ಈ ಐದು ಪ್ರಯಾಣಿಕ ರೈಲುಗಳಿಂದ ಭಾರತೀಯ ರೈಲ್ವೇಗೆ 100 ಕೋಟಿ ರೂ. ಸಂಪಾದನೆ

ಭಾರತೀಯ ರೈಲ್ವೆಗೆ ಬರೀ ಈ ಐದು ಪ್ರಯಾಣಿಕ ರೈಲುಗಳೇ 100 ಕೋಟಿ ರೂ. ದುಡಿದುಕೊಡುತ್ತಿವೆ. ಕೋವಿಡ್ ಸಂಕಷ್ಟದ ನಡುವೆಯೂ ಪಶ್ಚಿಮ ಕೇಂದ್ರ ರೈಲ್ವೇ ಇಲಾಖೆ ತನ್ನ ಪ್ರಯಾಣಿಕ ರೈಲುಗಳಿಂದ ಸಿಕ್ಕಿರುವ ಆದಾಯದ ಕುರಿತು ಗಮನಾರ್ಹ ಸಂಗತಿಯೊಂದನ್ನು ಹೊರ ಹಾಕಿದೆ.

ಈ ಕುರಿತು ಪಶ್ಚಿಮ ರೈಲ್ವೇ ಪತ್ರಿಕಾ ಪ್ರಕಟಣೆಯೊಂದನ್ನು ಕೊಟ್ಟಿದ್ದು, ಅದರ ಪ್ರಕಾರ ಈ ಕೆಳಕಂಡ ರೈಲುಗಳು ಕಳೆದ ಎಂಟು ತಿಂಗಳ ಅವಧಿಯಲ್ಲಿ ಸಂಪಾದನೆ ಮಾಡಿರುವ ಮೊತ್ತಗಳು ಇಷ್ಟಿವೆ:

1. ರೈಲು ಸಂಖ್ಯೆ 22181 ಜಬಲ್ಪುರ – ನಿಜ಼ಾಮುದ್ದೀನ್ ಗೊಂಡವನ ಎಕ್ಸ್‌ಪ್ರೆಸ್‌ – 21.32 ಕೋಟಿ ರೂ.

2. ರೈಲು ಸಂಖ್ಯೆ 12437 ರೇವಾ – ಆನಂದ್ ವಿಹಾರ್ ಎಕ್ಸ್‌ಪ್ರೆಸ್‌ – 20.52 ಕೋಟಿ ರೂ.

3. ರೈಲು ಸಂಖ್ಯೆ 11447 ಜಬಲ್ಪುರ – ಹೌರಾ ಶಕ್ತಿಪುಂಜ್ ಎಕ್ಸ್‌ಪ್ರೆಸ್‌ – 19.93 ಕೋಟಿ ರೂ.

4. ರೈಲು ಸಂಖ್ಯೆ 12854 ಜಬಲ್ಪುರ – ದುರ್ಗ್ ಅಮರ್ಕಂಟಕ್ ಎಕ್ಸ್‌ಪ್ರೆಸ್‌ – 19.59 ಕೋಟಿ ರೂ.

5. ರೈಲು ಸಂಖ್ಯೆ 11464 ಜಬಲ್ಪುರ – ಸೋಮನಾಥ ಎಕ್ಸ್‌ಪ್ರೆಸ್‌ – 18.67 ಕೋಟಿ ರೂ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಧನಂಜಯ​ ನಟನೆಯ 'ಬಡವ ರಾಸ್ಕಲ್​' ಮೊದಲಾರ್ಧ ಹೇಗಿದೆ? ಇಲ್ಲಿದೆ ರಿಪೋರ್ಟ್​

Fri Dec 24 , 2021
Badava Rascal First Half Review: ಈಗಾಗಲೇ ರಿಲೀಸ್​ ಆಗಿದ್ದ ಟ್ರೇಲರ್​ನಿಂದ ಜನರಿಗೆ ‘ಬಡವ ರಾಸ್ಕಲ್​’ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿತ್ತು. ಹಾಗಾದರೆ ಹೇಗಿದೆ ‘ಬಡವ ರಾಸ್ಕಲ್​’ ಮೊದಲಾರ್ಧ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.ಧನಂಜಯ (Dhananjay) ಹಾಗೂ ಅಮೃತಾ ಅಯ್ಯಂಗಾರ್ (Amrutha Iyengar)​ ನಟನೆಯ ‘ಬಡವ ರಾಸ್ಕಲ್​’ (Badava Rascal)ಇಂದು (ಡಿಸೆಂಬರ್​ 24) ತೆರೆಗೆ ಬಂದಿದೆ. ಕ್ರಿಸ್​ಮಸ್​ ಪ್ರಯುಕ್ತ ಈ ಸಿನಿಮಾ ರಿಲೀಸ್​ ಆಗಿದೆ. ಇದೇ ಮೊದಲ ಬಾರಿಗೆ ಆಟೋ ಡ್ರೈವರ್​ […]

Advertisement

Wordpress Social Share Plugin powered by Ultimatelysocial