ಯುದ್ಧದ ಮಧ್ಯೆಯೇ ರಷ್ಯಾದಿಂದ ಸಿಮ್ಯುಲೇಟರ್​ ಖರೀದಿಸಿದ ಭಾರತ!

 

ಉಕ್ರೇನ್​ ಮೇಲೆ ಯುದ್ಧ ಸಾರಿರುವ ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಹಲವಾರು ನಿರ್ಬಂಧಗಳನ್ನು ವಿಧಿಸಿವೆ. ಇದರ ಮಧ್ಯೆಯೇ ಭಾರತ, ರಷ್ಯಾದ ಜೊತೆ ಒಪ್ಪಂದ ಮಾಡಿಕೊಂಡು ಯುದ್ಧ ಸಾಮಗ್ರಿಯ ಬಿಡಿಭಾಗಗಳನ್ನು ಖರೀದಿಸಿದೆ.

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆಯೇ ಭಾರತ ರಷ್ಯಾದಿಂದ ಎಸ್​- 400 ಟ್ರಯಂಫ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಸಿಮ್ಯುಲೇಟರ್‌ಗಳು ಮತ್ತು ಇತರ ಉಪಕರಣಗಳನ್ನು ಖರೀದಿಸಿದೆ.

ಇದರಲ್ಲಿ ಸ್ಕ್ವಾಡ್ರನ್ ಮತ್ತು ಸಿಮ್ಯುಲೇಟರ್‌ಗಳು ಹಾಗೂ ತರಬೇತಿ ಸಂಬಂಧಿತ ಉಪಕರಣಗಳು ಮಾತ್ರ ಇವೆ. ಕ್ಷಿಪಣಿಗಳು ಅಥವಾ ಲಾಂಚರ್‌ಗಳನ್ನು ಒಳಗೊಂಡಿಲ್ಲ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಉಕ್ರೇನ್​ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ಮಧ್ಯೆಯೇ ವಿಮಾನಗಳ ಎಂಜಿನ್ ಮತ್ತು ಬಿಡಿಭಾಗಗಳನ್ನು ಖರೀದಿಸಿದ ಬಳಿಕ ಇದೀಗ ಸಿಮ್ಯುಲೇಟರ್​ಗಳನ್ನು ಪಡೆದುಕೊಂಡಿದೆ. ಇದಕ್ಕೆ ಯಾವ ರೀತಿಯಾಗಿ ಹಣ ಸಂದಾಯ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಭಾರತೀಯ ರಕ್ಷಣಾ ಪಡೆಗಳು ಇತ್ತೀಚೆಗೆ ರಷ್ಯನ್ನರಿಂದ ಯುದ್ಧ ಸಾಮಗ್ರಿಗಳನ್ನು ಪಡೆದುಕೊಂಡಿದೆ. ದೇಶಕ್ಕೆ ಅವುಗಳನ್ನು ರಷ್ಯಾ ಸಾಗಿಸುತ್ತಿದೆ. ನಮ್ಮ ಪಡೆಗಳಿಗೆ ಯುದ್ಧ ಸಾಮಗ್ರಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ರಷ್ಯಾದ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಹಣಕಾಸು ನಿರ್ಬಂಧ ವಿಧಿಸಿದ ಪರಿಣಾಮ ಯಾವ ಮಾದರಿಯಲ್ಲಿ ರಷ್ಯಾಗೆ ಹಣ ಪಾವತಿ ಮಾಡಬೇಕು ಎಂಬ ಬಗ್ಗೆ ಚಿಂತನೆ ಮುಂದುವರಿದಿದೆ. ಇದನ್ನು ಬಗೆಹರಿಸಲು ಉಭಯ ರಾಷ್ಟ್ರಗಳ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ. ಬೇರೆ ಆಯ್ಕೆಗಳನ್ನು ಅನ್ವೇಷಿಸಲಾಗುತ್ತಿದೆ ಎಂದು ತಿಳಿಸಿವೆ.

ರಷ್ಯಾದಿಂದ ಪಡೆದುಕೊಂಡ ಎಸ್​ 400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯ ಸಿಮ್ಯುಲೇಟರ್​​ಗಳನ್ನು ಬೆದರಿಕೆ ಒಡ್ಡಿರುವ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ನಿಯೋಜಿಸಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರಂಭದಲ್ಲಿ ಜಾರ್ಜ್ ಮೇಲೆ ಆರೋಪ ಮಾಡಿರುವ ವಿಡಿಯೋ ಇತ್ತು.

Sat Apr 16 , 2022
  ಹೊಸಪೇಟೆ: ಆರಂಭದಲ್ಲಿ ಜಾರ್ಜ್ ಮೇಲೆ ಆರೋಪ ಮಾಡಿರುವ ವಿಡಿಯೋ ಇತ್ತು. ಡೆತ್ ನೋಟ್ ಇತ್ತು. ಆವಾಗ ಅವರ ವಿರುದ್ಧ FIR ಆಗಿತ್ತಾ..? ಮುಚ್ಚಾಕುವ ಪ್ರಯತ್ನ ಆಗಿಲ್ವಾ..? ಕೋರ್ಟ್ ನಿಂದ ಆದೇಶ ಬಂದ್ ಮೇಲೆ Fir ಆಯ್ತು. ಅವರ ಮನೆಯವರು ಕೋರ್ಟ್‌ ಗೆ ಹೋಗಬೇಕಾಗ ಪರಿಸ್ಥಿತಿ ಬಂತು. ನಾವು ಮನೆಯವ ದೂರಿನ ಮೇಲೆ ಯಥಾವತ್ತಾಗಿ ತೆಗೆದುಕೊಂಡಿದ್ದೇವೆ ಎಂಬುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, […]

Advertisement

Wordpress Social Share Plugin powered by Ultimatelysocial