ಕೋಟಿ ಹೆಚ್ಚು ಖರ್ಚು ಮಾಡುತ್ತೇವೆ ಸಭೆಯಲ್ಲೇ ರಮೇಶ ಜಾರಕಿಹೊಳಿ ಘೋಷಣೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ಈ ಬಾರಿ ಕಾಂಗ್ರೆಸ್ ಸೋಲಿಸಲೇಬೇಕು. ಇದಕ್ಕಾಗಿ ಅವರು 3 ಸಾವಿರ ರೂ. ಗಿಫ್ಟ್ ಕೊಟ್ಟರೆ ನಾವು 6 ಸಾವಿರ ರೂ. ಗಿಫ್ಟ್ ಕೊಡುತ್ತೇವೆ. ಅವರು ಖರ್ಚು ಮಾಡಿದ್ದಕ್ಕಿಂತ 10 ಕೋಟಿ ರೂ. ಹೆಚ್ಚು ಖರ್ಚು ಮಾಡುತ್ತೇವೆ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.ಸುಳೇಬಾವಿಯಲ್ಲಿ ಶುಕ್ರವಾರ ಸಂಜೆ ನಡೆದ ರಮೇಶ ಜಾರಕಿಹೊಳಿ ಅಭಿಮಾನಿಗಳ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ನಾವು ಮೊದಲು ಸಂಘಟನೆ ಮಾಡಿ ನಂತರ ಗಿಫ್ಟ್ ಕೊಡುತ್ತೇವೆ. ಅವರು 3 ಸಾವಿರ ರೂ. ಗಿಫ್ಟ್ ಕೊಟ್ಟರೆ, ನಾವು 6 ಸಾವಿರದ್ದು ಕೊಟ್ಟರೆ ಮಾತ್ರ ನಮಗೆ ಓಟ್ ಕೊಡಿ ಎಂದು ಹೇಳಿದರು.ಅವರು ಕೊಡುವ ಗಿಫ್ಟನ್ನು ಕಡೆಗಣಿಸಿ ಇಲ್ಲಿ ಜನರು ಸಮಾವೇಶಕ್ಕೆ ಬಂದಿದ್ದಾರೆ. ಇಂತವರನ್ನು ಪಡೆದ ನಾನೇ ಧನ್ಯ ಎಂದ ರಮೇಶ ಜಾರಕಿಹೊಳಿ, ನಾನು ಮಾಜಿ ಆದ ನಂತರ ಅವರ ನಿಜವಾದ ಬಣ್ಣ ಗೊತ್ತಾಯಿತು. ನಾನು ಮಾಜಿ ಆಗದಿದ್ದರೆ ಅವರ ಗುಣ ಗೊತ್ತಾಗುತ್ತಿರಲಿಲ್ಲ, ಮಾಜಿ ಆದರೆ ನಾನು ಮನೆಗೆ ಹೋಗುತ್ತೇನೆ ಎಂದು ತಿಳಿದಿದ್ದರು. ಆದರೆ ಇದು ಜಾರಕಿಹೊಳಿ ಕುಟುಂಬ, ಎಂದಿಗೂ ಮನೆಗೆ ಹೋಗುವುದಿಲ್ಲ ಎಂದರು.ಈ ಸಮಾವೇಶದಲ್ಲಿ ಗಿಫ್ಟ್ ಕೊಡೋಣ ಎಂದು ಕೆಲವರು ಹೇಳಿದರು. ಆದರೆ ನಾವು ಮೊದಲು ಸಂಘಟನೆ ಮಾಡೋಣ. ನಂತರ ಗಿಫ್ಟ್ ಕೊಡೋಣ ಎಂದು ಹೇಳಿದ್ದೇನೆ. ಅವರು 2 -3 ಬಾರಿ ಸೇರಿ 3 ಸಾವಿರ ರೂ ಗಿಫ್ಟ್ ಕೊಡಬಹುದು. ನಾವು 6 ಸಾವಿರ ರೂ. ಗಿಫ್ಟ್ ಕೊಟ್ಟರೆ ಮಾತ್ರ ನಮಗೆ ಓಟ್ ಹಾಕಿ ಎಂದ ರಮೇಶ್, ಅವರು ಖರ್ಚು ಮಾಡಿದ್ದಕ್ಕಿಂತ 10 ಕೋಟಿ ಜಾಸ್ತಿ ಖರ್ಚು ಮಾಡೋಣ ಎಂದು ಹೇಳಿದರು.ಈ ಸಮಾವೇಶಕ್ಕೆ ಶೇ.70ರಷ್ಟು ಬೇರೆ ಪಕ್ಷದಿಂದ ಬಂದಿದ್ದಾರೆ. ಹಾಗಾಗಿ ಬಿಜೆಪಿ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮ ಮಾಡಿಲ್ಲ ಎಂದು ಅವರು ತಿಳಿಸಿದರು.ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಮಹಾಂತೇಶ ಕವಟಗಿಮಠ ಸೋಲುತ್ತಿರಲಿಲ್ಲ. ನಮ್ಮ ಪಕ್ಷದ ಕೆಲವು ಉದ್ದ ಅಂಗಿ ಹಾಕಿಕೊಂಡು ಬರುವವರಿಂದಲೇ ಅವರು ಸೋತಿದ್ದಾರೆ. ನಮ್ಮಲ್ಲಿನ ಗೊಂದಲದಿಂದ ಸೋತರು. ಕಾಂಗ್ರೆಸ್ ನವರು ಕೆಲಸದಿಂದ ಆಯ್ಕೆಯಾಗಿಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದರು.ಮಂತ್ರಿ ಸ್ಥಾನಕ್ಕೆ ನಾನು ತಲೆ ಕೆಡಿಸಿಕೊಂಡಿಲ್ಲ ಬೆಳಗಾವಿ ಜಿಲ್ಲೆಯಲ್ಲಿ 14 ಸ್ಥಾನ ಗೆಲ್ಲುತ್ತೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರಕಾರ ತರುತ್ತೇವೆ ಎಂದು ಘೋಷಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್‌ಐಸಿ ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ನೇಮಕಾತಿ.

Sat Jan 21 , 2023
ನವದೆಹಲಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಖಾಲಿ ಇರುವ ಅಸಿಸ್ಟೆಂಟ್ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಖಾಲಿ ಹುದ್ದೆಗಳ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ :ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 85/-ರೂ ಅರ್ಜಿ ಶುಲ್ಕ ಇತರ ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಮತ್ತು ಮಾಹಿತಿ ಶುಲ್ಕ 700 ರೂ. ಪ್ರಮುಖ […]

Advertisement

Wordpress Social Share Plugin powered by Ultimatelysocial