ಏಪ್ರಿಲ್ ತಿಂಗಳಲ್ಲೇ ನಡೆಯಲಿದೆ ರಣಬೀರ್ ಕಪೂರ್- ಆಲಿಯಾ ಭಟ್ ವಿವಾಹ!

ಬಾಲಿವುಡ್ ನ ಬಹು ನಿರೀಕ್ಷಿತ ಮದುವೆಯೊಂದು ಶೀಘ್ರದಲ್ಲೇ ನಡೆಯಲಿದೆ. ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಶೀಘ್ರದಲ್ಲೇ ಪತಿ-ಪತ್ನಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.

ಒಂದು ಮೂಲದ ಪ್ರಕಾರ, ರಣಬೀರ್ ಮತ್ತು ಆಲಿಯಾ ಏಪ್ರಿಲ್ ತಿಂಗಳಲ್ಲೇ ವಿವಾಹವಾಗಲಿದ್ದಾರೆ.

ಖಾಸಗಿ ವಿವಾಹ ಸಮಾರಂಭದಲ್ಲಿ ಕೆಲವು ಅತಿಥಿಗಳು ಹಾಗೂ ನಿಕಟ ಕುಟುಂಬ ಮತ್ತು ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿ ತಿಳಿಸಿದೆ.

ಈ ಹಿಂದೆ, ರಣಬೀರ್ ಮತ್ತು ಆಲಿಯಾ ಮದುವೆಯ ದಿನಾಂಕವನ್ನು ಅಂತಿಮಗೊಳಿಸಿದ್ದಾರೆ ಎಂದು ಅವರ ನಿಕಟ ಮೂಲವೊಂದು ಬಹಿರಂಗಪಡಿಸಿತ್ತು.

“ರಣಬೀರ್ ಮತ್ತು ಆಲಿಯಾ ಏಪ್ರಿಲ್ ನಲ್ಲಿ ಮದುವೆಯಾಗುತ್ತಾರೆ ಎಂದು ಬಲವಾದ ಸುದ್ದಿಯಿದೆ. ಇತ್ತೀಚೆಗೆ, ರಣಬೀರ್ ಅವರ ತಾಯಿ ನೀತು ಕಪೂರ್, ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಕಚೇರಿಯಲ್ಲಿ ಕಾಣಿಸಿಕೊಂಡಿದ್ದರು. ಹಾಗೆಯೇ ಮನೀಶ್ ಅವರು ನೀತು ಕಪೂರ್ ನಿವಾಸಲ್ಲಿ ಕಾಣಿಸಿಕೊಂಡರು. ಅಲ್ಲದೆ ರಣಬೀರ್ ಮತ್ತು ಆಲಿಯಾ ಚಿತ್ರೀಕರಣದಿಂದ ಬಿಡುವು ಕೇಳಿದ್ದಾರೆ” ಎಂದು ಮೂಲಗಳನ್ನು ಉದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ.

ಮೂಲಗಳ ಪ್ರಕಾರ, ವಿವಾಹ ಸಮಾರಂಭವು ಮುಂಬೈನ ಚೆಂಬೂರಿನಲ್ಲಿರುವ ರಣಬೀರ್ ಕಪೂರ್ ಮನೆಯಲ್ಲಿ ನಡೆಯಲಿದೆ. ರಾಜಸ್ಥಾನದ ಉದಯಪುರದಲ್ಲಿ ಸಮಾರಂಭ ನಡೆಯಲಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಾಲಿವುಡ್ ನಲ್ಲಿ ಫುಲ್ ಬ್ಯುಸಿಯಾದ ಕೊಡಗಿನ ಕುವರಿ: ರಣಬೀರ್ ಗೆ ಜೋಡಿ!

Sun Apr 3 , 2022
ಮುಂಬಯಿ :ರಣಬೀರ್ ಕಪೂರ್ ಅಭಿನಯದ ‘ಅನಿಮಲ್’ ಚಿತ್ರದ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂದು ಚಿತ್ರ ತಂಡ ಶನಿವಾರ ಘೋಷಿಸಿದೆ. ಅಪರಾಧ ಹಿನ್ನಲೆಯ ಕಥೆ ಹೊಂದಿರುವ ಚಿತ್ರವನ್ನು ಕಬೀರ್ ಸಿಂಗ್ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದಾರೆ. ಟಿ-ಸೀರೀಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ರಶ್ಮಿಕಾ ಪಾತ್ರದ ಕುರಿತು ಘೋಷಿಸಿದ್ದು, ಯುಗಾದಿ ಮತ್ತು ಗುಡಿ ಪಾಡ್ವದ ಶುಭ ಸಂದರ್ಭದಲ್ಲಿ, ನಾವು ರಶ್ಮಿಕಾ ಮಂದಣ್ಣ ಅವರನ್ನು ‘ಅನಿಮಲ್’ ತಂಡಕ್ಕೆ ಸ್ವಾಗತಿಸುತ್ತೇವೆ! […]

Advertisement

Wordpress Social Share Plugin powered by Ultimatelysocial