ಜಾರಕಿಹೊಳಿ ಸಿಡಿ ಹಿಂದಿನ ಮಾಸ್ಟರ್ ಮೈಂಡ್ ಇವರೇನಾ…?

ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಪ್ರಕರಣದಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ನಾನು ಸಿಡಿ ಪ್ರಕರಣದ ಪಾತ್ರಧಾರನಲ್ಲ. ಕಿಂಗ್ ಪಿನ್-2 ಕೂಡ ಅಲ್ಲ. ದಯವಿಟ್ಟು ನನ್ನ ತೇಜೋವಧೆ ಮಾಡಬೇಡಿ. ಎಸ್ಐಟಿ ಪೊಲೀಸರ ಮುಂದೆ ತನಿಖೆಗೆ ಹಾಜರಾಗಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲಿದ್ದೇನೆ. ಮತ್ತೆ ಪೊಲೀಸರು ವಿಚಾರಣೆಗೆ ಕರೆದ್ರೂ ಹಾಜರಾಗುತ್ತೇನೆ ಎಂಬುದಾಗಿ ಸಿಡಿ ಕೇಸ್ ನ ಶಂಕಿತ ಭವಿತ್ ವೀಡಿಯೋ ರಿಲೀಸ್ ನಲ್ಲಿ ತಿಳಿಸಿದ್ದಾರೆ.

ಈ ಕುರಿತಂತೆ ಅಜ್ಞಾತ ಸ್ಥಳದಿಂದ ಭವಿತ್ ವೀಡಿಯೋ ರಿಲೀಸ್ ಮಾಡಿದ್ದು, ನಾನು ಸಿಡಿ ಪ್ರಕರಣದ ಪಾತ್ರಧಾರನಲ್ಲ. ನಾನು ಸಿಡಿ ಪ್ರಕರಣದಲ್ಲಿ ಭಾಗಿಯೂ ಆಗಿಲ್ಲ. ಪೊಲೀಸರ ವಿಚಾರಣೆಗೆ ಹಾಜರಾಗ್ತಿದ್ದೇನೆ. ತನಿಖೆಯಿಂದ ಎಲ್ಲಾ ಸತ್ಯಾಸತ್ಯತೆ ಹೊರಬರಲಿದೆ. ನನ್ನ ಕುಟುಂಬಕ್ಕೆ ಸಿಡಿ ಕೇಸ್ ನಲ್ಲಿ ತಾನು ಇದ್ದೇನೆ ಎಂಬ ವಿಷಯ ಕೇಳಿ ಆಘಾತವಾಗಿದೆ ಎಂದಿದ್ದಾರೆ.

ನನ್ನ ತಾಯಿ ಹಾರ್ಟ್ ಪೇಷೆಂಟ್ ಆಗಿದ್ದಾರೆ. ನಾನು ಸಿಡಿ ಕೇಸ್ ನಲ್ಲಿ ಕಿಂಗ್ ಪಿನ್-2 ಅಲ್ಲ. ವಿಷಯ ತಿಳಿಯದೇ ನನ್ನ ತೇಜೋವಧೆ ಮಾಡಲಾಗ್ತಿದೆ. ಇಂತಹ ಹೇಳಿಕೆಯಿಂದ ನನ್ನ ಮನಸ್ಸಿಗೆ ಘಾಸಿಯಾಗಿದೆ. ನಾನು ತಪ್ಪಿತಸ್ಥ ಆಗಿದ್ರೆ ಓಡಿ ಹೋಗುತ್ತಿದ್ದೆ. ನಾನು ಈಗಲೂ ಓಪನ್ ಬುಕ್ ನಂತೆ ಇದ್ದೇನೆ ಎಂಬುದಾಗಿ ವೀಡಿಯೋದಲ್ಲಿ ಭವಿತ್ ಆತಂಕದಿಂದ ನುಡಿದಿದ್ದಾರೆ.

 

ಈ ಬಳಿಕ, ಕೋರಮಂಗಲದ ಟೆಕ್ನಿಕಲ್ ಸೆಲ್ ಗೆ ತೆರಳಿದಂತ ಭವಿತ್ ದೋಣಗುಡಿಕೆಯವರು, ಎಸ್ ಐ ಟಿ ತಂಡದ ಮುಂದೆ, ತನಿಖೆಗೆ ಹಾಜರಾಗಿದ್ದಾರೆ. ಎಸ್ ಐಟಿ ಮುಂದೆ ತನಿಖೆಗೆ ಹಾಜರಾಗಿರುವಂತ ಭವಿತ್, ಯಾವೆಲ್ಲಾ ಮಾಹಿತಿಯನ್ನು ಬಿಚ್ಚಿಡಲಿದ್ದಾರೆ ಎನ್ನುವ ಬಗ್ಗೆ ಕುತೂಹಲ ಮೂಡಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ವಿಶ್ವಸಂಸ್ಥೆಯ ನಿಯೋಗವೊಂದು ಮೂರು ದಿನಗಳ ಭೇಟಿ

Thu Mar 18 , 2021
ಢಾಕಾ (ಬಾಂಗ್ಲಾದೇಶ), ಮಾ. 18: ರೊಹಿಂಗ್ಯಾ ನಿರಾಶ್ರಿತರಿರುವ ಬಂಗಾಳ ಕೊಲ್ಲಿಯ ದೂರದ ದ್ವೀಪಕ್ಕೆ ವಿಶ್ವಸಂಸ್ಥೆಯ ನಿಯೋಗವೊಂದು ಮೂರು ದಿನಗಳ ಭೇಟಿಯನ್ನು  ಆರಂಭಿಸಿದೆ. ಮಾನವಹಕ್ಕು ಸಂಘಟನೆಗಳ ವಿರೋಧದ ಹೊರತಾಗಿಯೂ ಡಿಸೆಂಬರ್‌ನಿಂದ ಆ ದುರ್ಗಮ ದ್ವೀಪಕ್ಕೆ ರೊಹಿಂಗ್ಯಾ ನಿರಾಶ್ರಿತರನ್ನು ಸಾಗಿಸಲಾಗುತ್ತಿದೆ. ಮ್ಯಾನ್ಮಾರ್ ಗಡಿಗೆ ಹೊಂದಿಕೊಂಡ ಬಾಂಗ್ಲಾದೇಶದ ಪಟ್ಟಣಗಳಲ್ಲಿ ನಿರ್ಮಿಸಲಾಗಿರುವ ನಿರಾಶ್ರಿತ ಶಿಬಿರಗಳಲ್ಲಿ ಸುಮಾರು 10 ಲಕ್ಷ ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರು ವಾಸಿಸುತ್ತಿದ್ದಾರೆ. ಈ ಶಿಬಿರಗಳಲ್ಲಿ ನಿರಾಶ್ರಿತರು ಕಿಕ್ಕಿರಿದು ವಾಸಿಸುತ್ತಿದ್ದು, ಸುಮಾರು ಒಂದು ಲಕ್ಷ […]

Advertisement

Wordpress Social Share Plugin powered by Ultimatelysocial