ಕೊನೆ ಬಾಲ್‌ ಸಿಕ್ಸ್‌ RCB ಗೆ ರೋಚಕ ಗೆಲುವು:  ಭರತ್‌ ಆಟಕ್ಕೆ ಡೆಲ್ಲಿ ಧೂಳಿಪಟ

ಐಪಿಎಲ್ 14ನೇ ಆವೃತ್ತಿಯ ಅಂತಿಮ ಪಂದ್ಯದ ಅಂತಿಮ ಎಸೆತದಲ್ಲಿ ಆರ್‌ಸಿಬಿ ರೋಚಕ ಗೆಲುವು ಸಾಧಿಸಿದೆ. ಕೊನೆಯ ಎಸೆತದಲ್ಲಿ ಆರ್‌ಸಿಬಿಗೆ ಗೆಲ್ಲಲ್ಲು  ಐದು ರನ್‌ಗಳ ಅಗತ್ಯವಿದ್ದಾಗ ಶ್ರೀಕರ್ ಭರತ್ ಸಿಕ್ಸರ್ ಸಿಡಿಸಿ ಆರ್‌ಸಿಬಿ ಗೆಲುವಿಗೆ ಕಾರಣರಾದರು. ಈ ಮೂಲಕ ವಿರಾಟ್ ಕೊಹ್ಲಿ ಪಡೆ ಗೆಲುವಿನ ವಿಶ್ವಾಸದೊಂದಿಗೆ  ಪ್ಲೇಆಫ್‌ಗೆ ಪ್ರವೇಶಿಸಿದೆ.

ಅಂತಿಮ ಪಂದ್ಯದಲ್ಲಿ ಆರ್‌ಸಿಬಿ ತಂಡದ ಗೆಲುವಿಗೆ 15 ರನ್‌ಗಳು ಬೇಕಾಗಿತ್ತು. ಕೊನೆಯ ಓವರ್ ಎಸೆಯಲು ಯುವ ವೇಗಿ ಆವೇಶ್ ಖಾನ್ ಬಾಲ್‌ ನೀಡಿದ್ದರು. ಮೊದಲ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಮ್ಯಾಕ್ಸ್‌ವೆಲ್ ಅಂತರವನ್ನು ಕಡಿಮೆಗೊಳಿಸಿದರು.ಎರಡನೇ ಎಸೆತದಲ್ಲಿ ಎರಡು ರನ್‌ ಬಾಚಿದ ಮ್ಯಾಕ್ಸಿ ಮೂರನೆ ಎಸತದಲ್ಲಿ ಒಂದು ರನ್‌ ಗಳಿಸಲು ಮಾತ್ರ ಶಕ್ತರಾದರು. ಇನ್ನೂ ನಾಲ್ಕನೇ ಎಸೆತವನ್ನ ಎದುರಿಸಿದ ಭರತ್‌ ಯಾವುದೆ ರನ್‌ ಗಳಿಸಲು ಸಾದ್ಯ ವಾಗಿರಲಿಲ್ಲಾ ಐದನೇ ಎಸೆತದಲ್ಲಿ ಎರಡು ರನ್‌ ತಗೆವುದರ ಮೂಲಕ ಕೊನೇ ಎಸೆತದಲ್ಲಿ 6 ರನ್‌ಗಳ ಅಗತ್ಯವಿತ್ತು. ಅವಿಶಖಾನ್‌  6ನೇ ಬಾಲ್‌ ವೈಡ್‌ ಎಸುವುದರ ಮೂಲಕ  ತಮ್ಮ ಮೇಲೆ ಒತ್ತಡ ಹೇರಿಕೊಂಡ್ರು ಹೀಗಾಗಿ ಅಂತಿಮ ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ  ಐದು ರನ್‌ಗಳು ಬೇಕಿತ್ತು. ಈ ಎಸೆತವನ್ನು ಶ್ರೀಕರ್ ಭರತ್ ಭರ್ಜರಿ ಸಿಕ್ಸರ್‌ಗೆ ಅಟ್ಟುವ ಮೂಲಕ ಅಮೋಘ ಗೆಲುವನ್ನು ಸಾರಿದರು.

ಭರತ್, ಮ್ಯಾಕ್ಸ್‌ವೆಲ್ ಅಮೂಘ ಆಟ:

ಡೆಲ್ಲಿ ಕ್ಯಾಪಿಟಲ್ಸ್ ತಂಡ ನೀಡಿದ್ದ 165 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಆರಂಭದಲ್ಲಿಯೇ ಆಘಾತವನ್ನು ಅನುಭವಿಸಿತು. ತಂಡದ ಮೊತ್ತ 6 ರನ್‌ಗಳಾಗಿದ್ದಾಗ ಆರ್‌ಸಿಬಿ ತಂಡದ ಇಬ್ಬರು ಆರಂಭಿಕರು ಕೂಡ ವಿಕೆಟ್ ಕಳೆದುಕೊಂಡಿದ್ದರು. ಯುವ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಗೋಲ್ಡನ್ ಡಕ್ ಆಗುವ ಮೂಲಕ ನಿರಾಸೆ ಮೂಡಿಸಿದರೆ ನಾಯಕ ವಿರಾಟ್ ಕೊಹ್ಲಿ 8 ಎಸೆತಗಳಲ್ಲಿ ನಾಲ್ಕು ರನ್‌ಗಳಿಸಿ ನೊಕಿಯಾಗೆ ಬಲಿಯಾದರು.

ಈ ಮೂಲಕ ಡೆಲ್ಲಿ ಆರಂಭದಲ್ಲಿಯೇ ಯಶಸ್ಸು ಸಾಧಿಸಿತು. ಈ ಪಂದ್ಯದಲ್ಲಿ ಶ್ರೀಕರ್ ಭರತ್‌ಗೆ ಮತ್ತೆ ಮೂರನೇ ಕ್ರಮಾಂಕದಲ್ಲಿ ಅವಕಾಶ ನೀಡಿತ್ತು ಆರ್‌ಸಿಬಿ. ನಾಲ್ಕನೇ ಕ್ರಮಾಂಕದಲ್ಲಿ ಎಬಿ ಡಿವಿಲಿಯರ್ಸ್ ಕಣಕ್ಕಿಳಿದಿದ್ದರು. ಈ ಜೊಡಿ ಕುಸಿತವನ್ನು ತಡೆಯುವ ಪ್ರಯತ್ನ ನಡೆಸಿ ಅದರಲ್ಲಿ ಒಂದು ಹಂತದ ಯಶಸ್ಸು ಸಾಧಿಸಿತು. ಮೂರನೇ ವಿಕೆಟ್‌ಗೆ 49 ರನ್‌ಗಳ ಮಹತ್ವದ ಜೊತೆಯಾಟ ಆರ್‌ಸಿಬಿಗೆ ಲಭ್ಯವಾಗಿತ್ತು.

ಅನುಭವಿ ಎಬಿ ಡಿವಿಲಿಯರ್ಸ್ ಮೂರನೇ ವಿಕೆಟ್ ರೂಪದಲ್ಲಿ ಫೆವಿಲಿಯನ್ ಸೇರಿಕೊಂಡಾಗ ಆರ್‌ಸಿಬಿ 9.3 ಓವರ್‌ಗಳಲ್ಲಿ 55 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ನಲ್ಲಿದ್ದ ಶ್ರೀಕರ್ ಭರತ್‌ಗೆ ಜೊತೆಯಾಗಿದ್ದು ಗ್ಲೆನ್ ಮ್ಯಾಕ್ಸ್‌ವೆಲ್. ಈ ಜೋಡಿ ಸಮಯೋಚಿತ ಆಟವನ್ನು ಪ್ರದರ್ಶಿಸುವ ಮೂಲಕ ಡೆಲ್ಲಿ ಬೌಲರ್‌ಗಳ ವಿರುದ್ಧ ಮೇಲುಗೈ ಸಾಧಿಸುತ್ತಾ ಸಾಗಿದರು. ಡೆಲ್ಲಿ ಫೀಲ್ಡರ್‌ಗಳು ಮಾಡಿದ ತಪ್ಪುಗಳನ್ನು ಅದ್ಭುತವಾಗಿ ಬಳಸಿಕೊಂಡ ಈ ಆಟಗಾರರು ಪಂದ್ಯವನ್ನು ಗೆಲುವಿನ ಸನಿಹಕ್ಕೆ ತಂದ

ಅಂತಿಮ 12 ಎಸೆತಗಳಲ್ಲಿ ಆರ್‌ಸಿಬಿ ತಂಡಕ್ಕೆ 19 ರನ್‌ಗಳ ಅವಶ್ಯಕತೆಯಿತ್ತು. ಕ್ರೀಸ್‌ನಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ಕೂಡ ನೆಲೆಯೂರಿದ್ದ ಕಾರಣ ಪಂದ್ಯ ಆರ್‌ಸಿಬಿ ಪರವಾಗಿಯೇ ಇತ್ತು. ಆದರೆ ಅಂತಿಮ ಓವರ್‌ನಲ್ಲಿ ನೊಕಿಯಾ ಆರ್‌ಸಿಬಿಗೆ ಆಘಾಯ ನೀಡಿದರು. ಭರತ್ ಹಾಗೂ ಮ್ಯಾಕ್ಸ್‌ವೆಲ್ ಈ ಓವರ್‌ನಲ್ಲಿ ಗಳಿಸಿದ್ದು ಕೇವಲ 4 ರನ್‌ಗಳನ್ನು ಮಾತ್ರ. ಈ ಮೂಲಕ ಪಂದ್ಯದಲ್ಲಿ ಡೆಲ್ಲಿ ಕೈಮೇಲಾಗುವ ಲಕ್ಷಣಗಳು ಕಂಡು ಬಂದಿತ್ತು.

ಆವೇಶ್ ಖಾನ್ ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ನೀಡಿದರೂ ಬಳಿಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾದರು. ಎರಡನೇ ಎಸೆತದಲ್ಲಿ 2 ರನ್ ಮಾತ್ರ ಪಡೆಯಲು ಮ್ಯಾಕ್ಸ್‌ವೆಕ್ ಯಶಸ್ವಿಯಾದರು. ಮೂರನೇ ಎಸೆತದಲ್ಲಿ ಭಯಾನಕ ಯಾರ್ಕ್ ಎಸೆಯುವ ಮೂಲಕ ಮ್ಯಾಕ್ಸ್‌ವೆಲ್‌ಗೆ ಆಘಾತ ನೀಡಿದರು. ಇದರಲ್ಲಿ ಒಂದ್ ರನ್ ಕದಿಯುವಲ್ಲಿ ಆರ್‌ಸಿಬಿ ಯಶಸ್ವಿಯಾಯಿತು. ನಾಲ್ಕನೇ ಎಸೆತದಲ್ಲಿ ಮತ್ತೊಂದು ಅದ್ಭುತ ಬೌಲಿಂಗ್ ದಾಳಿ ನಡೆಸಿದ ಆವೇಶ್. ಕ್ರೀಸ್‌ನಲ್ಲಿದ್ದ ಶ್ರೀಕರ್ ಭರತ್ ಚೆಂಡು ಅಟ್ಟುವಲ್ಲಿ ವಿಫಲವಾದರು. ಕೊನೆಯ ಎರಡು ಎಸೆತಗಳಲ್ಲಿ 8 ರನ್‌ಗಳಿಸುವ ಒತ್ತಡ ಆರ್‌ಸಿಬಿ ಮೇಲಿತ್ತು. ಐದನೇ ಎಸೆತದಲ್ಲಿ ಶ್ರೀಕರ್ ಭರತ್ ಎರಡು ರನ್‌ ಗಳಿಸುವಲ್ಲಿ ಯಶಸ್ವಿಯಾದರು. ಕೊನೆಯ ಎಸೆತದಲ್ಲಿ ಆವೇಶ್ ಖಾನ್  ಫುಲ್‌ಟಾಸ್ ಎಸೆತ ಹಾಕಿದರು. ಶ್ರೀಕರ್ ಭರತ್ ಈ ಚೆಂಡನ್ನು ಅದ್ಭುತವಾಗಿ ಬಾರಿಸಿ ಸಿಕ್ಸರ್ ಬಾರಿಸುವುದರ ಮೂಲಕ  ಆರ್‌ಸಿಬಿ ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಐದು ವರ್ಷದ ಬಾಲಕನ ಜೊತೆಯಲ್ಲಿ ದೆಹಲಿ ಮುಖ್ಯಮಂತ್ರಿಯ ಟ್ವಿಟ್ಟರ್‌..?

Sat Oct 9 , 2021
ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇತ್ತೀಚೆಗೆ ತಮ್ಮ ಪುಟ್ಟ ಸ್ನೇಹಿತನನ್ನು ಟ್ವಿಟ್ಟರ್‌ ಮುಖಾಂತರ ಪರಿಚಯಿಸಿದ್ದಾರೆ. ಅಷ್ಟೇ ಅಲ್ಲ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಗೂಗಲ್ ಬಾಯ್‘ ಎಂದು ಕರೆಯಲ್ಪಡುವ ಹಿತೇನ್, ಐದು ವರ್ಷದ ಬಾಲಕ ಭಾರತ ಮಾತ್ರವಲ್ಲ ಅಮೆರಿಕಾದ ಎಲ್ಲಾ ರಾಜ್ಯಗಳ ಹೆಸರುಗಳನ್ನು ಹೇಳುತ್ತಾನೆ. ಸಂಸ್ಕೃತ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿಯೂ ನಿರರ್ಗಳವಾಗಿ ಮಾತನಾಡುತ್ತಾನೆ. 5 ವರ್ಷದ ಮಕ್ಕಳೆಂದರೆ ವರ್ಣಮಾಲೆ, ಆಕಾರಗಳು ಮತ್ತು ಬಣ್ಣಗಳು ಮುಂತಾದ ವಿಷಯಗಳ ಬಗ್ಗೆ […]

Advertisement

Wordpress Social Share Plugin powered by Ultimatelysocial