚಿತ್ರದ ಒಂದು ದೃಶ್ಯಕ್ಕಾಗಿ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದರು. ಅವರ ಮೊದಲ ಆಲ್ಬಮ್ 1960ರಲ್ಲಿ ದಾಖಲಾಯಿತು. 1967ರಲ್ಲಿ, ಅವರು ‘ಕಾಲ್ ಆಫ್ ದಿ ವ್ಯಾಲಿ’ ಎಂಬ ಪರಿಕಲ್ಪನೆಯ ಆಲ್ಬಂ ಅನ್ನು ತಯಾರಿಸಲು ಕೊಳಲಿನ ಇಂಪಿನ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಮತ್ತು ಸಂಗೀತಗಾರ ಬ್ರಿಜ್ ಭೂಷಣ್ ಕಬ್ರಾ ಅವರೊಂದಿಗೆ ಒಂದುಗೂಡಿದರು. ಈ ಆಲ್ಬಂ ಭಾರತೀಯ ಶಾಸ್ತ್ರೀಯ ಸಂಗೀತದ ಬಹು ದೊಡ್ಡ ಯಶಸ್ಸೆನಿಸಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಸ ಕನ್ನಡ ಸಾಹಿತ್ಯ ಲೋಕದಲ್ಲಿ ಆವಿರ್ಭವಿಸಿದ್ದ ನಾಟಕಕಾರ

Fri Jan 13 , 2023
ಕನ್ನಡ ಸಾಹಿತ್ಯ ಲೋಕದಲ್ಲಿ ಆವಿರ್ಭವಿಸಿದ್ದ ನಾಟಕಕಾರ ‘ಸಂಸ’ ಅವರು ಹುಟ್ಟಿದ ದಿನ ಜನವರಿ 13, 1898. ಮೈಸೂರು ಸಂಸ್ಥಾನದ ಯಳಂದೂರು ತಾಲ್ಲೂಕಿನ ಅಗರ ಎಂಬ ಗ್ರಾಮ ಅವರ ಹುಟ್ಟೂರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಬಯಲು ರಂಗಮಂದಿರದ ಹೆಸರು ‘ಸಂಸ ಬಯಲು ರಂಗಮಂದಿರ’. ಈ ‘ಸಂಸ’ ಅಂದರೆ ಯಾರು ಎಂಬುದು ಒಂದು ಕುತೂಹಲ. ಈ ಕುತೂಹಲದ ಹಿಂದೆ ಹೋದಷ್ಟೂ ಅದು ಒಂದು ಪರಿಧಿಯ ನಂತರದಲ್ಲಿ ಕೇವಲ ಕುತೂಹಲದ ಕಥೆಯ ಕೊನೆಯಲ್ಲಿ […]

Advertisement

Wordpress Social Share Plugin powered by Ultimatelysocial