ಸಂಸ ಕನ್ನಡ ಸಾಹಿತ್ಯ ಲೋಕದಲ್ಲಿ ಆವಿರ್ಭವಿಸಿದ್ದ ನಾಟಕಕಾರ

ಕನ್ನಡ ಸಾಹಿತ್ಯ ಲೋಕದಲ್ಲಿ ಆವಿರ್ಭವಿಸಿದ್ದ ನಾಟಕಕಾರ ‘ಸಂಸ’ ಅವರು ಹುಟ್ಟಿದ ದಿನ ಜನವರಿ 13, 1898. ಮೈಸೂರು ಸಂಸ್ಥಾನದ ಯಳಂದೂರು ತಾಲ್ಲೂಕಿನ ಅಗರ ಎಂಬ ಗ್ರಾಮ ಅವರ ಹುಟ್ಟೂರು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಬಯಲು ರಂಗಮಂದಿರದ ಹೆಸರು ‘ಸಂಸ ಬಯಲು ರಂಗಮಂದಿರ’. ಈ ‘ಸಂಸ’ ಅಂದರೆ ಯಾರು ಎಂಬುದು ಒಂದು ಕುತೂಹಲ. ಈ ಕುತೂಹಲದ ಹಿಂದೆ ಹೋದಷ್ಟೂ ಅದು ಒಂದು ಪರಿಧಿಯ ನಂತರದಲ್ಲಿ ಕೇವಲ ಕುತೂಹಲದ ಕಥೆಯ ಕೊನೆಯಲ್ಲಿ ಏನೋ ಅರ್ಥವಾಗದ ಹಾದಿಯಲ್ಲಿ ನಿಂತ ಹಾಗಿರುತ್ತದೆ.‘ಸಂಸ’ ಕನ್ನಡ ನಾಟಕಲೋಕದಲ್ಲಿ ವಿಶಿಷ್ಟ ನಾಟಕಕಾರರೆನಿಸಿರುವ ಎ. ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್ ಅವರ ಕಾವ್ಯನಾಮ. ಈ ಹೆಸರು ಬಂದಿದ್ದೂ ವಿಚಿತ್ರವಾಗಿ, ವಿಚಿತ್ರ ಘಟನೆಗಳ ಹಿನ್ನಲೆಯಲ್ಲಿ. ಶ್ರೀಯುತರಿಗೆ ನಾಟಕಗಳಲ್ಲಿ ತಮ್ಮ ಹೆಸರು ‘ಕಂಸ’ ಎಂಬ ಹೆಸರನ್ನು ನಮೂದಿಸಬೇಕೆಂಬ ಇಚ್ಛೆ ಇತ್ತು. ಆದರೆ ಮುದ್ರಣವಾದಾಗ ಅದು ‘ಸಂಸ’ ಎಂದಾಗಿತ್ತು. ಸ್ವಾಮಿ ವೆಂಕಟಾದ್ರಿ ಅಯ್ಯರ್ ತಮ್ಮ ಹೆಸರನ್ನು ರಾಕ್ಷಸಗುಣದ ‘ಕಂಸ’ ಎಂದು ಏಕಿಡಲು ಪ್ರಯತ್ನಿಸಿದರೋ!ಬಾಲ್ಯದಿಂದಲೂ ಕುಟುಂಬ ಪ್ರೀತಿಯಲ್ಲಿ ಅತೃಪ್ತರಾದ ‘ಸಂಸ’ರ ಬದುಕು ಹಲವು ಮಾನಸಿಕ ತೊಳಲಾಟಗಳ – ಗೊಂದಲಗಳ ಬೀಡಾಗಿರುವುದನ್ನು, ಹಲವು ಘಟನೆಗಳು, ಒಂದಷ್ಟು ಸತ್ಯ ಮತ್ತು ಹಲವಷ್ಟು ಕಟ್ಟು ಕತೆಗಳನ್ನು ಬೆರೆಸಿ ಲೋಕದಲ್ಲಿ ಹರಡಿವೆ. ಯಾವುದು ಸತ್ಯ ಯಾವುದು ಅಸತ್ಯ ಎಂದು ತಿಳಿಯದ್ದರ ಮಟ್ಟಿಗೆ ಈ ಕಲಸು ಮೇಲೋಗರ ನಡೆದಿದೆ. ಇಷ್ಟಂತೂ ನಿಜ. ಅವರು ಒಂದಷ್ಟು ಮೌಲಿಕ ಬರಹ ಮಾಡಿದ್ದರು. ಅವರು ಸತ್ತಿದ್ದು ಆತ್ಮಹತ್ಯೆಯಿಂದ. ಹಲವು ಬಾರಿ ಪ್ರಯತ್ನಿಸಿ ಕೊನೆಗೆ 1939ರ ವರ್ಷದಲ್ಲಿ ಆತ್ಯಹತ್ಯೆಯಲ್ಲಿ ಯಶಸ್ಸು(?) ಪಡೆದರು.ಹತ್ತನೆಯ ತರಗತಿಯಲ್ಲಿ ವೆಂಕಟಾದ್ರಿ ಅಯ್ಯರ್ ಫೇಲು. ಈ ಕೀಳರಿಮೆಯನ್ನು ತೊಡೆದುಕೊಳ್ಳುವುದಕ್ಕೋ ಎಂಬಂತೆ ಹಟತೊಟ್ಟು ಕನ್ನಡದಲ್ಲಿ ಪ್ರಚಂಡ ಪಾಂಡಿತ್ಯ ಗಳಿಸಿಕೊಂಡರು. ಹಾಗೆಯೇ ತಮಿಳು ಮತ್ತು ಇಂಗ್ಲೀಷನ್ನೂ ಚೆನ್ನಾಗಿಯೇ ಕಲಿತರು. ಮುಂದೆ ಕೆಲವು ಪ್ರಯತ್ನಗಳಾದರೂ ವಿದ್ಯಾಭ್ಯಾಸ ಅಲ್ಲಿಗೆ ನಿಂತುಹೋದ ಹಾಗಿದೆ.ಸಂಸರು ಹೈಸ್ಕೂಲಿನಲ್ಲಿರುವಾಗಲೇ ‘ಕೌಶಲ’ ಎಂಬ ಬಂಗಾಳಿ ಶೈಲಿಯ ನಾಟಕ ಬರೆದು ಪ್ರಕಟಿಸಿದ್ದರು. ಆನಂತರ ಅವರು ‘ಶ್ರೀಮಂತೊದ್ಯಾನ ವರ್ಣನಂ’ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದರು. ಮನೆಯಲ್ಲಿ ಚಿಕ್ಕಪ್ಪ, ಅಣ್ಣಂದಿರೊಡನೆ ಇದ್ದ ಭಿನ್ನಾಭಿಪ್ರಾಯದಿಂದ ಮನೆಯಿಂದ ಹೊರಬಿದ್ದು ಹಲವೆಡೆಗಳಲ್ಲಿ ನೌಕರಿ ಮಾಡಿದರೂ ಒಂದು ಕಡೆ ನಿಲ್ಲುವ ವ್ಯವಧಾನ ಇಲ್ಲದೆ ತಿರುಗಾಟಕ್ಕೆ ತೊಡಗಿದರು. 1916ರಿಂದ 1936ರವರೆಗೆ ಇಪ್ಪತ್ತು ವರ್ಷ ಅಲ್ಲಲ್ಲಿ ಅಲೆದಿದ್ದಾರೆ. ತಮ್ಮ ಜೀವಿತದ ಕೊನೆಯ ಮೂರು ವರ್ಷಗಳು ಅಂದರೆ 1936ರಿಂದ 1939ರವರೆಗೆ ಮಾತ್ರ ಮೈಸೂರಿನಲ್ಲಿ ನೆಲೆ ಊರಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸಿಪಿ ಬೇಡ ಹೇಳಿದ್ರೂ ಕೇಳದ ಇನ್ಸ್​ಪೆಕ್ಟರ್​, ಸ್ಯಾಂಟ್ರೋ ರವಿಯ.

Fri Jan 13 , 2023
ಬೆಂಗಳೂರು: ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ ಮತ್ತು ಪೊಲೀಸ್​ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಸ್ಯಾಂಟ್ರೋ ರವಿ ಹೆಸರು ಭಾರೀ ಸದ್ದು ಮಾಡುತ್ತಿದೆ. ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಈತನ ಹಿನ್ನೆಲೆ ಬಗೆದಷ್ಟು ಆಳ ಎಂಬಂತಾಗಿದೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannadaz Please follow and like us:

Advertisement

Wordpress Social Share Plugin powered by Ultimatelysocial