RENUKHA CHARYA:ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಅವರೇ ಸಿಎಂ ಆಗಬೇಕಾ, ನಮಗೆ ಯೋಗ್ಯತೆ ಇಲ್ವ;

ದಾವಣಗೆರೆ: ಬಿಜೆಪಿ ಪಾಳಯದಲ್ಲಿ ಮತ್ತೆ ಸಂಪುಟ ವಿಸ್ತರಣೆ, ಪುನರ್ರಚನೆ ಮಾತುಗಳು, ಬಹಿರಂಗ ಹೇಳಿಕೆಗಳು, ಸಮಾನ ಮನಸ್ಕರ ಸಭೆಗಳು, ಅಸಮಾಧಾನಗಳು ಜೋರಾಗಿವೆ. ಸಿಎಂ ಕಾರ್ಯದರ್ಶಿ ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ತಾವು ಪ್ರಬಲ ಸಚಿವಾಕಾಂಕ್ಷಿ ಎಂಬುದನ್ನು ಹೇಳಿಕೊಂಡಿದ್ದಾರೆ.

ಹಿಂದಿನ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ತಮ್ಮ ಹಾಗೂ ಬಸವಗೌಡ ಪಾಟೀಲ್ ಯತ್ನಾಳ್ ಪಾತ್ರ ಸಾಕಷ್ಟಿದೆ, ಹೀಗಿರುವಾಗ ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವೇ, ತಮ್ಮನ್ನೇಕೆ ಸಂಪುಟಕ್ಕೆ ಸೇರಿಸಬಾರದು ಎಂದು ರೇಣುಕಾಚಾರ್ಯ ಕೇಳುತ್ತಿದ್ದಾರೆ.

ಸಚಿವರು ಫೋನ್ ಕೂಡ ಎತ್ತಲ್ಲ: ನಮ್ಮ ಕ್ಷೇತ್ರದ ಸಮಸ್ಯೆಗಳು, ಆಗಬೇಕಾದ ಕೆಲಸಗಳ ಬಗ್ಗೆ ಹೇಳೋಣವೆಂದರೆ ಕೆಲವು ಸಚಿವರು ಶಾಸಕರ ಫೋನ್ ಸಹ ರಿಸೀವ್ ಮಾಡಲ್ಲ. ಶಾಸಕರು ಪತ್ರವನ್ನು ಕೊಟ್ಟರೆ ಸಚಿವರು ಉತ್ತರ ಕೊಡಬೇಕು. ಆದರೆ ಸಚಿವರ ಆಪ್ತ ಸಹಾಯಕರು ಶರಾ ಬರೆಯುತ್ತಾರೆ. ಇಂಥ ಸಚಿವರು ಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟದಲ್ಲಿ ಈಗ 4 ಸ್ಥಾನಗಳು ಖಾಲಿ ಇವೆ. ಹಲವು ಬಾರಿ ಸಚಿವರಾದವರು ತಾವೇ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ನೀಡಲಿ. ಮಾರ್ಚ್‌ನಲ್ಲಿ ಸಂಪುಟ ವಿಸ್ತರಣೆ ಬೇಡ, ಈಗಲೇ ಮಾಡಲಿ. ಅಗತ್ಯ ಬಿದ್ದರೆ ನಾವು ದೆಹಲಿಗೂ ಹೋಗುತ್ತೇವೆ. ಹೊಸಬರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಒಂದಾಗಿದ್ದೇವೆ. ನಮಗೆ ಸಚಿವರಾಗುವ ಯೋಗ್ಯತೆ ಇಲ್ಲವೇ? ನಮಗೆ ಸಚಿವ ಸ್ಥಾನ ಕೊಟ್ಟು ನೋಡಲಿ ಎಂದು ಸವಾಲು ಹಾಕಿದ್ದಾರೆ.

ವಿಜಯೇಂದ್ರಗೆ ಸಚಿವ ಸ್ಥಾನ ವರಿಷ್ಠರ ತೀರ್ಮಾನ: ಬಿ ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ತಮ್ಮದೇ ವರ್ಚಸ್ಸಿನಿಂದ ಕೆಲಸ ಮಾಡುತ್ತಿದ್ದಾರೆ. ಅವರ ಬಗ್ಗೆ ಏನೂ ಹೇಳುವುದಿಲ್ಲ. ಅವರಿಗೆ ಸಚಿವ ಸ್ಥಾನ ನೀಡುವುದು ವರಿಷ್ಠರಿಗೆ ಬಿಟ್ಟ ನಿರ್ಧಾರ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Oppo Reno 7 series ಭಾರತದಲ್ಲಿ ಬಿಡುಗಡೆ;

Mon Jan 24 , 2022
Oppo Reno 7 ಸರಣಿಯ ಭಾರತದ ಬಿಡುಗಡೆಯನ್ನು Oppo Twitter ನಲ್ಲಿ ದೃಢಪಡಿಸಿದೆ. ವೆನಿಲ್ಲಾ Oppo Reno 7 5G, Oppo Reno 7 Pro 5G ಮತ್ತು Oppo Reno 7SE 5G ಅನ್ನು ಒಳಗೊಂಡಿರುವ ಸರಣಿಯನ್ನು ಕಳೆದ ವರ್ಷ ಚೀನಾದಲ್ಲಿ ಕೆಲವು ವಿಶೇಷ ಆವೃತ್ತಿಯ ಹ್ಯಾಂಡ್‌ಸೆಟ್‌ಗಳೊಂದಿಗೆ ಪ್ರಾರಂಭಿಸಲಾಯಿತು. ಕಳೆದ ತಿಂಗಳು, ಭಾರತದಲ್ಲಿ Oppo Reno 7 ಸರಣಿಯ ಬೆಲೆಯನ್ನು ಸೂಚಿಸಲಾಯಿತು ಮತ್ತು ಫೋನ್‌ಗಳು ಚೀನಾದ ರೂಪಾಂತರಗಳಂತೆಯೇ ಅದೇ […]

Advertisement

Wordpress Social Share Plugin powered by Ultimatelysocial