ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ಸಹೋದರನ ವಿರುದ್ಧ FIR ದಾಖಲು

ಬೆಂಗಳೂರು: ಪತ್ನಿಗೆ ಕಿರುಕುಳ ನೀಡಿದ ಆರೋಪದಡಿ ಐಪಿಎಸ್ ಅಧಿಕಾರಿ ರವಿ.ಡಿ.ಚೆನ್ನಣ್ಣವರ್ ಸಹೋದರ ರಾಘವೇಂದ್ರ ಚನ್ನಣ್ಣವರ್ ವಿರುದ್ಧ ಬೆಂಗಳೂರಿನ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

2015ರಲ್ಲಿ ರಾಘವೇಂದ್ರ ಚನ್ನಣ್ಣವರ್ ರೋಜಾ ಎಂಬುವವರನ್ನು ವಿವಾಹವಾಗಿದ್ದು, ರವಿ ಡಿ.ಚನ್ನಣ್ಣವರ್ ಮುಂದೆ ನಿಂತು ಮದುವೆ ಮಾಡಿಸಿದ್ದರು.

ಆದರೆ ರೋಜಾ ಅವರನ್ನು ಮದುವೆಯಾದ ಒಂದೇ ವರ್ಷಕ್ಕೆ ಬಿಟ್ಟು ಬೇರೊಂದು ಮಹಿಳೆಯೊಂದಿಗೆ ವಿವಾಹವಾಗಿ ಸಂಸಾರ ನಡೆಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ತಿದ್ದಿಕೊಳ್ಳಲು ಸಮಾಯವಕಾಶ ಕೊಡು ಎಂದು ಮನೆಯವರೆಲ್ಲ ರೋಜಾ ಅವರನ್ನು ನಂಬಿಸಿ ಉನ್ನತ ಶಿಕ್ಷಣದ ಕಡೆ ಗಮನಹರಿಸುವಂತೆ ಹೇಳಿದ್ದರು. ಇದೀಗ ನ್ಯಾಯಕ್ಕಾಗಿ ರೋಜಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ರಾಘವೇಂದ್ರ ಚನ್ನಣ್ಣವರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಪ್ರಕರಣ ದಾಖಲಾಗುತಿದ್ದಂತೆ ಇಬ್ಬರು ಪತ್ನಿಯ ಜತೆಯೂ ಸಂಸಾರ ಮಾಡುವುದಾಗಿ ರಾಘವೇಂದ್ರ ಚನ್ನಣ್ಣವರ್ ಹೇಳಿಕೆ ನೀಡುತ್ತಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರೈತರಿಗೆ ಗುಡ್ ನ್ಯೂಸ್: ಭಾರೀ ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಣೆ: ಸಚಿವ ಬಿ.ಸಿ. ಪಾಟೀಲ್..!

Thu May 19 , 2022
ಮೈಸೂರು: ರಾಜ್ಯಾದ್ಯಂತ ನಿರಂತರ ಮಳೆಯಿಂದ ಬೆಳೆ ಹಾನಿಯಾದ ಹಿನ್ನೆಲೆಯಲ್ಲಿ ಕೃಷಿ ಅಧಿಕಾರಿಗಳು ಹೊಲಗಳಿಗೆ ಹೋಗಿ ಪರಿಶೀಲನೆ ನಡೆಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕೃಷಿ ಅಧಿಕಾರಿಗಳು ಜಮೀನಿಗೆ ತೆರಳದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳು ಮಳೆಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಬೇಕೆಂದು ಸಚಿವರು ಸೂಚನೆ ನೀಡಿದ್ದಾರೆ. ಬೆಳೆಹಾನಿ ಮಾಹಿತಿ ಸಂಗ್ರಹಿಸಿದ ನಂತರ ಸೂಕ್ತ ಪರಿಹಾರ ನೀಡಲಾಗುತ್ತದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು. ರಾಜ್ಯ ಸರ್ಕಾರ ಬೆಳೆ […]

Advertisement

Wordpress Social Share Plugin powered by Ultimatelysocial