`RBI’ ನಿಂದಲೇ ಡಿಜಿಟಲ್ ಕರೆನ್ಸಿ ಆರಂಭ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಇಂದು 2022-23 ನೇ ಸಾಲಿನ ಬಜೆಟ್ (Budget 2022) ಮಂಡಿಸುತ್ತಿದ್ದಾರೆ. ಇದು ವಿತ್ತ ಸಚಿವರ ನಾಲ್ಕನೇ ಬಜೆಟ್ ಆಗಿದ್ದು, ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ಮಂಡನೆಯಾಗುತ್ತಿರುವ ಈ ಬಜೆಟ್ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.ಇದೇ ವೇಳೆ ಬಜೆಟ್‌ ಮಂಡನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತ. ಆರ್ ಬಿಐ ನಿಂದಲೇ ಡಿಜಿಟಲ್ ಕರೆನ್ಸಿ ಆರಂಭ ಮಾಡಲಾಗುವುದು. 2022 ರಿಂದಲೇ ಆರ್ ಬಿಐನಿಂದ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಎಸ್.ಸಿ. ಎಸ್ ಟಿ ರೈತರಿಗೆ ಆರ್ಥಿಕ ನೆರವು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಸಹಕಾರ. ಬಂಡವಾಳ ಹೂಡಿಕೆ ಮೂಲಕ ಆರ್ಥಿಕ ಪ್ರಗತಿಗೆ ಯೋಜನೆ ರೂಪಿಸಲಾಗುವುದು. ಇದೇ ವರ್ಷದಲ್ಲೇ ಆರ್ ಬಿಐನಿಂದ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು. ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಕಾಲ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ತಿಳಿಸಿದರು.

2022 ರಲ್ಲೇ ದೇಶದಲ್ಲಿ 5 ಜಿ ಸೇವೆ ಆರಂಭವಾಗಲಿದೆ. ಪ್ರತಿ ಹಳ್ಳಿಗಳಲ್ಲಿ ಆಪ್ಟಿಕಲ್ ಫೈಬಲ್ ಕೇಬಲ್ ಆರಂಭಾಗಲಿದೆ. ಒನ್ ನೇಷನ್ ಒನ್ ರಿಜಿಸ್ಟ್ರೇಷನ್ (ಒಂದು ದೇಶ, ಒಂದು ನೋಂದಣಿ) ವ್ಯವಸ್ಥೆ ಸ್ಥಾಪನೆ. ಆಸ್ತಿ ನೋಂದಣಿಗೆ ಡಿಜಿಟಲ್ ವ್ಯವಸ್ಥೆ ಜಾರಿ,ಆಸ್ತಿ ನೋಂದಣಿ ಇನ್ಮುಂದೆ ಡಿಜಿಟಲೀಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು. ಗ್ರಾಮ ಸೌಕರ್ಯ ಅಭಿವೃದ್ಧಿ ಆರ್ಥಿಕ ನೆರವುಉ. ಎಲ್ಲಾ ಫೋಸ್ಟ್ ಆಫೀಸ್ ಗಳಲ್ಲೂ ಬ್ಯಾಕಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇ-ಪಾಸ್ ಪೋರ್ಟ್ 2023 ರಲ್ಲಿ ಜಾರಿಗೊಳಿಸಲಾಗುವುದು. ಹೊಸ ತಂತ್ರಜ್ಞಾನದೊಂದಿಗೆ ಇಪಾಸ್ ಪೋರ್ಟ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೈಲ ಕಂಪನಿಗಳಿಂದ ಸಿಹಿ ಸುದ್ದಿ: ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ

Tue Feb 1 , 2022
  ಹೊಸ ವರ್ಷದ ಮೊದಲ ದಿನದಂದು ವಾಣಿಜ್ಯ ಸಿಲಿಂಡರ್​ನ ಬೆಲೆಯನ್ನು ನೂರು ರೂಪಾಯಿಗಳ ಕಡಿತ ಮಾಡಲಾಗಿತ್ತು. ಈಗ ಸುಮಾರು 91 ರೂಪಾಯಿ ಕಡಿತಗೊಳಿಸಲಾಗಿದೆ. ನವದೆಹಲಿ: ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳಿಂದ ಜನಸಾಮಾನ್ಯರಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆಕೇಂದ್ರ ಹಣಕಾಸು ಬಜೆಟ್ ಮಂಡನೆ ಹಿನ್ನೆಲೆಯಲ್ಲಿಯೇ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ಗಳ ಬೆಲೆಯನ್ನು ರಾಷ್ಟ್ರೀಯ ತೈಲ ಮಾರುಕಟ್ಟೆ ಕಂಪನಿಗಳು ಇಳಿಸಿವೆ.ಫೆಬ್ರವರಿ 1ರಿಂದ 19 ಕೆಜಿ ತೂಕದ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 91.50 ರೂಪಾಯಿಯಷ್ಟು ಇಳಿಕೆ […]

Advertisement

Wordpress Social Share Plugin powered by Ultimatelysocial