ತೆರೆ ಮೇಲೆ ಭೂಗತ ಲೋಕದ  ಪುಟಗಳು – ಡೆಡ್ಲಿ 3  ನಿರ್ದೇಶಕರಾಗಿ ರವಿ ಶ್ರೀವತ್ಸ

ಚೂಪಾಗಿದ್ರೆನೆ  ಚಾಕುಗೆ ವ್ಯಾಲೂ ,ಬುಲೆಟ್‌ ಇದ್ರೆನೇ ಗನ್ ಗೆ ವ್ಯಾಲೂ, ಮಂಚು ,ಲಾಂಗು ಇದ್ರೆನೇ ರೌಡಿಸಂಗೆ ವ್ಯಾಲೂ. ಲಾಂಗ್‌ ಹಿಡಿಯೊರ್‌ ಎಲ್ಲಾ ರೌಡಿಗಳಲ್ಲಾ ,ಸೌಂಡ್‌ ಕೊಡೊರೆಲ್ಲಾ ಪಂಟ್ರುಗಳಾಗಲ್ಲ ,ರೌಡಿಸಂ ಮೂವಿ ಮಾಡಿದೊರ್‌ ಎಲ್ಲಾ ಡೆಡ್ಲಿ ಸೋಮ ಆಗೊಕ್‌ ಆಗಲ್ಲಾ.ಎಸ್‌ ಈಗ ಗೊತ್ತಾಗಿರುತ್ತೆ ನಿಮಗೆಲ್ಲಾ ,ನಾವ್‌ ಯಾರ್‌ ಬಗ್ಗೆ ಹೇಳ್ತಿದ್ದೀವಿ ಅಂತ . ಇದು ಭೂಗತ ಲೋಕ, ಪಾಪಿಗಳ ಅಡ್ಡ , ನೆತ್ತರು ಹರೆಯೋ ಕೊಳ . ಊಟ , ತಿಂಡಿ ಅನ್ನೊ ಬಾಯಲ್ಲಿ ಸ್ಕೆಚ್ಚು ,ಮಚ್ಚು ಹೊಡಿ ಮಗ ಹೊಡಿ ಮಗ ಬಿಟ್ರೆ ಡೆಡ್ಲಿ ಆಗ್ತಾನೆ ಇನ್ನ.

ಡೆಡ್ಲಿ ಸೋಮ ಈ ಹೆಸರು ಕೇಳಿದ್ರೆನೇ ಪುಡಿ ರೌಡಿಗಳ ಪ್ಯಾಂಟ್‌ ಒದ್ದೆ ಆಗುತ್ತೆ. ವೆಪನ್‌ ನುಗುಸುದ್ರೆ ಎಷ್ಟ್‌ ಅಡಿ ಬೋರ್‌ ಕೊರ್ದಿದ್ದೀನಿ ಅಂತ ಪೋಸ್ಟ್ ಮೊಟಮ್‌ ರಿಪೊರ್ಟ್‌ ಅಲ್ಲೇ ಗೊತ್ತಾಗೊದು .ಲಾಂಗ್‌ ಹಿಡಿಯೊಕು ಸ್ಟೈಲ್‌ ಇದೆ ಅದಕ್ಕೆ ತಕ್ಕನಾದ ಗ್ರೀಪ್‌ ಇದೆ. ಇದ್ಯಾವ್ದು ಗೊತ್ತಿಲ್ಲದೆ ಫೀಲ್ಡ್‌ ಅಲ್ಲಿ ನಾನೇ ಡಾನ್‌ ಅನ್ವನು  address ಇಲ್ಲದಂಗೆ ಡೆಡ್ಲಿ ಆಗಿ ಹೊಗೆ ಹಾಕುಸ್ಕೊಂತಾನೆ.

ಎಸ್‌, 2005ರಲ್ಲಿ ‘ಡೆಡ್ಲಿ ಸೋಮ’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ನಟ ಆದಿತ್ಯ ಅವರಿಗೆ ಆ ಚಿತ್ರದಿಂದ ದೊಡ್ಡ ಯಶಸ್ಸು ಸಿಕ್ಕಿತು. ನಿರ್ದೇಶಕ ರವಿ ಶ್ರೀವತ್ಸ ಗಾಂಧಿನಗರದಲ್ಲಿ ಭರವಸೆಯ ನಿರ್ದೇಶಕ ಎನಿಸಿಕೊಂಡ್ರು. ರಿಯಲ್​ ಲೈಫ್​ ಭೂಗತ ಲೋಕದ ಕಥೆಯನ್ನು ಹೊಂದಿದ್ದ ಆ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡ್ರು. ನಂತರ 2010ರಲ್ಲಿ ಈ ಚಿತ್ರಕ್ಕೆ ಸೀಕ್ವೆಲ್​ ಮಾಡಲಾಯಿತು. ‘ಡೆಡ್ಲಿ 2’ ಹೆಸರಲ್ಲಿ ಆ ಸಿನಿಮಾ ಮೂಡಿಬಂತು. ಅದಕ್ಕೂ ರವಿ ಶ್ರೀವತ್ಸ ನಿರ್ದೇಶನ ಮಾಡಿದ್ರು. ನಾಯಕನಾಗಿ ಆದಿತ್ಯ ಮುಂದುವರಿದಿದ್ರು.ಹಿಟ್‌ ಮೇಲೆ ಹಿಟ್‌ ಕೊಟ್ಟ ಡೆಡ್ಲಿ ಕಥೆ ಈಗ ‘ಡೆಡ್ಲಿ 3’ ಆಗಿ ಯಾವ ಹಿಟ್‌ ಮಾಡೊಕೆ ಮುಂದಾಗಿದೆ ಇದರ ಇಂಚಿಂಚು ಅಪ್ಡೇಟ್ಸ್‌ ಇಲ್ಲಿರವಿ ಶ್ರೀವತ್ಸ ನಿರ್ದೇಶಕ.

ರವಿ ಶ್ರೀವತ್ಸ ಮತ್ತೆ ಡೆಡ್ಲಿ 3 ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಆದರೆ ಈ ಬಾರಿ ಆದಿತ್ಯ ಹೀರೋ ಅಲ್ಲ!ಈ ಬಗ್ಗೆ ಸ್ವತಃ ರವಿ ಶ್ರೀವತ್ಸ ಮಾಹಿತಿ ನೀಡಿದ್ದಾರೆ. ಹೊಸ ಹೀರೋ ಎಂಆರ್​ ದೀಕ್ಷಿತ್​ ‘ಡೆಡ್ಲಿ 3’ ಸಿನಿಮಾದಲ್ಲಿ ಮಿಂಚಲಿದ್ದಾರೆ. ಯಾರು ಈ ದೀಕ್ಷಿತ್​? ‘ಡೆಡ್ಲಿ ಸೋಮ’ ಸಿನಿಮಾಗೆ ಬಂಡವಾಳ ಹೂಡಿದ್ದ ಶೋಭಾ ರಾಜಣ್ಣ ಅವರ ಪುತ್ರ. ‘ಡೆಡ್ಲಿ ಸೋಮ’ ಚಿತ್ರದಲ್ಲಿ ಸೋಮನ ಬಾಲ್ಯದ ಪಾತ್ರವನ್ನು ಮಾಡಿದ್ದು ಇದೇ ದೀಕ್ಷಿತ್​. ಹೌದು ಈಗ ‘ಡೆಡ್ಲಿ 3’ ಚಿತ್ರಕ್ಕೆ ದೀಕ್ಷಿತ್​ ಹೀರೋ. ಇದೇ

ದೀಕ್ಷಿತ್​ನನ್ನು  ಹೀರೋ ಆಗಿ ಆಯ್ಕೆ ಮಾಡಿದ್ದಕ್ಕೆ ಎಷ್ಟೋ ಜನರು ನಮ್ಮನ್ನು ಹಂಗಿಸಿದ್ರು .ಇವನು ಹೀರೋನಾ ಅಂತ ಕೇಳಿದ್ರು ? ಆದರೆ ಮುಂದೊಂದು ದಿನ ಎಲ್ಲರೂ ಗೌರವ ಕೊಡುವಂತಹ ವ್ಯಕ್ತಿಯಾಗಿ ಇವನು ಬೆಳೆದು ನಿಲ್ಲುತ್ತಾನೆ’ ಎಂದು ಭರವಸೆಯ ಮಾತುಗಳನ್ನು ರವಿ ಶ್ರೀವತ್ಸ ಹೇಳಿದ್ದಾರೆ. ಚಿತ್ರದಲ್ಲಿ ಬೇರೆ ಯಾವೆಲ್ಲ ಕಲಾವಿದರು ,ತಂತ್ರಜ್ಞರು ಇರಲಿದ್ದಾರೆ  ಎಂಬ ಇತ್ಯಾದಿ ಮಾಹಿತಿಗಳು ಇನ್ನಷ್ಟೇ ಹೊರಬರಬೇಕಿದೆ. ‌

ನಿರ್ದೇಶಕ ರವಿ ಶ್ರೀವತ್ಸ ‘ಎಂಆರ್‌’ ಹೆಸರಿನಲ್ಲಿ ಮುತ್ತಪ್ಪ ರೈ ಅವರ ಬದುಕನ್ನು ತೆರೆಗೆ ತರುವ ಪ್ರಯತ್ನ ಮಾಡಿದ್ರು. ಮೂರು ಭಾಗಗಳಲ್ಲಿ ಸಿನಿಮಾ ಆಗಲಿದೆ ಎಂದು ತಿಳಿಸಿದ್ರು. ಆದರೆ ಸಿನಿಮಾ ಮಾಡುವ ಬಗ್ಗೆ ಆಕ್ಷೇಪ ಎದುರಾದ ಕಾರಣ ಚಿತ್ರೀಕರಣ ನಿಲ್ಲಿಸಲಾಗಿತ್ತು. ಈ ನಡುವೆ ತಮ್ಮ ಮುಂದಿನ ಸಿನಿಮಾವನ್ನು ಕೈಗೆತ್ತುಕೊಂಡಿದ್ರು. ಆರಂಭದಲ್ಲಿಯೇ ವಿವಾದದಲ್ಲಿ  ಸಿಲುಕಿಕೊಂಡಿತು ಮುತ್ತಪ್ಪ ಬಯೋಪಿಕ್ ಈ ಸಂದರ್ಭದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ರವಿ ಶ್ರೀವತ್ಸ ಮಾತನಾಡಿದ್ರು. ‘ಈ ಹಿಂದಿನ ಡಿಆರ್‌ ಚಿತ್ರದ ಸ್ಕ್ರೀಪ್ಟ್‌  ಪಕ್ಕಕ್ಕಿಟ್ಟು, ಈ ಸಿನಿಮಾ ಕೈಗೆತ್ತಿಕೊಂಡಿರುವೆ. ಇನ್ನು ಸಿನಿಮಾಗಾಗಿ 4 ಕೋಟಿ  ಬಂಡವಾಳ  ಹೂಡಿದ್ದಾರೆ  ನಾಯಕ ನಟನ ತಂದೆ  ಶೋಭ ರಾಜಣ್ಣ  .ಇಂದಲ್ಲ ನಾಳೆ ಆ ಸಿನಿಮಾ ಮಾಡೊದು ಖಚಿತ ಎಂದಿದ್ದ ಶ್ರೀವತ್ಸ ,ಇದೀಗ ಡೆಡ್ಲಿ 3 ಸಿನಿಮಾ ಶೂಟಿಂಗ್‌ ಶುರು ಮಾಡಿದ್ದಾರೆ. ಈ ಚಿತ್ರ  ಡೆಡ್ಲಿ ಸೋಮದ ಸೀಕ್ವೆಲ್‌ ಆಗಿದೆ. ಎರಡನೇ ಸಿನಿಮಾದಲ್ಲಿ ನಾಯಕ ಸತ್ತು ಹೋಗುತ್ತಾನೆ. ಆ ಡೆಡ್ಲಿ ನಾಯಕನ  ಮಗನೇ  ಈ ಡೆಡ್ಲಿ 3 ಚಿತ್ರದ ನಾಯಕ. ಈ  ಪಾತ್ರವನ್ನು ಹೊಸ ನಟ ದೀಕ್ಷಿತ್‌ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಆ್ಯಕ್ಷನ್‌ ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ .ಥ್ರಿಲ್ರ್‌ ಮಂಜು ಹೊಸ ನಟನ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ನಾಯಕ ದೀಕ್ಷಿತ್‌ ಈ ಚಿತ್ರದ ಬಗ್ಗೆ ಉತ್ಸಾಹದಿಂದ ಮಾತನಾಡಿದ್ದು ಲಾಂಗು ,ಮಂಚು ಇದು ಬಿಟ್ಟು ರೌಡಿಸಂ ಬೇರೆ ರೀತಿಯಲ್ಲಿ ಭಿನ್ನವಾಗಿ ಚಿತ್ರಿಸಲಾಗಿದೆ ಎಂದಿದ್ದಾರೆ ಡೆಡ್ಲಿ 3 ಹೀರೋ.ಇನ್ನು ಈ ಚಿತ್ರದ ಹಿರೊಯಿನ್‌ ಯಶಾ ಮತ್ತು ಗಾಯತ್ರಿ ಎನ್ನಲಾಗಿದೆ ಇದರ ಬಗ್ಗೆ ಕೊಂಚ ಗೊಂದಲವಿದ್ದು ಸದ್ಯ ಸಿನಿಮಾ ಬಗ್ಗೆ ಯಾವುದೇ ಗುಟ್ಟು ಬಿಟುಕೊಟ್ಟಿಲ್ಲ ಚಿತ್ರತಂಡ.

Please follow and like us:

Leave a Reply

Your email address will not be published. Required fields are marked *

Next Post

ಇಂದು ಗುರು - ಶಿಷ್ಯರ ಸಮರ .! ಯಾವ ತಂಡ ಬಲಿಷ್ಠ ಇವರ ಮುಖಾಮುಖಿ ಏನು…?

Mon Oct 4 , 2021
ಇಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ ನ 50ನೇ ಪಂದ್ಯದಲ್ಲಿ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿವೆ. ಎಂಎಸ್ ಧೋನಿ ಅವರ ಅಪ್ಪಟ ಅಭಿಮಾನಿಯಾಗಿರುವ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅತ್ಯುತ್ತಮ ನಾಯಕರಾಗಿದ್ದಾರೆ. ಇಂದು ರಿಷಬ್ ಪಂತ್ ಅವರಿಗೆ ಹುಟ್ಟು ಹಬ್ಬದ ದಿನ ಇವತ್ತು ಯಾವ ರೀತಿ ಮಿಂಚಲಿದ್ದಾರೆ ಕಾದುನೋಡಬೇಕಾಗಿದೆ. ಚೆನ್ನೈ ಸೂಪರ್‌ಕಿಂಗ್ಸ್ ಪಾಯಿಂಟ್ ಟೇಬಲ್ ನಲ್ಲಿ […]

Advertisement

Wordpress Social Share Plugin powered by Ultimatelysocial