ಸೋಮವಾರ ಕೆಲಸ ಮುಗಿಸಿ ವಾಪಸ್​ ಮನೆಗೆ ಬರುವಾಗ ಈ ದುರಂತ ನಡೆದಿದೆ.

ದೆಹಲಿಯ ಪಶ್ಚಿಮ ವಿಹಾರದಲ್ಲಿ 32 ವರ್ಷದ ಮಹಿಳೆಯೊಬ್ಬಳನ್ನು ನಡುರಸ್ತೆಯಲ್ಲಿ ದುಷ್ಕರ್ಮಿಗಳು ಶೂಟ್​ ಮಾಡಿ ಕೊಂದಿದ್ದಾರೆ.

ಈಕೆಯ ಹೆಸರು ಜ್ಯೋತಿ ಎಂದಾಗಿದ್ದು, ಫ್ಲಿಪ್​ಕಾರ್ಟ್​​ ಕಂಪನಿಯ ಕೊರಿಯರ್​​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಕೆಲಸ ಮುಗಿಸಿ ವಾಪಸ್​ ಮನೆಗೆ ಬರುವಾಗ ಈ ದುರಂತ ನಡೆದಿದೆ. ರಕ್ತದ ಮಡುವಲ್ಲಿ ಬಿದ್ದಿದ್ದ ಜ್ಯೋತಿಯನ್ನು ಅಲ್ಲಿ ಸ್ಥಳದಲ್ಲಿ ಇದ್ದವರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದರೂ ಪ್ರಯೋಜನವಾಗಲಿಲ್ಲ.

ಈ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿರುವ ಜ್ಯೋತಿಯ ಪತಿ ದೀಪಕ್​, ‘ಜ್ಯೋತಿ ಸೋಮವಾರ ಕೆಲಸ ಮುಗಿಸಿ ಸಂಜೆ 7.30ರ ಹೊತ್ತಿಗೆ ತನ್ನ ಸ್ಕೂಟರ್​​ನಲ್ಲಿ ಮನೆಗೆ ವಾಪಸ್ ಬರುತ್ತಿದ್ದಾಗ ಇಬ್ಬರು ಹುಡುಗರು ಅಡ್ಡಗಟ್ಟಿ ಅವಳಿಗೆ ಶೂಟ್ ಮಾಡಿದ್ದಾರೆ. ಆ ಇಬ್ಬರೂ ಬೈಕ್​​ನಲ್ಲಿ ಬಂದಿದ್ದರು, ಹೋಗುವಾಗ ಜ್ಯೋತಿಯ ಸ್ಕೂಟರ್​​ನ್ನೂ ತೆಗೆದುಕೊಂಡು ಹೋಗಿದ್ದಾರೆ’ ಎಂದು ತಿಳಿಸಿದ್ದಾರೆ. ಶೂಟ್​ ಮಾಡಿದ ಆರೋಪಿಗಳು ಇಬ್ಬರೂ ನಾಪತ್ತೆಯಾಗಿದ್ದು, ಅವರನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮೂರು ಮಕ್ಕಳ ತಾಯಿಯಾಗಿರುವ ಜ್ಯೋತಿ ಹತ್ಯೆ ಅವರ ಪತಿ ಮತ್ತು ಸಂಬಂಧಿಕರಿಗೇ ಒಗಟಾಗಿದೆ. ಆಕೆಗೆ ಯಾರೂ ಶತ್ರುಗಳು ಇರಲಿಲ್ಲ ಎಂದೇ ಅವರು ಹೇಳುತ್ತಿದ್ದಾರೆ. ನನ್ನ ಮಗಳ ಸಾವಿಗೆ ನ್ಯಾಯ ಬೇಕು ಎಂದು ಜ್ಯೋತಿಯವರ ತಂದೆ ಆಗ್ರಹಿಸಿದ್ದಾರೆ. ಹಾಗೇ, ಪೊಲೀಸರೂ ಕೂಡ ತನಿಖೆ ಶುರು ಮಾಡಿದ್ದು, ಕೊಲೆ ನಡೆದ ಸುತ್ತಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟ್ರಪತಿ ಭವನದ ಮೊಘಲ್ ಗಾರ್ಡನ್ ಹೆಸರು ಬದಲಿಸಿದ ಕೇಂದ್ರ ಸರ್ಕಾರ.

Tue Jan 31 , 2023
ನವದೆಹಲಿ : ದೆಹಲಿಯ ರಾಷ್ಟ್ರಪತಿ ಭವನದಲ್ಲಿರುವ ಆಕರ್ಷಕ ಉದ್ಯಾನವನವನ್ನು ಇಲ್ಲಿಯವರೆಗೂ ಮೊಘಲ್ ಗಾರ್ಡನ್ಸ್ ಎನ್ನುವ ಹೆಸರನಿಂದ ಕರೆಯಲಾಗುತ್ತಿತ್ತು. ಈ ಉದ್ಯಾನವನವನ್ನು ಈಗ “ಅಮೃತ್ ಉದ್ಯಾನ” ಎಂದು ಕರೆಯಲಾಗುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿರುವ ಅಂಗವಾಗಿ “ಆಜಾದಿ ಕಾ ಅಮೃತ್ ಮಹೋತ್ಸವ” ಅಭಿಯಾನದ ಅಡಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೊಸ ಹೆಸರನ್ನು ನೀಡಿದ್ದಾರೆ ಎಂದು ರಾಷ್ಟ್ರಪತಿಗಳ ಉಪ ಪತ್ರಿಕಾ ಕಾರ್ಯದರ್ಶಿ ನವಿಕಾ ಗುಪ್ತಾ ಸುದ್ದಿಗಾರರಿಗೆ ತಿಳಿಸಿದರು. ಉದ್ಯಾನವನ್ನು ಭಾನುವಾರ ಸಾರ್ವಜನಿಕರಿಗಾಗಿ ತೆರೆಯಲಾಗುವುದು […]

Advertisement

Wordpress Social Share Plugin powered by Ultimatelysocial