ಎಸ್. ಜಿ. ರಘುರಾಮ್ ಸುಗಮ ಸಂಗೀತ ಕಲಾವಿದ.

 

 

ಎಸ್. ಜಿ. ರಘುರಾಮ್ ಸುಗಮ ಸಂಗೀತ ಕಲಾವಿದರಾಗಿ, ಸುಗಮ ಸಂಗೀತ ಅಕಾಡೆಮಿ ಸ್ಥಾಪಕರಾಗಿ, ರಂಗ ಕಲಾವಿದರಾಗಿ, ಬರಹಗಾರರಾಗಿ ಹೀಗೆ ಮಹತ್ವದ ಸಾಧಕರಾಗಿ ಹೆಸರಾಗಿದ್ದವರು.ರಘುರಾಮ್ 1939ರ ಫೆಬ್ರವರಿ 28ರಂದು ಜನಿಸಿದರು. ಬಿ.ಎ, ಬಿಎಡ್ ಮತ್ತು ಬಿ.ಎಲ್. ಅವರ ಶೈಕ್ಷಣಿಕ ಸಾಧನೆಗಳು.ರಘುರಾಮ್ ಗಾಯಕರಾಗಿ, ವಕೀಲರಾಗಿ ಮತ್ತು ಆಕಾಶವಾಣಿ – ದೂರದರ್ಶನ ಜಾಹೀರಾತು ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. 5 ವರ್ಷಗಳ ಕಾಲ ಆಕಾಶವಾಣಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದರು.ರಘುರಾಮ್ ಸುಗಮ ಸಂಗೀತ ಕಲಾವಿದರಾಗಿ ರಾಜಸ್ಥಾನದ ಜೈಪುರದಲ್ಲಿ ನಡೆದ ಅಖಿಲ ಭಾರತ ಯುವ ಸಮ್ಮೇಳನದಲ್ಲಿ ಜಾನಪದ ಸಂಗೀತ ತಂಡದ ನಿರ್ದೇಶಕರಾಗಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅನೇಕ ಸುಂದರ ಸಂಗೀತ ರೂಪಕಗಳನ್ನು ಬರೆದು ನಿರೂಪಿಸುತ್ತಿದ್ದರು. ಆಕಾಶವಾಣಿ ಆಯೋಜಿಸಿದ ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು. ಆಕಾಶವಾಣಿ ಕೇಂದ್ರಗಳಲ್ಲಿ ಶ್ರೇಣೀಕೃತ ಸಂಗೀತ ಸಂಯೋಜಕರಾಗಿದ್ದರು. ಮೈಸೂರು, ಮಂಗಳೂರು, ಬೆಂಗಳೂರು, ನವದೆಹಲಿ ಆಕಾಶವಾಣಿ ಕೇಂದ್ರಗಳಿಂದ ಹಾಡಿದ್ದರು. ದೂರದರ್ಶನ ಕೇಂದ್ರಗಳಿಂದಲೂ ಇವರ ಸುಗಮ ಸಂಗೀತ ಕಾರ್ಯಕ್ರಮಗಳು ಪ್ರಸಾರಗೊಂಡಿದ್ದವು. ಐ ಬಿ ಎಚ್ ನಿರ್ಮಿಸಿದ ಕ್ಯಾಸೆಟ್‌ನಲ್ಲಿ ಇವರು ರಾಷ್ಟ್ರಕವಿ ಕುವೆಂಪು ಅವರ ಕವನಗಳನ್ನು ಹಾಡಿದ್ದರು. ಕರ್ನಾಟಕದ ಅರಣ್ಯ ಇಲಾಖೆಯು ನಿರ್ಮಿಸಿದ ಪರಿಸರದ ಮೇಲಿನ ಗೀತೆಗಳ ಕ್ಯಾಸೆಟ್‌ನಲ್ಲಿ ಹಾಡಿದ್ದರು. ಲಘು ಸಂಗೀತ ಮಾಂತ್ರಿಕ ದಿವಂಗತ ಪಿ. ಕಾಳಿಂಗರಾವ್ ಅವರೊಂದಿಗೆ ಹಾಡುವ ಸೌಭಾಗ್ಯವನ್ನು ಪಡೆದಿದ್ದರು. ಕರ್ನಾಟಕದ ಎಲ್ಲ ಕೇಂದ್ರಗಳಿಂದ ಪ್ರಸಾರವಾದ ‘ಝೇಂಕಾರ’ಕ್ಕೆ ಸಂಗೀತ ಸಂಯೋಜಿಸಿದರು.ರಘುರಾಮ್ ಮೈಸೂರು, ಬೆಂಗಳೂರು, ಹೊಸದಿಲ್ಲಿ, ಬರೋಡಾ, ಲಖನೌ, ಗದಗ, ರಾಯಚೂರು, ಹಾಸನ, ಶಿವಮೊಗ್ಗ, ನಂಜನಗೂಡು, ಗಿರಿಜಾ ಕಲ್ಯಾಣ, ಕೆ.ಆರ್.ನಗರ, ಟಿ.ನರಸೀಪುರ ಮತ್ತಿತರೆಡೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನೀಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದರು.ರಘುರಾಮ್ ಸುಗಮ ಸಂಗೀತವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಮೈಸೂರಿನಲ್ಲಿ ಸುಗಮ ಸಂಗೀತ ಅಕಾಡೆಮಿ ಎಂಬ ಟ್ರಸ್ಟ್ ಸ್ಥಾಪಿಸಿದರು. ಇದು ಕರ್ನಾಟಕದಲ್ಲಿ ಈ ರೀತಿಯ ಮೊದಲನೆಯದು. ಡಾ. ಎಂ. ಬಾಲಮುರಳೀಕೃಷ್ಣ, ಮುಂಬೈನ ಶ್ರೀ ಸುಧೀರ್ ಪಡ್ಕೆ, ಎಚ್.ಆರ್. ಲೀಲಾವತಿ, ಮೈಸೂರು ಅನಂತ ಸ್ವಾಮಿ, ಶ್ರೀ ಸಿ.ಅಶ್ವತ್, ಜಿ.ವಿ.ಅತ್ರಿ, ಶಿವಮೊಗ್ಗ ಸುಬ್ಬಣ್ಣ, ಮುದ್ದುಕೃಷ್ಣ, ಶಂಕರ್ ಶಾನಬಾಗ್, ಕುಸುಮಾ, ಡಾ.ಮಂಗಳಾ, ಡಾ.ರೋಹಿಣಿ ಮೋಹನ್, ಶ್ರೀಮತಿ. ರೇಖಾ ಸುರೇಶ್, ಮಂಜುಳಾ ಗುರುರಾಜ್ ಮುಂತಾದವರು ಅಕಾಡೆಮಿಯ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿಶ್ಚಿತ ಠೇವಣಿಗೆ' ಭರ್ಜರಿ ಬಡ್ಡಿ;

Wed Mar 1 , 2023
ಮುಂಬಯಿ: ಉಳಿತಾಯಕ್ಕೆ ಇದೇ ಸುಸಮಯ…! ಹಣದುಬ್ಬರ ಪ್ರಭಾವದಿಂದ ಭಾರತೀಯ ರಿಸರ್ವ್‌ ಬ್ಯಾಂಕ್‌ ರೆಪೋ ದರ ಹೆಚ್ಚಳ ಮಾಡಿದ್ದು, ಬ್ಯಾಂಕ್‌ಗಳಿಗೆ ಅನಿವಾರ್ಯವಾಗಿ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳಕ್ಕೂ ಅನುವು ಮಾಡಿಕೊಟ್ಟಿದೆ. ಹೀಗಾಗಿ, ರಾಷ್ಟ್ರೀಯ ಬ್ಯಾಂಕುಗಳು ಸೇರಿದಂತೆ ಬಹುತೇಕ ಎಲ್ಲ ಬ್ಯಾಂಕುಗಳು ನಿಶ್ಚಿತ ಠೇವಣಿ ಬಡ್ಡಿದರವನ್ನು ಸುಮಾರು ಶೇ.8ರ ಆಸುಪಾಸಿಗೆ ತೆಗೆದುಕೊಂಡು ಹೋಗಿವೆ. ವಿಶೇಷವೆಂದರೆ, ಹಲವಾರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಶೇ.8 […]

Advertisement

Wordpress Social Share Plugin powered by Ultimatelysocial