ಪಾತ್ರ ಸವಾಲು ಸ್ವೀಕರಿಸಿದ ರಶ್ಮಿಕಾ.

ಸದಾ ಒಂದಲ್ಲ ಒಂದು ಟ್ರೋಲ್ ನಿಂದ ಸುದ್ದಿಯಲ್ಲಿರುವ ನ್ಯಾಷನಲ್ ನಟಿ ರಶ್ಮಿಕಾ ಮಂದಣ್ಣ ಇದೀಗ ದಿಟ್ಟ ನಿರ್ಧಾರ ಮಾಡಿಕೊಂಡು ಹೊಸ ಚಿತ್ರದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿದ್ದಾರೆ.ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ನಟಿ ರಶ್ಮಿಕಾ ಮಂದಣ್ಣ ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.ಪೊಗರು, ಚಲೋ, ಅಂಜನಿಪುತ್ರ ಸೇರಿ ಕೆಲವೇ ಕೆಲ ಕನ್ನಡ ಸಿನಿಮಾಗಳನ್ನು ಮಾಡಿರುವ ರಶ್ಮಿಕಾ ಗಮನ ಸೆಳೆದಿದ್ದು ತೆಲುಗು ಚಿತ್ರರಂಗದಲ್ಲಿ ಎಂದರೆ ತಪ್ಪಾಗಲಾರದು.ಇತ್ತೀಚೆಗೆ ನಟಿಸಿದ ಸಂದರ್ಶನವೊಂದರಲ್ಲಿ ರಶ್ಮಿಕಾ ದಿಟ್ಟವಾಗಿ ಉತ್ತರ ನೀಡುವ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.ಅವರು ನಟಿಸಿದ ಕೆಲ ಸಿನಿಮಾಗಳು ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿವೆ ಕೂಡಾ. ಆದರೆ ಸಿನಿಮಾಗಳಿಗೆ ಯಾವ ರೀತಿಯ ತಯಾರಿ ನಡೆಸ್ತಾರೆ, ಎಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ತಾರೆ ಎಂಬ ಪ್ರಶ್ನೆಗಳಿಗೆ ಉತ್ತರಕೊಟ್ಟಿದ್ದಾರೆ.ನಟನೆಯ ವಿಷಯದಲ್ಲಿ ಆಗಾಗ ಹೊಸ ಹೊಸ ಸವಾಲುಗಳನ್ನು ಎದುರಿಸುವುದು ಒಳ್ಳೆಯದು. ಶೂಟಿಂಗ್ಗೂ ಮೊದಲು ಕಷ್ಟಕರವಾದ ಪಾತ್ರವನ್ನು ಹೇಗೆ ನಿರ್ವಹಿಸುತ್ತೇನೆ ಎಂಬ ಭಯ ಕಾಡುತ್ತದೆ. ನಂತರ ಆ ಸವಾಲುಗಳನ್ನು ಸ್ವೀಕರಿಸಿ ಸೆಟ್ಗೆ ಕಾಲಿಡುತ್ತೇನೆ. ನಟನೆ ವಿಷಯದಲ್ಲಿ ನಾನೇನೂ ಅಧ್ಯಯನ ಮಾಡಿಲ್ಲ. ನಿರ್ದೇಶಕರು ಕೊಡುವ ಪಾತ್ರಗಳಲ್ಲಿ ಸಂಪೂರ್ಣವಾಗಿ ಮುಳುಗಿ ನಟಿಸುವುದು ಮಾತ್ರ ನನಗೆ ಗೊತ್ತಿತ್ತು. ಹಾಗಾಗಿ ನಾನು ಮಾಡುವ ಪ್ರತಿಯೊಂದು ಪಾತ್ರವೂ ನನ್ನೊಂದಿಗೆ ವರ್ಷಗಟ್ಟಲೇ ಪ್ರಯಾಣಿಸುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

7ನೇ ರಾಜ್ಯ ವೇತನ ಆಯೋಗ, ಸಭೆ ಕರೆದ ಸರ್ಕಾರಿ ನೌಕರರು

Mon Feb 20 , 2023
  ಬೆಂಗಳೂರು, ಫೆಬ್ರವರಿ 19; ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಶುಕ್ರವಾರ 2023-24ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್‌ನಲ್ಲಿ 7ನೇ ರಾಜ್ಯ ವೇತನ ಆಯೋಗದ ಬಗ್ಗೆ ಸರಿಯಾದ ಭರವಸೆ ನೀಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2023-24ನೇ ಬಜೆಟ್‌ನಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ವರದಿ ಬಗ್ಗೆ ಪ್ರಸ್ತಾಪಿಸಿದ್ದಾರೆ. ಬಜೆಟ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ “7ನೇ ರಾಜ್ಯ ವೇತನ ಆಯೋಗವನ್ನು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗಿದೆ” ಎಂದರು. ಮಾಧ್ಯಮಗಳು 7ನೇ ವೇತನ […]

Advertisement

Wordpress Social Share Plugin powered by Ultimatelysocial