ಫೋರ್ಡ್‌ ಸಂಸ್ಥೆ ಮಾಡಿದ ಅವಮಾನಕ್ಕೆ ಪ್ರತಿಯಾಗಿ ರತನ್‌ ಟಾಟಾ ಮಾಡಿದ್ದೇ ರೋಚಕ ಕಥೆ!

 

ಅದು ಜೂನ್‌ 2, 2008, ಫೋರ್ಡ್‌ (Ford) ಸಂಸ್ಥೆಯ ಎರಡು ಐಷಾರಾಮಿ ಕಾರ್‌ ಬ್ರಾಂಡ್‌ಗಳಾದ ಜಾಗ್ವಾರ್‌ (Jaguar) ಮತ್ತು ಲ್ಯಾಂಡ್‌ ರೋವರ್‌ (Land Rover) ಅನ್ನು‌ ಟಾಟಾ ಮೋಟರ್ಸ್‌ (Tata Motors) ತನ್ನ ಸುಪರ್ದಿಗೆ ಪಡೆದ ದಿನ. ಈ ಒಪ್ಪಂದ ಕೇವಲ ಭಾರತೀಯ ವಾಹನ ತಯಾರಕರಿಗೆ ಮಾತ್ರ ದೊಡ್ಡ ಯಶಸ್ಸಾಗಿದ್ದಿಲ್ಲ, ರತನ್‌ ಟಾಟಾ (Ratan Tata) ಅವರ ವೈಯಕ್ತಿಕ ವಿಜಯ ಕೂಡ ಆಗಿತ್ತು.
ರತನ್‌ ಟಾಟಾ ಅವರಿಗೆ ಫೋರ್ಡ್‌ ಸಂಸ್ಥೆಯ ಮೇಲಿದ್ದ ಸೇಡನ್ನು ಇದು ಅನಾವರಣಗೊಳಿಸಿತ್ತು. ಈ ಬಗ್ಗೆ ಟ್ವಿಟರ್‌ನಲ್ಲಿ ಬಿರ್ಲಾ ಪ್ರೆಸಿಶಿನ್‌ ಟೆಕ್ನಾಲಜಿಸ್‌ ಮುಖ್ಯಸ್ಥ ವೇದಾಂತ್‌ ಬಿರ್ಲಾ (Vedant Birla) ಬರೆದುಕೊಂಡಿದ್ದು, ಫೋರ್ಡ್ ಮೇಲೆ ಟಾಟಾ, ಅದರಲ್ಲೂ ರತನ್ ಟಾಟಾ ಸೇಡು ತೀರಿಸಿಕೊಳ್ಳುವ ಕಥೆ ನಿಜವಾಗಿಯೂ ದೊಡ್ಡ ಯಶಸ್ಸಿನ ಕಥೆಯಾಗಿದೆ ಎಂದಿದ್ದಾರೆ.
1999ರಲ್ಲಿ ಆದ ಅವಮಾನವೂ ಟಾಟಾ ಮೋಟರ್ಸ್‌ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವ ರೀತಿ ಮಾಡಿತು ಎಂದು ಬಿರ್ಲಾ ಹೇಳಿದ್ದಾರೆ.
ಭಾರತದ ಮೊದಲ ಸ್ವದೇಶಿ ಕಾರು
ಟಾಟಾ ಮೋಟರ್ಸ್‌ 1998ರಲ್ಲಿ ಭಾರತದ ಮೊದಲ ಸ್ವದೇಶಿ ಕಾರು ಟಾಟಾ ಇಂಡಿಕಾವನ್ನು ಬಿಡುಗಡೆ ಮಾಡಿತ್ತು. ರತನ್ ಟಾಟಾ ಅವರ ಕನಸಿನ ಯೋಜನೆಯಾಗಿದ್ದ ಟಾಟಾ ಇಂಡಿಕಾ ಟೇಕ್ ಆಫ್ ಆಗಲು ವಿಫಲವಾಯಿತು. ಹೆಚ್ಚು ಮಾರಾಟವಾಗದ ಕಾರಣ ಮೊದಲ ವರ್ಷದಲ್ಲಿಯೇ ತನ್ನ ಹೊಸ ಕಾರು ವ್ಯಾಪಾರವನ್ನು ಮಾರಾಟ ಮಾಡಲು ಟಾಟಾ ಮೋಟರ್ಸ್‌ ನಿರ್ಧರಿಸಿತು. ಈ ಹಿನ್ನೆಲೆ 1999ರಲ್ಲಿ ರತನ್‌ ಟಾಟಾ ಅಮೆರಿಕದ ಮೋಟರ್ಸ್‌ ದೈತ್ಯ ಫೋರ್ಡ್‌ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾದರು ಎಂದು ವೇದಾಂತ್ ಬಿರ್ಲಾ‌ ತಿಳಿಸಿದ್ದಾರೆ.
1999ರ ಸಮಯದಲ್ಲಿ ಫೋರ್ಡ್‌ ಸಂಸ್ಥೆಯ ಅಧ್ಯಕ್ಷರಾಗಿದ್ದ ಬಿಲ್ ಫೋರ್ಡ್ ಅವರನ್ನು ಭೇಟಿ ಮಾಡಲು ರತನ್ ಟಾಟಾ ಮತ್ತು ಅವರ ತಂಡ ಅಮೆರಿಕಕ್ಕೆ ತೆರಳಿತು. ಈ ಸಭೆಯಲ್ಲಿ ರತನ್‌ ಟಾಟಾ ಅವರು ಫೋರ್ಡ್‌ ಸಂಸ್ಥೆಯಿಂದ ಅವಮಾನಕ್ಕೆ ಒಳಗಾದರು ಎನ್ನಲಾಗಿದೆ. ಕಾರು ತಯಾರಿಕಾ ಉದ್ಯಮಕ್ಕೆ ಟಾಟಾ ಎಂದಿಗೂ ಪ್ರವೇಶಿಸಬಾರದು ಎಂದು ಅಮೆರಿಕದ ಉದ್ಯಮಿ ಹೇಳಿದ್ದರಂತೆ.
ಅವಮಾನವೇ ಯಶಸ್ಸಿಗೆ ಮೆಟ್ಟಿಲು
ಇದೇ ಕಥೆಯನ್ನು 2015ರ ಕಾರ್ಯಕ್ರಮವೊಂದರಲ್ಲಿ ಅಂದು ಅಮೆರಿಕಕ್ಕೆ ತೆರಳಿದ್ದ ಟಾಟಾ ತಂಡದ ಭಾಗವಾಗಿದ್ದ ಪ್ರವೀಣ್‌ ಕಡ್ಲೆ ನೆನಪಿಸಿಕೊಳ್ಳುತ್ತಾರೆ. ನಿಮಗೆ ಏನೂ ಗೊತ್ತಿಲ್ಲ. ಇಂತದ್ದರಲ್ಲಿ ನೀವು ಪ್ರಯಾಣಿಕರ ಕಾರು ವಿಭಾಗವನ್ನು ಏಕೆ ಪ್ರಾರಂಭಿಸಿದೀರಿ ಎಂದು ಫೋರ್ಡ್‌ ಸಂಸ್ಥೆ ನಮಗೆ ಹೇಳಿತ್ತು ಎಂದು ಹೇಳಿದ್ದರು. ಅದಲ್ಲದೇ ಟಾಟಾ ಮೋಟರ್ಸ್‌ನ ಕಾರು ಉತ್ಪಾದನಾ ವಿಭಾಗವವನ್ನು ಖರೀದಿಸುವ ಮೂಲಕ ಫೋರ್ಡ್ ಟಾಟಾಗೆ ಸಹಾಯ ಮಾಡಲಿದೆ ಎಂದು ಬಿಲ್ ಫೋರ್ಡ್ ಹೇಳಿದ್ದರು.
ಈ ಘಟನೆಯಿಂದ ಫೋರ್ಡ್‌ ಮತ್ತು ಟಾಟಾ ಮೋಟರ್ಸ್‌ ನಡುವೆ ಯಾವುದೇ ಒಪ್ಪಂದ ಆಗಲಿಲ್ಲ. ಈ ಅನುಭವವು ರತನ್‌ ಟಾಟಾ ಅವರನ್ನು ತಮ್ಮ ಗುರಿಗಳ ಮೇಲೆ ಹೆಚ್ಚು ಗಮನ ಹರಿಸುವಂತೆ ಮಾಡಿತು. ಹೊಸ ಕಾರು ಉತ್ಪಾದನಾ ಘಟಕವನ್ನು ಮಾರಾಟ ಮಾಡದಿರಲು ರತನ್‌ ಟಾಟಾ ನಿರ್ಧರಿಸಿದರು. ನಂತರ ಏನಾಯಿತು ಎಂಬುದು ಇಡೀ ಜಗತ್ತಿಗೆ ಗೊತ್ತು. ವ್ಯಾಪಾರ ಜಗತ್ತಿನಲ್ಲಿ ಅತ್ಯುತ್ತಮ ವೈಫಲ್ಯ ಯಶಸ್ಸಿನ ಕ್ಷಣಕ್ಕೆ ಸಾಕ್ಷಿಯಾಯಿತು ಎಂದು ವೇದಾಂತ್‌ ಬಿರ್ಲಾ ಕಥೆ ಮುಂದುವರಿಸಿದ್ದಾರೆ.
ಕೇವಲ 9 ವರ್ಷದಲ್ಲಿ ಫೋರ್ಡ್‌ನ 2 ಬ್ರಾಂಡ್‌ ಖರೀದಿ
ಒಂಬತ್ತು ವರ್ಷಗಳ ಬಳಿಕ ಹಲವು ವಿಚಾರಗಳಲ್ಲಿ ಟಾಟಾ ಉನ್ನತಿ ಸಾಧಿಸಿತ್ತು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ ಫೋರ್ಡ್ ಸಂಸ್ಥೆ ದಿವಾಳಿತನದ ಅಂಚಲ್ಲಿತ್ತು. ಆಗ ರತನ್ ಟಾಟಾ ಅವರು ಫೋರ್ಡ್ ಸಂಸ್ಥೆಯ ಎರಡು ಐಕಾನಿಕ್‌ ಹಾಗೂ ಐಷಾರಾಮಿ ಕಾರು ಬ್ರಾಂಡ್‌ಗಳಾದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಅನ್ನು ಖರೀದಿಸಲು ಮುಂದಾದರು. ಜೂನ್ 2008ರಲ್ಲಿ 2.3 ಬಿಲಿಯನ್‌ ಡಾಲರ್‌ ಮೊತ್ತದ ಒಪ್ಪಂದದಡಿ ಫೋರ್ಡ್‌ನಿಂದ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಟಾಟಾ ಮೋಟರ್ಸ್‌ ತೆಕ್ಕೆಗೆ ಬಂದವು.
ರತನ್ ಟಾಟಾಗೆ ಧನ್ಯವಾದ ತಿಳಿಸಿದ ಬಿಲ್‌ ಫೋರ್ಡ್‌
ಈ ಸಂದರ್ಭದಲ್ಲಿ ಫೋರ್ಡ್‌ ಅಧ್ಯಕ್ಷ ಬಿಲ್‌ ಫೋರ್ಡ್‌ ನೀವು ಜಾಗ್ವಾರ್‌ ಮತ್ತು ಲ್ಯಾಂಡ್‌ ರೋವರ್‌ ಖರೀದಿಸುವ ಮೂಲಕ ನಮಗೆ ದೊಡ್ಡ ಉಪಕಾರ ಮಾಡುತ್ತಿದ್ದೀರಿ ಎಂದು ಧನ್ಯವಾದ ಹೇಳಿದ್ದರು ಎಂದು 2015ರಲ್ಲಿ ಪ್ರವೀಣ್‌ ಕಡ್ಲೆ ಹೇಳಿದ್ದರು. ಜಾಗ್ವಾರ್ ಲ್ಯಾಂಡ್ ರೋವರ್‌ನ ಸ್ವಾಧೀನ ಮತ್ತು ಅದರ ನಂತರದ ಯಶಸ್ವಿ ವ್ಯಾಪಾರವು “ಒಬ್ಬ ದೂರದೃಷ್ಟಿಯ ನಾಯಕನು ತನ್ನ ಸುಂದರವಾದ ಸೇಡು ತೀರಿಸಿಕೊಳ್ಳುವ” ಕ್ರಿಯೆಯನ್ನು ಪ್ರತಿನಿಧಿಸುತ್ತದೆ ಎಂದು ಬಿರ್ಲಾ ಹೇಳುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಾಯಿಬಾಬಾ ಭಕ್ತರಿಗೆ ಶುಭಸುದ್ದಿ; ಮದುವೆಯಾಗಲು ಶಿರಡಿ ಸಾಯಿಬಾಬಾ ಟ್ರಸ್ಟ್ ಸಹಾಯಹಸ್ತ

Sat Jun 4 , 2022
ಶಿರಡಿ ಸಾಯಿಬಾಬಾ (Shirdi Sai Baba) ಭಕ್ತಾದಿಗಳಿಗೆ ಖುಷಿ ನೀಡುವ ಸಮಾಚಾರ ಒಂದು ದೇಗುಲದ ಮಂಡಳಿಯಿಂದ ಹೊರಬಿದ್ದಿದೆ. ತಮ್ಮ ಜೀವನದ ಪ್ರತಿ ಹಂತದಲ್ಲೂ ಬಾಬಾನ ಆಶೀರ್ವಾದ (Blessings) ಬಯಸುವ ಭಕ್ತರಿಗೆ ಇನ್ನೊಂದು ಸುಯೋಗ ಬರಲಿದೆ. ಹೌದು, ಮದುವೆ (Marriage) ಒಂದು ಜೀವನದ ಪ್ರಮುಖ ಘಟ್ಟ, ಹೀಗಾಗಿ ಬಾಳ ಪಯಣದಲ್ಲಿ ಜೊತೆಯಾಗಿರುವವರನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಬೇಕು. ಇದಕ್ಕಂತಾನೇ ಶಿರಡಿ ದೇಗುಲವು ಮ್ಯಾಟ್ರಿಮೋನಿ (Matrimony) ವೇದಿಕೆಯೊಂದನ್ನು ಆರಂಭಿಸಿದೆ. ಇಲ್ಲಿ ಮದುವೆಯಾಗಲು ಬಯಸುವವರಿಗೆ […]

Advertisement

Wordpress Social Share Plugin powered by Ultimatelysocial