ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಬೆಲ್ಲ!

ಪ್ರತಿದಿನ ಬೆಳಗ್ಗೆ ಸ್ವಲ್ಪವಾದರೂ ಬೆಲ್ಲ ತಿನ್ನಬೇಕು ಎನ್ನುವುದು ಮಲೆನಾಡಿನಲ್ಲಿ ಚಾಲ್ತಿಯಲ್ಲಿರುವ ಅಲಿಖಿತ ನಿಯಮ.
ಮಕ್ಕಳಿಗಂತೂ ಕಡ್ಡಾಯವಾಗಿ ಬೆಲ್ಲ ನೀಡಲಾಗುತ್ತದೆ.
ಜೋನಿಬೆಲ್ಲದೊಂದಿಗೆ ತುಪ್ಪ ಸೇರಿಸಿ ತಿನ್ನುವುದು ಮಜವೇ ಮಜ. ಅದರ ಮುಂದೆ ಬೇರ್ಯಾವ ಸಿಹಿಯೂ ಇಲ್ಲ. ಅಷ್ಟು ಖುಷಿ ಸಿಗುತ್ತದೆ. ಕೇವಲ ಖುಷಿ ಮಾತ್ರವಲ್ಲ. ಬೆಲ್ಲದಿಂದ ದೇಹಕ್ಕೆ ಸದೃಢತೆಯೂ ದೊರೆಯುತ್ತದೆ. ಸಕ್ಕರೆಯ ಸಿಹಿ ದೇಹಕ್ಕೆ ಒಳ್ಳೆಯದಲ್ಲ. ಬದಲಿಗೆ ಬೆಲ್ಲ ತಿನ್ನುವುದು ಅತಿ ಉತ್ತಮ.

ಬೇಸಿಗೆಯ ಮಧ್ಯಾಹ್ನದ ಸಮಯದಲ್ಲಿ ಬೆಲ್ಲ-ಮಜ್ಜಿಗೆಯ ಹೊಂದಾಣಿಕೆ ದೇಹಕ್ಕೆ ತಂಪು ನೀಡುತ್ತದೆ. ಬೆಲ್ಲದೊಂದಿಗೆ ಚೂರು ನೀರು ಬೆರೆಸಿ, ಲಿಂಬೆರಸ ಸೇರಿಸಿ, ಪಾನಕ ಮಾಡಿ ಸೇವಿಸುವುದೂ ಇದೆ. ಇನ್ನು, ಸಾಂಬಾರಿಗೂ ಸ್ವಲ್ಪ ಬೆಲ್ಲ, ಪಲ್ಯಕ್ಕೂ ಬೆಲ್ಲ ಸೇರಿಸುವ ಅಭ್ಯಾಸವಂತೂ ಹಲವೆಡೆ ಇದೆ. ಇದೆಲ್ಲ ಸುಮ್ಮನೆ ಬಾಯಿರುಚಿಗಲ್ಲ.
ಲಿವರ್

ನಾವು ದಿನವೂ ಏನೇನೋ ತಿನ್ನುತ್ತಿರುತ್ತೇವೆ. ಕಂಡಿದ್ದನ್ನೆಲ್ಲ ರುಚಿ ನೋಲಿ ನಲಿಯುತ್ತೇವೆ. ಆದರೆ, ಎಲ್ಲವನ್ನೂ ದಕ್ಕಿಸಿಕೊಳ್ಳುವ ತಾಕತ್ತು ಲಿವರ್ ಗೆ ಇರಬೇಕಲ್ಲವೇ? ನಮ್ಮ ಲಿವರ್ ಅರ್ಥಾತ್ ಯಕೃತ್ ನಲ್ಲಿ ನಾವು ಸೇವಿಸುವ ಆಹಾರದಿಂದ ಅನೇಕ ವಿಷಕಾರಿ ಅಂಶಗಳು ಶೇಖರಣೆಯಾಗುತ್ತಿರುತ್ತವೆ.

Please follow and like us:

Leave a Reply

Your email address will not be published. Required fields are marked *

Next Post

ಶ್ರೀಕಿ ಹ್ಯಾಕಿಂಗ್‌ ಗೆ, ಸಿಐಡಿಯಿಂದ ಚಾರ್ಜ್‌ ಶೀಟ್‌ ರೆಡಿ..!

Thu Dec 16 , 2021
ಇ-ಪ್ರೊಕ್ಯೂರ್‌ಮೆಂಟ್ ಸೆಲ್, ಸೆಂಟರ್ ಫಾರ್ ಇ-ಗವರ್ನೆನ್ಸ್‌ನಿಂದ 11.55 ಕೋಟಿ ರೂ. ಠೇವಣಿ ಹಣವನ್ನು ಹ್ಯಾಕ್ ಮಾಡಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಇತರ 18 ಆರೋಪಿಗಳ ವಿರುದ್ಧ ಸಿಐಡಿ ಬುಧವಾರ ಚಾರ್ಜ್ ಶೀಟ್ ಸಲ್ಲಿಸಿದೆ. ಐಪಿಸಿ ಸೆಕ್ಷನ್ 420, ಮಾಹಿತಿ ತಂತ್ರಜ್ಞಾನ(ಐಟಿ) ಕಾಯ್ದೆಯ ಸೆಕ್ಷನ್ 43 ಮತ್ತು ಸೆಕ್ಷನ್ 66ರ ಅಡಿಯಲ್ಲಿ ಹ್ಯಾಕಿಂಗ್ ಮತ್ತು ಡೇಟಾ ಕಳ್ಳತನ ಆರೋಪದ ಮೇಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. […]

Advertisement

Wordpress Social Share Plugin powered by Ultimatelysocial