ರಾಷ್ಟ್ರದ ರಾಜಧಾನಿಗೂ ತಲುಪಿತು ಕೋಟದಲ್ಲಿನ ಮೆಹೆಂದಿ ವೇಳೆ ನಡೆದ ಅವಾಂತರ ವಿಚಾರ; ವಿವರಣೆ ಕೇಳಿ ಉಡುಪಿ ಎಸ್​ಪಿಗೆ ಪತ್ರ

ರಾಷ್ಟ್ರದ ರಾಜಧಾನಿಗೂ ತಲುಪಿತು ಕೋಟದಲ್ಲಿನ ಮೆಹೆಂದಿ ವೇಳೆ ನಡೆದ ಅವಾಂತರ ವಿಚಾರ; ವಿವರಣೆ ಕೇಳಿ ಉಡುಪಿ ಎಸ್​ಪಿಗೆ ಪತ್ರ

ಉಡುಪಿ: ಮೊನ್ನೆಮೊನ್ನೆಯಷ್ಟೇ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಕೋಟದ ಕೊರಗರ ಮನೆಯಲ್ಲಿ ಮೆಹೆಂದಿ ಸಂದರ್ಭದಲ್ಲಿ ನಡೆದ ಅವಾಂತರ ವಿಚಾರ ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೂ ತಲುಪಿದೆ. ಮಾತ್ರವಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರ ನೀಡುವಂತೆ ಉಡುಪಿ ಎಸ್​ಪಿಗೆ ದೆಹಲಿಯಿಂದ ಪತ್ರ ಕೂಡ ರವಾನೆಯಾಗಿದೆ.

ಸೋಮವಾರ ರಾತ್ರಿ ಕೋಟತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಅವಧಿ ಮೀರಿ ಡಿಜೆ ಹಾಕಿದ್ದಾರೆ ಎಂಬ ದೂರಿನ ಅನ್ವಯ ತೆರಳಿದ್ದ ಪಿಎಸ್‌ಐ ಬಿ.ಪಿ. ಸಂತೋಷ್,​ ಮದುಮಗ ಸಹಿತ ಮನೆಯವರ ಮೇಲೆ ಲಾಠಿ ಪ್ರಹಾರ ನಡೆಸಿದ್ದರಿಂದ ಹಲವರು ಗಾಯಗೊಂಡಿದ್ದರು. ಈ ಬಗ್ಗೆ ರಾಜ್ಯದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಈ ಸಂಬಂಧ ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆ ನಡೆಸಲು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಅವರು ತನಿಖೆಗೆ ಆದೇಶ ನೀಡಿದ್ದರು. ಬಳಿಕ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಎಸ್​​ಐ ಸಂತೋಷ್​ ಅವರನ್ನು ಅಮಾನತುಗೊಳಿಸಿದ್ದಲ್ಲದೆ, ಐವರು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕ್ಯಾಂಪಸ್‌ ಕ್ರಾಂತಿ ಆಡಿಯೋ ರಿಲೀಸ್‌ ಸಂಭ್ರಮ | Puneeth Rajkumar | Janasnehi Yogesh | Campus Kranthi |

Sat Jan 1 , 2022
Please follow and like us:

Advertisement

Wordpress Social Share Plugin powered by Ultimatelysocial