‘ಬಾನ ದಾರಿಯಲ್ಲಿ’ ಸಿನಿಮಾಕ್ಕೆ ತರಬೇತಿ ಪಡೆಯುತ್ತಿರುವ ನಟಿ ರುಕ್ಮಿಣಿ

 

ಪ್ರೇಮಕತಾ ಸಿನಿಮಾಗಳ ಮೂಲಕ ತಮ್ಮದೇ ಪ್ರತ್ಯೇಕ ಛಾಪು ಮೂಡಿಸಿರುವ ನಿರ್ದೇಶಕ ಪ್ರೀತಂ ಗುಬ್ಬಿ ಇದೀಗ ಮತ್ತೊಂದು ಪ್ರೇಮಕತೆ ಹೊತ್ತು ತಂದಿದ್ದಾರೆ.

ಪ್ರೀತಂ ಗುಬ್ಬಿ ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈಜೋಡಿಸಿದ್ದು ಹೊಸ ಸಿನಿಮಾ ಘೋಷಿಸಿದ್ದಾರೆ.

ಸಿನಿಮಾದ ಹೆಸರು ‘ಬಾನ ದಾರಿಯಲ್ಲಿ’. ಸಿನಿಮಾವು ಅಪ್ಪಟ ಪ್ರೇಮಕತಾ ಸಿನಿಮಾ ಆಗಿರುವ ಜೊತೆಗೆ ಕೆಲವು ವಿಶೇಷತೆಗಳನ್ನು ಸಹ ಒಳಗೊಂಡಿದೆ.

ಸಿನಿಮಾದಲ್ಲಿ ಸುಂದರ ನಟಿ ಕಲ್ಯಾಣಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರಕ್ಕೆ ಬಹಳವೇ ಪ್ರಾಮುಖ್ಯತೆ ಇದೆಯಂತೆ. ಅಲ್ಲದೆ, ಸಿನಿಮಾದ ಚಿತ್ರೀಕರಣಕ್ಕಾಗಿ ಕಲ್ಯಾಣಿ ಅವರನ್ನು ತಯಾರು ಮಾಡುತ್ತಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಕಲ್ಯಾಣಿ ಅವರಿಗೆ ಪ್ರತ್ಯೇಕ ತರಬೇತಿಯನ್ನು ಸಹ ಕೊಡಿಸುತ್ತಿದ್ದಾರೆ.

‘ಬಾನ ದಾರಿಯಲ್ಲಿ’ ಸಿನಿಮಾದಲ್ಲಿ ಕಲ್ಯಾಣಿ ಸರ್ಫಿಂಗ್ ಆಟಗಾರ್ತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಕಾರಣಕ್ಕೆ ನಟಿ ಕಲ್ಯಾಣಿಗೆ ಸರ್ಫಿಂಗ್ ತರಬೇತಿಯನ್ನು ನಿರ್ದೇಶಕ ಪ್ರೀತಂ ಗುಬ್ಬಿ ಕೊಡಿಸುತ್ತಿದ್ದಾರೆ.

ಅಲೆಗಳ ಮೇಲೆ ಆಟವಾಡುವ ಸರ್ಫಿಂಗ್ಸಮುದ್ರದ ಅಲೆಗಳ ಮೇಲೆ ಸರ್ಫಿಂಗ್ ಬೋರ್ಡ್ ಬಳಸಿ ಆಟವಾಡುವುದು ಸುಲಭದ ಕೆಲಸವಲ್ಲ. ಹಾಗಾಗಿಯೇ ಚಿತ್ರೀಕರಣಕ್ಕೂ ಮುನ್ನವೇ ಚೆನ್ನಾಗಿ ಸರ್ಫಿಂಗ್ ಕಲಿತು ನಂತರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಕಲ್ಯಾಣಿ. ನಟಿಗೆ ಮಂಗಳೂರಿನ ಮುಲ್ಕಿ ಬಳಿ ಸರ್ಫಿಂಗ್ ಪರಿಣಿತರು ತರಬೇತಿ ನೀಡುತ್ತಿದ್ದಾರೆ.

ಕಲ್ಯಾಣಿಯ ಪಾತ್ರದ ಹೆಸರು ಲೀಲಾ

ಸಿನಿಮಾದಲ್ಲಿ ಕಲ್ಯಾಣಿಯ ಪಾತ್ರದ ಹೆಸರು ಲೀಲಾ, ಆಕೆ ಚಿಕ್ಕ ವಯಸ್ಸಿನಿಂದಲೂ ಸರ್ಫಿಂಗ್ ಕಲಿತಿರುತ್ತಾಳೆ, ಆಕೆ ಒಬ್ಬ ಪ್ರೊಫೆಷನಲ್ ಸರ್ಫಿಂಗ್ ಆಟಗಾರ್ತಿ. ರುಕ್ಮಿಣಿ ಈಗಷ್ಟೆ ಸರ್ಫಿಂಗ್ ಕಲಿತಿದ್ದಾರೆ ಎಂಬುದು ತೆರೆಯ ಮೇಲೆ ಎಲ್ಲೂ ಕಾಣಿಸಲಾರದಂತೆ ತರಬೇತಿ ಕೊಡಿಸುತ್ತಿದ್ದಾರೆ ಪ್ರೀತಂ. ರುಕ್ಮಿಣಿ ಸಹ ತಲ್ಲೀನತೆಯಿಂದ ತರಬೇತಿಯಲ್ಲಿ ಭಾಗವಹಿಸಿದ್ದಾರೆ. ಸಿನಿಮಾದ ಪೋಸ್ಟರ್‌ನಲ್ಲಿ ಸಹ ಗಣೇಶ್ ಸರ್ಫಿಂಗ್ ಬೋರ್ಡ್ ಹಿಡಿದು ಕಾಣಿಸಿಕೊಂಡಿದ್ದಾರೆ.

ಸರ್ಫಿಂಗ್ ಕಲಿಯುತ್ತಿರುವ ರುಕ್ಮಿಣಿ

ಸರ್ಫಿಂಗ್ ಬೋರ್ಡ್‌ ಬಗ್ಗೆ ಸಾಮಾನ್ಯ ಜ್ಞಾನ, ಅಲೆಗಳನ್ನು ನಿಯಂತ್ರಿಸುವುದು ಹೇಗೆ, ಅಲೆಗಳ ಮೇಲೆ ಸವಾರಿ ಮಾಡುವುದು ಹೇಗೆ, ಸರ್ಫಿಂಗ್ ಬೋರ್ಡ್‌ ಅನ್ನು ಬಳಸುವುದು ಹೇಗೆ, ಸಮುದ್ರದಲ್ಲಿ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸುವುದು ಹೇಗೆ ಇತರೆ ವಿಚಾರಗಳ ಬಗ್ಗೆ ರುಕ್ಮಿಣಿ ತರಬೇತಿ ಪಡೆಯುತ್ತಿದ್ದಾರೆ.

ಪ್ರೀತಂ ಗುಬ್ಬಿ ಮೇಲೆ ನಂಬಿಕೆ ಇದೆ: ರುಕ್ಮಿಣಿ

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದಲ್ಲಿ ನನ್ನದು ಬಹಳ ಭಾವುಕ ಪಾತ್ರ. ಇಲ್ಲಿ ಸಹ ಭಾವುಕ ಪಾತ್ರವೇ ಆದರೆ ಸಾಕಷ್ಟು ಭಿನ್ನತೆ ಆ ಸಿನಿಮಾದ ನನ್ನ ಪಾತ್ರಕ್ಕೂ ‘ಬಾನ ದಾರಿಯಲ್ಲಿ’ ಸಿನಿಮಾದ ಪಾತ್ರಕ್ಕೂ ಇದೆ. ಪ್ರೀತಂ ಗುಬ್ಬಿ ಅವರ ಈ ಹಿಂದಿನ ಸಿನಿಮಾಗಳನ್ನು ನೋಡಿದ್ದೇನೆ. ಅವರ ಸಿನಿಮಾಗಳಲ್ಲಿ ನಾಯಕಿ ಪಾತ್ರಕ್ಕೆ ಸಾಕಷ್ಟು ಪ್ರಾಧಾನ್ಯತೆ ಇರುತ್ತದೆ, ನನ್ನ ಪಾತ್ರವನ್ನೂ ಚೆನ್ನಾಗಿ ತೋರಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದಿದ್ದಾರೆ ರುಕ್ಮಿಣಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಸ್ಸಾಂನಲ್ಲಿ ಭಾರೀ ಪ್ರವಾಹ: ರೈಲು ಹಳಿಗಳ ಮೇಲೆ ಜೀವನ ಸಾಗಿಸುತ್ತಿವೆ 500 ಕ್ಕೂ ಹೆಚ್ಚು ಕುಟುಂಬಗಳು

Sat May 21 , 2022
  ದೀಸ್ಪುರ್​: ಭಾರೀ ಪ್ರವಾಹದ ಹೊಡೆತಕ್ಕೆ ಅಸ್ಸಾಂ ರಾಜ್ಯ ತತ್ತರಿಸಿದೆ. ಜಮುನಮುಖ್​ ಜಿಲ್ಲೆಯ ಎರಡು ಪ್ರವಾಹ ಪೀಡಿತ ಗ್ರಾಮದ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ನೆಲೆ ಕಳೆದುಕೊಂಡಿದ್ದು, ರೈಲ್ವೆ ಹಳಿಗಳ ಮೇಲೆ ತಾತ್ಕಾಲಿಕ ಬದುಕು ಸಾಗಿಸುವಂತಹ ಶೋಚನಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದ ನೀರಿಗೆ ಮುಳಗಡೆಯಾಗದಷ್ಟು ಎತ್ತರದಲ್ಲಿರುವ ಒಂದೇ ಒಂದು ಪ್ರದೇಶ ರೈಲ್ವೆ ಹಳಿಯಾಗಿರುವುದರಿಂದ ಎರಡು ಗ್ರಾಮದ ಕುಟುಂಗಳು ಹಳಿಗಳ ಮೇಲೆ ಬದುಕುವಂತಾಗಿದೆ. ಅಸ್ಸಾಂ ಪ್ರವಾಹದಲ್ಲಿ ಬಹುತೇಕ ಎಲ್ಲವನ್ನೂ ಕಳೆದುಕೊಂಡಿರುವ ಚಂಗ್ಜುರೈ […]

Advertisement

Wordpress Social Share Plugin powered by Ultimatelysocial