ಭಾರತದ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂದು 49ನೇ ವಸಂತಕ್ಕೆ ಕಾಲಿಟ್ಟಿದ್ದು, !

ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಇಂದು (ಭಾನುವಾರ) 49ನೇ ವಸಂತಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಸಚಿನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಮುಂಬೈ ಇಂಡಿಯನ್ಸ್‌ ಸೇರದಂತೆ ಐಪಿಎಲ್‌ ಫ್ರ್ಯಾಂಚೈಸ್‌ಗಳು, ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಸಚಿನ್ ಅವರಿಗೆ ಶುಭಾಶಯ ಕೋರಿದ್ದಾರೆ.

‘ಭಾರತದ ಶ್ರೇಷ್ಠ ಬ್ಯಾಟರ್‌, ಮನರಂಜನಾತ್ಮಕ ಸಾಂದರ್ಭಿಕ ಬೌಲರ್ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಐಸಿಸಿ ಟ್ವೀಟ್ ಮಾಡಿದೆ.

ಸಚಿನ್ ಅವರು 1973ರ ಏಪ್ರಿಲ್ 24ರಂದು ಮುಂಬೈನಲ್ಲಿ ಜನಿಸಿದರು. ಸಚಿನ್‌ ತಮ್ಮ 16ನೇ ವಯಸ್ಸಿನಲ್ಲಿ 1989ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ದಾಖಲೆಯ 34,357 ರನ್ ಪೇರಿಸಿದ್ದರು.

‘ಕ್ರಿಕೆಟ್ ದೇವರು’ ಎಂದೇ ಆರಾಧನೆಗೆ ಪಾತ್ರವಾಗಿರುವ ಸಚಿನ್ ಏಕದಿನದಲ್ಲಿ 18,426 ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ 15,921 ರನ್ ಗಳಿಸಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಬಾರಿಸಿದ ವಿಶ್ವದ ಮೊತ್ತ ಮೊದಲ ಹಾಗೂ ಏಕಮಾತ್ರ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೂ ಸಚಿನ್ ಭಾಜನವಾಗಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಪ್ರಪ್ರಥಮ ಬ್ಯಾಟ್ಸ್‌ಮನ್ ಎಂಬ ಶ್ರೇಯ ಅವರದ್ದಾಗಿದೆ. ಹೀಗೆ ‘ದಾಖಲೆಗಳ ಸರದಾರ’ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

2013ರಲ್ಲಿ ಸಚಿನ್‌ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಸದ್ಯ ಮುಂಬೈ ಇಂಡಿಯನ್ಸ್‌ ತಂಡದ ಮಾರ್ಗದರ್ಶಕರಾಗಿ ತೊಡಗಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾರತದ ಮೊದಲ ಬಹಿರಂಗವಾಗಿ ಸಲಿಂಗಕಾಮಿ ರಾಜಕುಮಾರ ಶಾಕ್ ಥೆರಪಿ ಪಡೆದರು, ಮಹಿಳೆಯನ್ನು ಮದುವೆಯಾಗಲು ಒತ್ತಾಯಿ!

Sun Apr 24 , 2022
ಭಾರತದ ಮೊದಲ ಬಹಿರಂಗ ಸಲಿಂಗಕಾಮಿ ರಾಯಲ್ ಆಗಿರುವ ಪ್ರಿನ್ಸ್ ಮನ್ವೇಂದ್ರ ಸಿಂಗ್ ಗೋಹಿಲ್ ಅವರೊಂದಿಗೆ ನಿಮಗೆ ಪರಿಚಯವಿರಬಹುದು. ಅವರ ಕಥೆಯು ನಿಮಗೆ ಅದೇ ಸಮಯದಲ್ಲಿ ಹೃದಯಾಘಾತ ಮತ್ತು ಸ್ಫೂರ್ತಿ ನೀಡುತ್ತದೆ. ಅವರ ಕುಟುಂಬ ಸೇರಿದಂತೆ ಸಮಾಜದಿಂದ ಹೆಚ್ಚಿನ ನಿರಾಕರಣೆ ಮತ್ತು ಹಿನ್ನಡೆಯನ್ನು ಅನುಭವಿಸಿದ ನಂತರ, ಜೊತೆಗೆ ದೈಹಿಕ ಚಿತ್ರಹಿಂಸೆ, ಅವರು ಈಗ ತಮ್ಮಂತಹ ಇತರರ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅವರು ಮಹಿಳೆಯೊಂದಿಗೆ ಅಲ್ಪಾವಧಿಯ ನಿಶ್ಚಿತಾರ್ಥದ ಮದುವೆಗೆ ಒತ್ತಾಯಿಸಲ್ಪಟ್ಟರು, ಹಿಂಸೆಯ ಪರಿವರ್ತನೆಯ ಚಿಕಿತ್ಸೆಯನ್ನು […]

Advertisement

Wordpress Social Share Plugin powered by Ultimatelysocial