ತ್ವಚೆಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತೆ ಕಡಲೆಹಿಟ್ಟು!

 

ಕಡಲೆ ಹಿಟ್ಟಿನಿಂದ ರುಚಿ ರುಚಿಯಾದ ತಿಂಡಿಗಳನ್ನು ಸವಿಯಬಹುದು. ಜೊತೆಗೆ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ‍್ಳಬಹುದು. ಈ ಟಿಪ್ಸ್ ಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ.*ಡ್ರೈ ಸ್ಕೀನ್ ಹೋಗಲಾಡಿಸಲು ಕಡಲೆಹಿಟ್ಟು ಬಹಳ ಉಪಯೋಗಕಾರಿ. ಇದಕ್ಕೆ ಹಾಲು, ಜೇನುತುಪ್ಪ, 1 ಚಿಟಿಕೆ ಅರಶಿಣ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ತೊಳೆಯಿರಿ.

ಹೀಗೆ ಮಾಡುತ್ತಾ ಬಂದರೆ ಚರ್ಮದ ತೇವಾಂಶ ಹೆಚ್ಚಿಸಿ ಡ್ರೈ ಸ್ಕಿನ್ ಸಮಸ್ಯೆ ದೂರವಾಗುತ್ತದೆ.

* ಆಯಿಲ್ ಸ್ಕೀನ್ ಹೋಗಲಾಡಿಸಲು ಕಡಲೆಹಿಟ್ಟಿಗೆ ಕೆಲವು ಹನಿ ರೋಸ್ ವಾಟರ್ ನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, ಪ್ಯಾಕ್ ಒಣಗಿದ ನಂತರ ಅದನ್ನು ತೊಳೆಯಿರಿ.

* ಮೊಡವೆ ಸಮಸ್ಯೆ ನಿವಾರಿಸಲು ಕಡಲೆ ಹಿಟ್ಟಿಗೆ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. ಇದರಿಂದ ಮೊಡವೆ ಸಮಸ್ಯೆ ದೂರವಾಗುತ್ತದೆ.

* ಮುಖದಲ್ಲಿ ಸೇರಿಕೊಂಡ ಕೊಳೆ, ಧೂಳನ್ನು ಹೋಗಲಾಡಿಸಲು ಕಡಲೆ ಹಿಟ್ಟಿನ ಜೊತೆಗೆ ಸೌತೆಕಾಯಿ ರಸವನ್ನು ಮಿಕ್ಸ್ ಮಾಡಿ ಹಚ್ಚಿ ಒಣಗಿದ ನಂತರ ತೊಳೆಯರಿ.

* ಕಪ್ಪಾದ ಮುಖದ ಕಾಂತಿ ಹೆಚ್ಚಿಸಲು ಕಡಲೆಹಿಟ್ಟು, ನಿಂಬೆ ರಸ, ಅರಶಿಣ, ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ನಂತರ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಚರ್ಮ ನಯವಾಗುವುದರ ಜೊತೆಗೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಮ್ಯಾ ಜೊತೆ ಸೆಲ್ಫಿಯಲ್ಲಿ ಇದ್ದ ಆ ಹುಡುಗ ಯಾರೆಂದು ಹೇಳಿದ ನಟಿ!

Thu May 12 , 2022
ನಟಿ ರಮ್ಯಾ ಇತ್ತೀಚೆಗೆ ಹಲವು ವಿಚಾರಗಳಲ್ಲಿ ಸುದ್ದಿ ಆಗುತ್ತಲೇ ಇರುತ್ತಾರೆ. ಹಲವು ದಿನಗಳ ಬಳಿಕ ಸಿನಿಮಾರಂಗಕ್ಕೆ ಸಂಬಂಧ ಪಟ್ಟ ವಿಚಾರಗಳಲ್ಲಿ ರಮ್ಯಾ ಸಕ್ರಿಯವಾಗಿದ್ದಾರೆ. ಹಾಗಾಗಿ ರಮ್ಯಾ ಏನೇ ಮಾಡಿದರು ಅದು ವೈರಲ್ ಅಗಿ ಬಿಡುತ್ತದೆ. ಅದರಲ್ಲೂ ಇತ್ತೀಚೆಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಮ್ಯಾ ಜೊತೆಗೆ ಕಾಣಿಸಿಕೊಂಡ ಹುಡುಗನ ಬಗ್ಗೆ ಹೆಚ್ಚಿನ ಚರ್ಚೆ ಹುಟ್ಟಿಕೊಂಡಿದ್ದವು. ಯುವಕನೊಬ್ಬನ ಜೊತೆಗೆ ಆಪ್ತವಾಗಿರುವ ಫೋಟೋವನ್ನು ರಮ್ಯಾ ಶೇರ್ […]

Advertisement

Wordpress Social Share Plugin powered by Ultimatelysocial