`ರಾಬರ್ಟ್’ ಕೊಟ್ಟ ಸ್ವೀಟ್ ನ್ಯೂಸ್ 

‘ರಾಬರ್ಟ್’ ಕೊಟ್ಟ ಸ್ವೀಟ್ ನ್ಯೂಸ್ 

ಥಿಯೇಟರ್ ಗಳು ರೀ ಓಪನ್ ಆದ ಬಳಿಕ ಸ್ಯಾಂಡಲ್ ವುಡ್ ನ ಸಾಕಷ್ಟು ಸಿನಿಮಾಗಳು ರೀರಿಲೀಸ್ ಆಗಿವೆ.. ಆದ್ರೆ ಕೊರೋನಾ ಹಾವಳಿ ಇನ್ನೂ ಹಾಗೇ ಇರೋದ್ರಿಂದ ಯಾವ ಸ್ಟಾರ್ ಕಲಾವಿದರ ಸಿನಿಮಾಗಳೂ ಕೂಡ ಇನ್ನೂ ತೆರೆಕಂಡಿಲ್ಲ.. ಈ ವರ್ಷ ತೆರೆಕಾಣೋದು ಡೌಟ್ ಅಂತ ಸಹ ಹೇಳಲಾಗ್ತಿದೆ.. ಹೀಗಿರೋವಾಗ ರಾಬರ್ಟ್ ಕಡೆಯಿಂದ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ.. ಆ ನ್ಯೂಸ್ ಏನು ಅಂತ ಕೇಳಿದ್ರೆ, ಡಿ ಬಾಸ್ ಫ್ಯಾನ್ಸ್ ಎದ್ದು ಖುಷಿಯಿಂದ ಕುಣೀದಾಡೋದು ಗ್ಯಾರೆಂಟಿ..

ಡಿ ಬಾಸ್ ಫ್ಯಾನ್ಸ್ ಗೆ `ರಾಬರ್ಟ್’ ಸರ್ಪ್ರೈಸ್..!

ಲಾಕ್ ಡೌನ್ ಮುಗಿದು ಥೀಯೇಟರ್ ಗಳೆಲ್ಲಾ ರೀ ಓಪನ್ ಆಗಿವೆ.. ಲಾಕ್ ಡೌನ್ ಸಮಯದಲ್ಲಿ ತೆರೆಕಂಡು ಸರಿಯಾದ ಪ್ರದರ್ಶನ ಕಾಣದೇ ಉಳಿದಿದ್ದ ಸಾಕಷ್ಟು ಸಿನಿಮಾಗಳು ಇದೀಗ ರೀರಿಲೀಸ್ ಆಗಿ ಪ್ರದರ್ಶನ ಕಾಣ್ತಿವೆ.. ಆರು ತಿಂಗಳಿಂದ ಥಿಯೇಟರ್ ಗಳಲ್ಲಿ ಸಿನಿಮಾ ನೋಡೋ ಮಜಾ ಮಿಸ್ ಮಾಡ್ಕೊಂಡಿದ್ದ ಸಿನಿಪ್ರಿಯರು ಇದೀಗ ಚಿತ್ರಮಂದಿರಗಳಿಗೆ ಬಂದು ಬಿಗ್ ಸ್ಕ್ರೀನ್ ನಲ್ಲಿ ಸಿನಿಮಾಗಳನ್ನ ನೋಡಿ ಖುಷಿ ಪಡ್ತಿದ್ದಾರೆ.. ಆದ್ರೆ ಎಲ್ಲಾ ಸಿನಿಪ್ರಿಯರ ಸದ್ಯದ ಕುತೂಹಲದ ಪ್ರಶ್ನೆ ಒಂದೇ ತಮ್ಮ ನೆಚ್ಚಿನ ಸ್ಟಾರ್ ಕಲಾವಿದರ ಸಿನಿಮಾಗಳು ಯಾವಾಗ ರಿಲೀಸ್ ಆಗುತ್ವೆ ಅನ್ನೋದು.. ಅಂದಹಾಗೆ ಸ್ಯಾಂಡಲ್ ವುಡ್ ಎಲ್ಲಾ ಸ್ಟಾರ್ ನಟರ ಬಹುನಿರೀಕ್ಷಿತ ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ.. ಅಂತಹ ಚಿತ್ರಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾ ಕೂಡ ಒಂದು.. ಚಿತ್ರದ ಸ್ಯಾಂಪಲ್ಸ್ ನೋಡಿ ಖುಷಿ ಪಟ್ಟಿದ್ದ ಅಭಿಮಾನಿಗಳು ಅದ್ಯಾವಾಗ ಬಿಗ್ ಸ್ಕ್ರೀನ್ ನಲ್ಲಿ ರಾಬರ್ಟ್ ನನ್ನ ಕಣ್ತುಂಬಿಕೊಳ್ತೀವೋ ಅಂತ ತುದೀಗಾಲಲ್ಲಿ ನಿಂತಿದ್ದಾರೆ.. ಸಿನಿಮಾ ನೋಡಲು ಎಕ್ಸೈಟ್ ಅಗಿರುವ ಡಿ ಬಾಸ್ ಫ್ಯಾನ್ಸ್ ಗೆ ಇದೀಗ ಚಿತ್ರತಂಡ ಒಂದು ಸರ್ಪ್ರೈಸಿಂಗ್ ಸ್ವೀಟ್ ನ್ಯೂಸ್ ಕೊಟ್ಟಿದೆ..

ಅತೀ ಶೀಘ್ರದಲ್ಲೇ ಥಿಯೇಟರ್ ಗಳಿಗೆ `ರಾಬರ್ಟ್’ ಎಂಟ್ರಿ..!

ಎಸ್, ದಾಸ ದರ್ಶನ್ ಅವರ ಸಿನಿಮಾಗಳು ಅಂದ್ರೆ ಆ ಚಿತ್ರಗಳು ಟೈಟಲ್ ಫಿಕ್ಸ್ ಆದ ದಿನದಿಂದ್ಲೇ ಸೌಂಡ್ ಮಾಡೋಕೆ ಶುರು ಮಾಡ್ಬಿಡುತ್ವೆ.. ಅವರ ಸಿನಿಮಾಗಳಲ್ಲಿ ಸಂಥಿಂಗ್ ಸ್ಪೆಷಾಲಿಟಿ ಇದ್ದೇ ಇರುತ್ತೆ.. ಅದಕ್ಕೆ ರಾಬರ್ಟ್ ಸಿನಿಮಾ ಮತ್ತೊಂದು ಸಾಕ್ಷಿ ಅನ್ಬಹುದು.. ಈ ಚಿತ್ರವೂ ಕೂಡ ಟೈಟಲ್ ಫಿಕ್ಸ್ ಆದ ದಿನದಿಂದ್ಲೂ ಕೂಡ ಒಂದಲ್ಲಾ ಒಂದು ವಿಶೇಷತೆಗಳ ಮೂಲಕ ಸದ್ದು ಮಾಡ್ತಾನೇ ಇದೆ.. ಚಿತ್ರದಲ್ಲಿ ದರ್ಶನ್ ಅವರ ಲುಕ್ ಹಾಗೂ ಮೋಷನ್ ಪೋಸ್ಟರ್ ಗಳನ್ನ ನೋಡಿನೇ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.. ಕೊರೋನಾ ಹಾವಳಿ ಇಲ್ಲದೇ ಹೋಗಿದ್ರೆ ಇಷ್ಟೊತ್ತಿಗೆ ಸಿನಿಮಾ ತೆರೆ ಕಾಣ್ಬೇಕಿತ್ತು.. ಆದ್ರೆ ಕೊರೋನಾ ಅಬ್ಬರದ ಕಾರಣ ಸದ್ಯ ಥಿಯೇಟರ್ ಗಳಲ್ಲಿ ೫೦ ಪರ್ಸೆಂಟ್ ಪ್ರೇಕ್ಷಕರಿಗೆ ಮಾತ್ರ ಸಿನಿಮಾ ನೋಡಲು ಅವಕಾಶ ನೀಡಿದೆ ಸರ್ಕಾರ.. ಹೀಗಾಗಿ ಇಂತಹ ಸಮಯದಲ್ಲಿ ಸ್ಟಾರ್ ನಟರ ಸಿನಿಮಾಗಳನ್ನ ರಿಲೀಸ್ ಮಾಡಿದ್ರೆ ಚಿತ್ರ ನಿರ್ಮಾಪಕರು ಹೆಚ್ಚು ನಷ್ಟ ಅನುಭವಿಸುವ ಸಂಭವವಿದೆ.. ಹೀಗಾಗಿ ರಿಲೀಸ್ ಗೆ ರೆಡಿ ಇದ್ರೂ ಕನ್ನಡದ ಬಹುತೇಕ ಎಲ್ಲಾ ಸ್ಟಾರ್ ಕಲಾವಿದರ ಸಿನಿಮಾಗಳನ್ನ ರಿಲೀಸ್ ಮಾಡಲು ಆಯಾ ಚಿತ್ರತಂಡಗಳು ಹಿಂದೇಟು ಹಾಕ್ತಿವೆ.. ಪರಿಸ್ಥಿತಿ ಹೀಗಿದ್ರೂ ರಾಬರ್ಟ್ ಸಿನಿಮಾ ಟೀಮ್ ಮಾತ್ರ ಚಿತ್ರದ ರಿಲೀಸ್ ಬಗ್ಗೆ ಒಂದು ಭರವಸೆ ಮಾತು ಹೇಳಿದೆ.. ಈ ಬಗ್ಗೆ ಆ ಚಿತ್ರದ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಅವರು ಮಾತನಾಡಿದ್ದು ಇದೇ ಡಿಸೆಂಬರ್ ಗೆ ರಾಬರ್ಟ್ ಚಿತ್ರವನ್ನ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ..

ಉಮಾಪತಿ ಶ್ರೀನಿವಾಸ್, ನಿರ್ಮಾಪಕ

ರಾಬರ್ಟ್ ಚಿತ್ರಕ್ಕಾಗಿ ಇಡೀ ಚಿತ್ರತಂಡ ಸತತ ಎರಡು-ಮೂರು ವರ್ಷಗಳ ಪರಿಶ್ರಮ ಪಟ್ಟಿದೆ.. ಅದ್ರಲ್ಲೂ ನಟ ದರ್ಶನ್ ಅವರು ತಮ್ಮ ಪಾತ್ರಕ್ಕಾಗಿ ಬಹಳ ಎಫರ್ಟ್ ಹಾಕಿದ್ದಾರೆ.. ತಮ್ಮ ಯಾವುದೇ ಸಿನಿಮಾಗಳಾದ್ರೂ ಕೂಡ ದರ್ಶನ್ ಆ ಪಾತ್ರಗಳಿಗೆ ತಕ್ಕ ನ್ಯಾಯ ಒದಗಿಸ್ತಾರೆ.. ಹಾಗೆ ರಾಬರ್ಟ್ ಚಿತ್ರದಲ್ಲೂ ಅವರು ಅಷ್ಟೇ ಡೆಡಿಕೇಟೆಡ್ ಆಗಿ ವರ್ಕ್ ಮಾಡಿದ್ದಾರೆ ಅನ್ನೋದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಮಾತುಗಳಲ್ಲೇ ಗೊತ್ತಾಗ್ತಿದೆ.. ಅಂದಹಾಗೆ ಈ ಮೋಸ್ಟ್ ಅವೇಯ್ಟೆಡ್ ಚಿತ್ರಕ್ಕೆ ತರುಣ್ ಸುಧೀರ್ ಅವರು ಅಕ್ಷನ್ ಕಟ್ ಹೇಳಿದ್ದಾರೆ.. ಉಮಾಪತಿ ಶ್ರೀನಿವಾಸ್ ಅವರ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ.. ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಕ್ ಕಂಪೋಸ್ ಮಾಡಿದ್ದಾರೆ.. ಚಿತ್ರದ ಪೋಸ್ಟರ್ಸ್, ಮೋಶನ್ ಪೋಸರ್, ಟೀಸರ್ ಎಲ್ಲವೂ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿರುವ ಕುತೂಹಲ ಹಾಘೂ ನಿರೀಕ್ಷೆಗಳನ್ನ ದುಪ್ಪಟ್ಟುಗೊಳಿಸಿವೆ..

ಸಿನಿಮಾ ಬಗ್ಗೆ ದರ್ಶನ್ ಅಭಿಮಾನಿಗಳ ಕುತೂಹಲ, ಕಾತರತೆ ರಾಬರ್ಟ್ ಚಿತ್ರತಂಡಕ್ಕೂ ಅರ್ಥವಾಗಿದೆ.. ಹೀಗಾಗಿ ಚಿತ್ರವನ್ನ ಆದಷ್ಟು ಬೇಗ ತೆರೆಕಾಣಿಸಲು ಸಿನಿಮಾ ಟೀಮ್ ಕೂಡ ಸಜ್ಜಾಗಿದೆ.. ಆದ್ರೆ ಈ ಸಮಯದಲ್ಲಿ ಸಿನಿಮಾ ರಿಲೀಸ್ ಮಾಡೋದ್ರಿಂದ ಎಲ್ಲಾ ರೀತಿಯಿಂದ್ಲೂ ತೊಂದರೆ ಆಗುವ ಸಾಧ್ಯತೆಯೇ ಹೆಚ್ಚು.. ಸೋ ಕೊರೋನಾ ಹಾವಳಿ ಇನ್ನಷ್ಟು ಕಡಿಮೆಯಾಗಿ ೧೦೦ ಪರ್ಸೆಂಟ್ ಜನಕ್ಕೆ ಸಿನಿಮಾ ನೋಡೋ ಅವಕಾಶ ಸಿಕ್ಕಿದ ನಂತರವಷ್ಟೇ ಚಿತ್ರವನ್ನ ರಿಲೀಸ್ ಮಾಡೋದಾಗಿ ರಾಬರ್ಟ್ ಚಿತ್ರತಂಡ ತಿಳಿಸಿದೆ.. ಎಲ್ಲವೂ ಆದಷ್ಟು ಬೇಗ ಸರಿ ಹೋದ್ರೆ ಇದೇ ವರ್ಷದ ಡಿಸೆಂಬರ್ ೨೫ಕ್ಕೆ ರಾಬರ್ಟ್ ಥಿಯೇಟರ್ ಗಳಿಗೆ ಕೊಡಲಿದ್ದಾನೆ ಅನ್ತಿದೆ ಚಿತ್ರತಂಡ.. ಎನಿವೇ ಎಲ್ಲಾ ಅಂದುಕೊಂಡಂತೆ ಆದ್ರೆ ಇದೇ ವರ್ಷವೇ ಬಿಗ್ ಸ್ಕ್ರೀನ್ ಗಳಲ್ಲಿ ರಾಬರ್ಟ್ ಸದ್ದು ಮಾಡೋದು ಗ್ಯಾರೆಂಟಿ..

 

 

Please follow and like us:

Leave a Reply

Your email address will not be published. Required fields are marked *

Next Post

1-10ನೇ ತರಗತಿ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

Sat Nov 7 , 2020
ಶಿಕ್ಷಣ ಇಲಾಖೆ ಆದೇಶ – ಕಳೆದ 5 ತಿಂಗಳ ಆಹಾರ ಧಾನ್ಯ ವಿತರಣೆ ಕೋವಿಡ್ 19 ಹರಡದಂತೆ ತಡೆಗಟ್ಟುವ ಉದ್ದೇಶದಿಂದ ರಾಜ್ಯಾದ್ಯಂತ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಶಾಲೆಗಳನ್ನು ಆರಂಭಿಸಲಿಲ್ಲ. ಜೂನ್ನಿಂದ ಅಕ್ಟೋಬರ್ ತಿಂಗಳಲ್ಲಿ ಶಾಲೆಗಳನ್ನು ಮುಚ್ಚಿರುವುದರಿಂದ ವಿದ್ಯಾರ್ಥಿಗಳಿಗೆ ಅಗತ್ಯ ಪೌಷ್ಟಿಕಾಂಶ ಒದಗಿಸಲು ಮಧ್ಯಾಹ್ನದ ಬಿಸಿಯೂಟದ ಬದಲಾಗಿ ಆಹಾರ ಧಾನ್ಯಗಳನ್ನು ನೀಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಸಾರ್ವತ್ರಿಕ ರಜೆ ಹೊರತುಪಡಿಸಿ ಐದು ತಿಂಗಳಲ್ಲಿ 108 ದಿನಗಳ ಆಹಾರ ಸಾಮಗ್ರಿಗಳನ್ನು 1ರಿಂದ 10ನೇ […]

Advertisement

Wordpress Social Share Plugin powered by Ultimatelysocial