ಅರಣ್ಯಾಧಿಕಾರಿ ರಾಜೇಶ್ ನಾಯಕ್ ವರ್ಗಾವಣೆ ಹಿಂಪಡೆಯದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಉದಯ್ ಸಾಹುಕಾರ್

ರಾಯಚೂರು :  ಸಿರವಾರ  ತಾಲ್ಲೂಕಿನ ಅರಣ್ಯ ವಲಯಾಧಿಕಾರಿ ಎಂದ ರಾಜೇಶ್ ನಾಯಕ್ ಅವರ ವರ್ಗಾವಣೆ ತಡೆ ಹಿಡಿಯಬೇಕು ಇಲ್ಲದಿದ್ದಲ್ಲಿ  ಸರ್ವಪಕ್ಷಗಳು ಹಾಗೂ ರೈತ ಮುಖಂಡರು ಸುದ್ದಿಗೋಷ್ಠಿ ನಡೆಸಿ ಸರಕಾರಕ್ಕೆ ಹಾಗೂ ಅರಣ್ಯ ಮೇಲಧಿಕಾರಿಗಳಿಗೆ  ಉಗ್ರವಾದ ಹೋರಾಟದಾ  ಎಚ್ಚರಿಕೆ ನೀಡಲಾಯಿತು.

ತದ ನಂತರ ಮಾತನಾಡಿದ  ಜೆಡಿಎಸ್ ಮುಖಂಡ ಜಿ ಲೋಕ ರೆಡ್ಡಿ ಅವರು ನಮ್ಮ ಮಾನ್ವಿ ಮತ್ತು ಸಿರವಾರ ತಾಲ್ಲೂಕಿನಲ್ಲಿ ಹಸಿರು ಕ್ರಾಂತಿಯ ಹರಿಕಾರ ಅಂದರೆ ರಾಜೇಶ್ ನಾಯಕ್ ರವರು ಅಂತಹ ಕೆಲಸಗಳನ್ನು ಮಾಡಿದ್ದು ಇನ್ನೂ ಮಾಡುತ್ತಿದ್ದು, ಏಕಾಏಕಿ ವರ್ಗಾವಣೆ ಮಾಡಿದ್ದು ಇದರಲ್ಲಿ ಪಿತೂರಿ ಯಾರದೇನು ತಿಳಿಯದಂತಾಗಿದೆ . ಇಲ್ಲಿ ನಾವು ಸುದ್ದಿಗೋಷ್ಠಿ ಮಾಡುತ್ತಿದ್ದು ಸರ್ವ ಪಕ್ಷ ದಿಂದ ಹಾಗೂ ರೈತ ಸಂಘಟನೆಗಳು ದಲಿತ ಸಂಘಟನೆಗಳಿಂದ ಒಗ್ಗೂಡಿ ವರ್ಗಾವಣೆ ಆದೇಶ ಪ್ರತಿ ಹಿಂಪಡೆಯದಿದ್ದಲ್ಲಿ ಸರ್ಕಾರದ ವಿರುದ್ಧ ಹಾಗೂ ಅರಣ್ಯಾ ಮೇಲಧಿಕಾರಿಗಳ ವಿರುದ್ಧ ಉಗ್ರವಾದ ಹೋರಾಟ ಮಾಡುತ್ತೇವೆ . ಹಾಗೂ ನ್ಯಾಯ ಬರುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ಲೋಡ್ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಮುಖಂಡರು ವಿಧಾನಸಭಾ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

Sat Jul 2 , 2022
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನು ಹತ್ತು ತಿಂಗಳು ಬಾಕಿ ಇದೆ. ಈಗಾಗಲೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಬಂದಿರುವ ರಾಜ್ಯ ಕಾಂಗ್ರೆಸ್ ಮುಖಂಡರು ವಿಧಾನಸಭಾ ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಬೆಳಗಾವಿ ಸವದತ್ತಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಹಿನ್ನೆಲೆ ಬಿಜೆಪಿಯು ಸಿದ್ದರಾಮೋತ್ಸವ ಎಂಬ ಪದಕ್ಕೆ ತದ್ವಿರುದ್ಧವಾಗಿ ಸಿದ್ದುಹಾಸ್ಯೋತ್ಸವ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ […]

Advertisement

Wordpress Social Share Plugin powered by Ultimatelysocial