ಫೆಬ್ರವರಿ 11ಕ್ಕೆ ರೌಡಿ ಬೇಬಿ ಚಿತ್ರ ಬಿಡುಗಡೆ;

ರಾಜ್ಯ ಸರ್ಕಾರ ವಾರಾಂತ್ಯದ ಕರ್ಫ್ಯೂ ಸಡಿಲಿಸುವುದರೊಂದಿಗೆ, ವಿವಿಧ ಕನ್ನಡ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಗಳನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ಕೃಷ್ಣಾ ರೆಡ್ಡಿ ನಿರ್ದೇಶನದ ದಿವ್ಯಾ ಸುರೇಶ್ ಮತ್ತು ರವಿಗೌಡ ಅಭಿನಯದ ರೌಡಿ ಬೇಬಿ ಕೂಡ ಫೆಬ್ರವರಿ 11 ರಂದು ಥಿಯೇಟರ್‌ಗೆ ಬರಲಿದೆ.

ಈ ಚಿತ್ರದ ನಟ ಹಾಗೂ ನಿರ್ಮಾಪಕ ರವಿಗೌಡ ಅವರು ಈ ಸುದ್ದಿಯನ್ನು ಸಿನಿ ಎಕ್ಸ್ ಪ್ರೆಸ್ ಗೆ ಖಚಿತಪಡಿಸಿದ್ದಾರೆ.

“ರೌಡಿ ಬೇಬಿ ಒಂದು ಸಸ್ಪೆನ್ಸ್ ರೋಮ್ಯಾಂಟಿಕ್ ಥ್ರಿಲ್ಲರ್ ಆಗಿದ್ದು, ಇದು ಪ್ರೀತಿ, ಜೀವನ ಮತ್ತು ಭಾವನೆಗಳ ಬಗ್ಗೆಗಿನ ಕಥಾಹಂದರವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

ರವಿಗೌಡ ಮತ್ತು ದಿವ್ಯಾ ಸುರೇಶ್ ಅವರೊಂದಿಗೆ ಎರಡನೇ ಹಿರೋಯಿನ್ ಆಗಿ ಹೀರ್ ಕೌರ್ ಅಭಿನಯಿಸಿದ್ದಾರೆ.

ತಾರಾಗಣದಲ್ಲಿ ಅರುಣಾ ಬಾಲರಾಜ್ ಸೇರಿದಂತೆ ಶ್ರೀನಾಥ್ ವಶಿಷ್ಟ ಅಮಿತ್ ವಿ ರಾಜ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮ್ರಾಟ್ ಅವರ ಛಾಯಾಗ್ರಾಹಣವಿದ್ದು, ಕಾರ್ತಿಕೇಯ ಮೂರ್ತಿ ಮತ್ತು ಎಸ್‌ಎ ಅರಾಮನ್ ರೌಡಿ ಬೇಬಿಗೆ ಸಂಗೀತ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022: ಲಕ್ನೋ ಫ್ರಾಂಚೈಸಿಯನ್ನು ಲಕ್ನೋ ಸೂಪರ್ ಜೈಂಟ್ಸ್ ಎಂದು ಕರೆಯಲಾಗುವುದು;

Mon Jan 24 , 2022
ಆರ್‌ಪಿಎಸ್‌ಜಿ ಗ್ರೂಪ್ ಒಡೆತನದ ಲಕ್ನೋದ ಐಪಿಎಲ್ ಫ್ರಾಂಚೈಸ್ ಅನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜಿನ ಮೊದಲು ಲಕ್ನೋ ಸೂಪರ್ ಜೈಂಟ್ಸ್ ಎಂದು ಹೆಸರಿಸಲಾಯಿತು. ತಂಡದ ಮಾಲೀಕ ಸಂಜೀವ್ ಗೋಯೆಂಕಾ ಸೋಮವಾರ ಈ ವಿಷಯವನ್ನು ಪ್ರಕಟಿಸಿದ್ದಾರೆ. ಲಕ್ನೋದ ಅಧಿಕೃತ IPL ತಂಡವು ತನ್ನ ಅಭಿಮಾನಿಗಳಿಂದ ತನ್ನ ಹೆಸರನ್ನು ಕ್ರೌಡ್‌ಸೋರ್ಸ್ ಮಾಡಿದೆ ಮತ್ತು ಗ್ರಾಹಕರ ನಿಶ್ಚಿತಾರ್ಥದ ಅಭಿಯಾನವನ್ನು 3ನೇ ಜನವರಿ 2022 ರಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಾರಂಭಿಸಲಾಯಿತು. […]

Advertisement

Wordpress Social Share Plugin powered by Ultimatelysocial