ಪಾಂಡ್ಯ ಬ್ರದರ್ಸ್​ರನ್ನು ಮೀಟ್​ ಮಾಡಿದ​​ ರಾಕಿ ಭಾಯ್​! ಏನಾದ್ರು ಸಿಹಿ ಸುದ್ದಿ ಇದ್ಯಾ?

ರಾಕಿಂಗ್​ ಸ್ಟಾರ್​ ಯಶ್​​ ಟೀಂ ಇಂಡಿಯಾದ ಕ್ರಿಕೆಟಿಗರಾದ ಹಾರ್ದಿಕ್​ ಪಾಂಡ್ಯ ಮತ್ತು ಕ್ರುನಾಲ್​ ಪಾಂಡ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂತಸದ ಕ್ಷಣವನ್ನು ಹಾರ್ದಿಕ್​ ಪಾಂಡ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಸದ್ಯ ಈ ಫೋಟೋ ವೈರಲ್​ ಆಗಿದೆ.ಹಾರ್ದಿಕ್​ ಪಾಂಡ್ಯ ಅವರು ನಟ ಯಶ್ ಅವರನ್ನು ತಬ್ಬಿಕೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಹೋದರರು ರಾಕಿ​ ಬಾಯ್​ ಜೊತೆಗೆ ನಿಂತು ಪೋಸು ನೀಡಿದ್ದನ್ನು ಸೋಷಿಯಲ್​ ಮೀಡಿಯಾದಲ್ಲಿ ಅಪ್ಲೋಡ್​​ ಮಾಡಿದ್ದಾರೆ.ಸದ್ಯ ಯಶ್​​ ಅವರು ಪಾಂಡ್ಯ ಸಹೋದರರನ್ನು ಎಲ್ಲಿ ಭೇಟಿಯಾದರು? ಯಾವ ವಿಚಾರಕ್ಕೆ ಮೀಟ್​ ಮಾಡಿದರು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಪಾಂಡ್ಯ ಅಭಿಮಾನಿಗಳು ಮತ್ತು ಯಶ್​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಂಡ ಈ ಫೋಟೋವನ್ನು ಕಂಡು ಕೊಂಡಾಡುತ್ತಿದ್ದಾರೆ.ಕೆಜಿಎಫ್​ ಸಿನಿಮಾದ ಮೂಲಕ ಕನ್ನಡದ ನಟ ಯಶ್​ ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಪ್ರಶಾಂತ್ ನೀಲ್​​ ನಿರ್ದೇಶನದ ಕೆಜಿಎಫ್​ ಮತ್ತು ಕೆಜಿಎಫ್​ 2 ಭರ್ಜರಿ ಸಕ್ಷಸ್​ ಕಾಣುವ ಮೂಲಕ ಬಾಕ್ಸ್​ ಆಫೀಸನ್ನು ಧೂಳಿಪಟ ಮಾಡಿತ್ತು. ಇದೀಗ ಸಿನಿ ಪ್ರಿಯರು ಕೆಜಿಎಫ್​ 3 ಬಿಡುಗಡೆಗಅಗಿ ಕಾದು ಕುಳಿತ್ತಿದ್ದಾರೆ.ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

 

 

 

Please follow and like us:

Leave a Reply

Your email address will not be published. Required fields are marked *

Next Post

'ರಶ್ಮಿಕಾ ಹೇಳಿಕೆ ಎಸ್‌ಪಿಬಿ, ಎಸ್‌ ಜಾನಕಿ, ಹಂಸಲೇಖರಿಗೆ ಅವಮಾನ ಮಾಡಿದಂತೆ" - ಡಾ. ವಿ. ನಾಗೇಂದ್ರ ಪ್ರಸಾದ್!

Thu Dec 29 , 2022
ರಶ್ಮಿಕಾ ಮಂದಣ್ಣ ವಿವಾದದಲ್ಲಿ ಸಿಕ್ಕಿಕೊಳ್ಳೋದು ಹೊಸತೇನೂ ಅಲ್ಲ. ಏನಾದರೂ ಒಂದು ಹೇಳಿಕೆ ಕೊಟ್ಟು ಪೇಚಿಗೆ ಸಿಲುಕುತ್ತಾರೆ. ಈಗ ನ್ಯಾಷನಲ್ ಕ್ರಶ್ ಕೊಟ್ಟ ಹೇಳಿಕೆಯೊಂದು ದಕ್ಷಿಣ ಭಾರತದ ಸಿನಿಮಾ ಮಂದಿಯ ಕೋಪಕ್ಕೆ ಕಾರಣವಾಗಿದೆ.ರಶ್ಮಿಕಾ ಮಂದಣ್ಣ ತನ್ನ ಬಾಲಿವುಡ್ ಸಿನಿಮಾ ‘ಮಿಷನ್ ಮಜ್ನು’ ಹಾಡು ಬಿಡುಗಡೆ ಕಾರ್ಯಕ್ರಮದ ವೇಳೆ ಕೊಟ್ಟ ಹೇಳಿಕೆ ಹಲವರ ನಿದ್ದೆ ಕೆಡಿಸಿದೆ.ಈ ಕಾರ್ಯಕ್ರಮದಲ್ಲಿ “ಬಾಲಿವುಡ್ ಸಿನಿಮಾ ಹಾಡು ಹೆಚ್ಚು ರೊಮ್ಯಾಂಟಿಕ್ ಆಗಿರುತ್ತವೆ. ಅದೇ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾಸ್ […]

Advertisement

Wordpress Social Share Plugin powered by Ultimatelysocial