ಲೋಕಸಭೆ ಸ್ಪೀಕರ್ ಓಮ್ ಬಿರ್ಲಾ, ಬಿಜೆಪಿ ಸಂಸದನಿಗೆ ಮಾತನಾಡಲು ಅವಕಾಶ ನೀಡುತ್ತೇನೆ ಎಂದ ರಾಹುಲ್ ಗಾಂಧಿ ̤

 

ನವದೆಹಲಿ:ಲೋಕಸಭೆ ಸ್ಪೀಕರ್ ಓಮ್ ಬಿರ್ಲಾ, ಸರಿಯಾದ ಸಂಸದೀಯ ವರ್ತನೆಯನ್ನು ಪಾಲಿಸದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಕಲಾಪದಲ್ಲಿ ಪಾಠ ಮಾಡಿದ್ದಾರೆ.ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ರಾಹುಲ್ ಗಾಂಧಿ ಮಾತನಾಡುತ್ತಾ ತಮ್ಮ ಮಾತು ಮುಗಿದ ಬಳಿಕ ಮತ್ತೋರ್ವ ಸಂಸದನಿಗೆ ಮಾತನಾಡಲು ಅನುಮತಿ ನೀಡುವುದಾಗಿ ಹೇಳಿದರು.ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಓಮ್ ಬಿರ್ಲಾ, ಅನುಮತಿ ನೀಡಲು ನೀವು ಯಾರು? ನೀವು ಅನುಮತಿ ನೀಡುವಂತಿಲ್ಲ, ಸಂಸದರಿಗೆ ಮಾತನಾಡಲು ಅನುಮತಿ ನೀಡುವುದು ನನ್ನ ಹಕ್ಕು ಎಂದು ಗರಮ್ ಆಗಿದ್ದಾರೆ.ಇಲ್ಲಿ ಬೇರೆಯವರಿಗೆ ಅನುಮತಿ ನೀಡಲು ನಿಮಗೆ ಯಾವುದೇ ಹಕ್ಕು ಇಲ್ಲ. ಸಭಾಧ್ಯಕ್ಷರು ಮಾತ್ರ ಆ ಕೆಲಸ ಮಾಡುತ್ತಾರೆ” ಎಂದು ಬಿರ್ಲಾ ರಾಹುಲ್ ಗಾಂಧಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.ರಾಹುಲ್ ಗಾಂಧಿ ಮಾತನಾಡುತ್ತಿದ್ದಾಗ ಮಧ್ಯಪ್ರವೇಶಿಸಿ ಏನನ್ನೋ ಹೇಳಲು ಮುಂದಾದರು ಆದರೆ ರಾಹುಲ್ ಗಾಂಧಿ ತಮ್ಮ ಮಾತು ಮುಗಿಸಿ ಅವರಿಗೆ ಮಾತನಾಡಲು ಅನುಮತಿಸುತ್ತೇನೆ ಎಂದು ಹೇಳಿದರು.ನಾನು ಪ್ರಜಾಸತ್ತಾತ್ಮಕ ವ್ಯಕ್ತಿ ಹಾಗೂ ನಾನು ಬೇರೆ ವ್ಯಕ್ತಿಗಳಿಗೆ ಮಾತನಾಡಲು ಅನುಮತಿ ನೀಡುತ್ತೇನೆ” ಎಂದಾಗ ಬಿರ್ಲಾ ರಾಹುಲ್ ಗಾಂಧಿಗೆ ಸಂಸದೀಯ ವರ್ತನೆಯನ್ನು ಪಾಲಿಸುವ ಪಾಠ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದ ವಿದೇಶಾಂಗ ನೀತಿ ವಿಫಲವಲ್ಲ: ರಾಹುಲ್ ಗಾಂಧಿಗೆ ನಟವರ್ ಸಿಂಗ್ ತಿರುಗೇಟು

Thu Feb 3 , 2022
ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಗುರುವಾರ (ಫೆಬ್ರವರಿ 3) ರಾಹುಲ್ ಗಾಂಧಿಯವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ಚೀನಾ ಮತ್ತು ಪಾಕಿಸ್ತಾನವನ್ನು ಒಟ್ಟಿಗೆ ತಂದ ಕೇಂದ್ರದ ಕಾರ್ಯತಂತ್ರದ ತಪ್ಪಾಗಿದೆ. ಮಾಜಿ ಇಎಎಂ ಹೇಳಿದರು, ರಾಹುಲ್ ಗಾಂಧಿ ಅವರು ಹೇಳಿದ್ದು ಸಂಪೂರ್ಣವಾಗಿ ನಿಖರವಾಗಿಲ್ಲ ಎಂಬುದನ್ನು ನೆನಪಿಸಲು ಸರ್ಕಾರದ ಕಡೆಯಿಂದ ಯಾರೂ ಎದ್ದುನಿಂತು ನನಗೆ ಆಶ್ಚರ್ಯವಾಗಿದೆ. 1960ರ ದಶಕದಿಂದಲೂ ಚೀನಾ ಮತ್ತು ಪಾಕಿಸ್ತಾನ ನಿಕಟ ಮಿತ್ರ ರಾಷ್ಟ್ರಗಳಾಗಿವೆ. ಇದು ಅವರ ಮುತ್ತಜ್ಜನ ಕಾಲದಲ್ಲಿ […]

Advertisement

Wordpress Social Share Plugin powered by Ultimatelysocial